alex Certify ಮನೆಯಲ್ಲಿ ಸುಖ – ಶಾಂತಿ ನೆಲೆಸಲು ಅನುಸರಿಸಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ಅನುಸರಿಸಿ ಈ ಟಿಪ್ಸ್

ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಸುಖ, ದುಃಖ, ಕಷ್ಟದ ನಡುವೆ ತಲೆ ಎತ್ತಿದ ಸ್ವಂತ ಮನೆ ಎಂದ್ರೆ ಎಲ್ಲರಿಗೂ ಇಷ್ಟ. ಮನೆಯಲ್ಲಿ ಯಾವುದೇ ತೊಂದರೆ ಬರದಿರಲಿ ಎಂದು ಎಲ್ಲರೂ ಬಯಸ್ತಾರೆ.

ಆದ್ರೆ ಕೆಲವೊಮ್ಮೆ ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡಿರುತ್ತವೆ. ಇದರಿಂದಾಗಿ ಮನೆಯವರು ಜಗಳ, ಆರೋಗ್ಯ ಸಮಸ್ಯೆ, ಹಣಕಾಸಿನ ತೊಂದರೆ ಹೀಗೆ ಒಂದಲ್ಲ ಒಂದು ಸಮಸ್ಯೆ ಎದುರಿಸಬೇಕಾಗುತ್ತದೆ.

ಅನೇಕ ಪ್ರಯತ್ನ ಮಾಡಿದ್ರೂ ಮನೆ ಪರಿಸ್ಥಿತಿ ಬದಲಾಗದಾಗ ವಾಸ್ತುವಿನ ಮೊರೆ ಹೋಗುವುದು ಒಳಿತು. ಮನೆ ಬದಲಿಸುವಾಗ ಅಥವಾ ಕಟ್ಟುವಾಗ ವಾಸ್ತುವಿನ ಕೆಲ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮನೆಯೊಳಗೆ ಪ್ರವೇಶಿಸಿದ ನಂತ್ರ ಹಾನಿಯ ಬಗ್ಗೆ ಯೋಚಿಸುವ ಬದಲು, ಮನೆ ಪ್ರವೇಶಕ್ಕೆ ಮೊದಲು ಅದರ ಬಗ್ಗೆ ಗಮನ ನೀಡಿ. ಮನೆಯ ಡಿಸೈನ್ ಹೀಗಿದ್ದರೆ ಒಳ್ಳೆಯದು.

  • ಮನೆಯ ಮುಖ್ಯ ಬಾಗಿಲುಗಳು ಒಂದೇ ದಿಕ್ಕಿನಲ್ಲಿರಲಿ.‌
  • ಮನೆಯ ಮುಂದೆ ಅಥವಾ ಹಿಂದೆ ತುಳಸಿ ಸಸಿಯೊಂದಿರಲಿ.
  • ಮನೆಯ ಮುಂದೆ ಅಥವಾ ಪಕ್ಕದಲ್ಲಿ ಮೂರು ರಸ್ತೆಗಳು ಕೂಡಿರದಂತೆ ನೋಡಿಕೊಳ್ಳಿ.
  • ಮನೆಯ ಪ್ರವೇಶ ದ್ವಾರದ ಮೇಲೆ ಸ್ವಸ್ತಿಕ್ ಇರಲಿ.
  • ಮನೆಯ ಒಳಗೆ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಈಶಾನ್ಯದಲ್ಲಿ ದೇವರ ಮನೆ, ನೈರುತ್ಯದಲ್ಲಿ ಶೌಚಾಲಯ, ದಕ್ಷಿಣದಲ್ಲಿ ಇತರ ಸಾಮಾನುಗಳನ್ನು ಇಡುವ ಕೋಣೆ ಇರಲಿ.
  • ಮನೆಯಲ್ಲಿ ತುಂಬಾ ದೇವರ ಫೋಟೋ ಹಾಗೂ ಮೂರ್ತಿಗಳನ್ನು ಇಡಬೇಡಿ.
  • ಮನೆಯ ಒಳಗೆ ನಕಾರಾತ್ಮಕ ಎನಿಸುವ ವಸ್ತುಗಳನ್ನು ಇಡಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...