alex Certify ʼದೇವಸ್ಥಾನʼಕ್ಕೆ ಹೋಗೋದ್ರಿಂದ ಏನೆಲ್ಲ ಲಾಭವಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದೇವಸ್ಥಾನʼಕ್ಕೆ ಹೋಗೋದ್ರಿಂದ ಏನೆಲ್ಲ ಲಾಭವಿದೆ ಗೊತ್ತಾ….?

ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಭಾರತೀಯರ ಸಂಪ್ರದಾಯ ಈಗಿನದಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುವುದ್ರ ಹಿಂದೆ ಧಾರ್ಮಿಕ ಕಾರಣದ ಜೊತೆ ವೈಜ್ಞಾನಿಕ ಕಾರಣವೂ ಅಡಗಿದೆ. ದೇವಸ್ಥಾನಗಳಿಗೆ ಹೋಗುವುದ್ರಿಂದ ಅನೇಕ ಲಾಭಗಳಿವೆ.

ದೇವಸ್ಥಾನಗಳಿಗೆ ಹೋಗುವುದ್ರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ ಎಂದ್ರೆ ನಂಬಲೇಬೇಕು. ದೇವಸ್ಥಾನಗಳಿಗೆ ಬರಿಗಾಲಿನಲ್ಲಿ ನಾವು ಹೋಗ್ತೇವೆ. ಜೊತೆಗೆ ಅಲ್ಲಿ ಪ್ರದಕ್ಷಿಣೆ ಹಾಕ್ತೇವೆ. ಬರಿಗಾಲಿನಲ್ಲಿ ನಡೆಯುವುದ್ರಿಂದ ಕಾಲಿನ ಪಾಯಿಂಟ್ ಗಳಿಗೆ ಒತ್ತಡ ಬಿದ್ದು, ರಕ್ತಪರಿಚಲನೆ ಸುಲಭವಾಗುತ್ತದೆ.

ದೇವಸ್ಥಾನಗಳಿಗೆ ಹೋಗಿ ದೇವರ ಮೂರ್ತಿಯನ್ನು ನೋಡ್ತಿದ್ದಂತೆ ನಮ್ಮ ಏಕಾಗ್ರತೆ ಕೆಲ ಕಾಲ ಒಂದೇ ಕಡೆ ಕೇಂದ್ರೀಕೃತವಾಗುತ್ತದೆ. ಇದ್ರ ಜೊತೆಗೆ ಹಣೆ ಮೇಲೆ ಸಿಂಧೂರ ಇಟ್ಟುಕೊಳ್ತೇವೆ. ಇದು ಮೆದುಳಿನ ಮುಖ್ಯ ಭಾಗದ ಮೇಲೆ ಒತ್ತಡ ಬೀಳಲು ಕಾರಣವಾಗುತ್ತದೆ. ಇದ್ರಿಂದ ವ್ಯಕ್ತಿಯ ಏಕಾಗ್ರತೆ ಹೆಚ್ಚಾಗುತ್ತದೆ.

ದೇವಸ್ಥಾನಕ್ಕೆ ಭೇಟಿ ನೀಡಿದ ನಂತ್ರ ಗಂಟೆ, ಶಂಖ ಬಾರಿಸುತ್ತೇವೆ. ಇದ್ರ ಶಬ್ಧ ಕಿವಿಗಳಲ್ಲಿ ಕೆಲ ಸಮಯ ಇರುತ್ತದೆ. ಇದ್ರಿಂದ ಶರೀರಿದ ಕೆಲ ಅಂಗ ಆ್ಯಕ್ಟಿವ್ ಆಗುತ್ತದೆ. ಇದ್ರಿಂದ ಶಕ್ತಿ ಹಚ್ಚುತ್ತದೆ.

ದೇವರ ಆರಾಧನೆ ಸಮಯದಲ್ಲಿ, ಭಜನೆ ಸಮಯದಲ್ಲಿ ಚಪ್ಪಾಳೆ ತಟ್ಟುತ್ತೇವೆ. ಇದು ಕೈ ಬಿಂದುಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ. ಇದ್ರಿಂದ ದೇಹದ ಅಂಗ ಉತ್ತಮವಾಗಿ ಕೆಲಸ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಬಲಗೊಳಿಸುತ್ತದೆ.

ದೇವಸ್ಥಾನದಲ್ಲಿ ಸದಾ ಪೂಜೆ, ಹೋಮ ನಡೆಯುತ್ತಿರುತ್ತದೆ. ಕರ್ಪೂರ, ಧೂಪದ ಹೊಗೆಯಿಂದ ದೇವಸ್ಥಾನದ ಸುತ್ತಮುತ್ತಲಿರುವ ಬ್ಯಾಕ್ಟೀರಿಯ ನಾಶವಾಗುತ್ತದೆ. ಶುದ್ಧ ವಾತಾವರಣ ನಮ್ಮ ದೇಹ ಸೇರುವ ಜೊತೆಗೆ ಸೋಂಕಿನ ಆತಂಕ ಕಡಿಮೆಯಾಗುತ್ತದೆ.

ದೇವಸ್ಥಾನಕ್ಕೆ ಹೋದ ವೇಳೆ ಎಲ್ಲವನ್ನೂ ಮರೆತು ಮನಸ್ಸು ಶಾಂತವಾಗುವ ಜೊತೆಗೆ ಧೂಪದ ಹೊಗೆ ಒತ್ತಡ ಹಾಗೂ ಕೀಳರಿಮೆಯನ್ನು ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...