ಹಾಗಲಕಾಯಿ ಕಹಿ ಇರುತ್ತೆ ಅನ್ನೋ ಕಾರಣಕ್ಕೆ ಅನೇಕರು ಅದನ್ನು ತಿನ್ನೋದಿಲ್ಲ. ಆದರೆ ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಅದರ ಕಹಿಯನ್ನು ತೆಗೆದು ಪದಾರ್ಥ ಮಾಡಿದಲ್ಲಿ ರುಚಿಯಾಗಿಯೂ ಇರುತ್ತೆ. ಆರೋಗ್ಯಕ್ಕೆ ಒಳ್ಳೆಯದು.
ಹಾಗಲಕಾಯಿಯ ಮೇಲಿನ ಮುಳ್ಳಿನಂತಹ ಚರ್ಮವನ್ನು ತೆಗೆಯಬೇಕು. ಇದನ್ನು ತೆಗೆದಾಗ ಹಾಗಲಕಾಯಿ ಮೃದುವಾಗುತ್ತೆ. ಇದರಿಂದ ಕಹಿ ಅಂಶ ಹೊರಹೋಗುತ್ತೆ.
ಹಾಗಲಕಾಯಿಯನ್ನು ಕಟ್ ಮಾಡುವಾಗ ಅದರೊಳಗಿನ ದೊಡ್ಡ ಬೀಜಗಳನ್ನು ತೆಗೆಯಬೇಕು. ಇದರಿಂದ ಕಹಿ ಕಡಿಮೆಯಾಗುತ್ತದೆ.
ಹಾಗಲಕಾಯಿಯನ್ನು ಕತ್ತರಿಸಿದ ಬಳಿಕ ಉಪ್ಪಿನಲ್ಲಿ ನೆನೆಸಿಡಿ. ಇದರಿಂದ ಕಹಿ ಹೋಗುತ್ತದೆ.
ಉಪ್ಪಿನಲ್ಲಿ ನೆನೆಸಿಟ್ಟ ಬಳಿಕ ಹಾಗಲಕಾಯಿಯನ್ನು ಹಿಂಡಿ ನೀರನ್ನು ಬಸಿಯಬೇಕು.
ಮೊಸರಿನಲ್ಲಿ ಹಾಗಲಕಾಯಿ ಹೋಳುಗಳನ್ನು ಒಂದು ಗಂಟೆಯವರೆಗೆ ನೆನೆಸಿಡಬೇಕು.