ಬಂಜೆತನಕ್ಕೆ ಕಾರಣವಾಗಬಹುದು ‘ಥೈರಾಯಿಡ್’ ಸಮಸ್ಯೆ

ಥೈರಾಯಿಡ್ ದೇಹ ಕಂಟ್ರೋಲ್ ಮಾಡುವ ಪ್ರಮುಖ ಗ್ರಂಥಿಗಳಲ್ಲಿ ಒಂದಾಗಿದೆ. ಈಗಿನ ಆಧುನಿಕ ಜೀವನಶೈಲಿ, ಆಹಾರ ಕ್ರಮಗಳಿಂದ ಕೆಲವೊಮ್ಮೆ ಅನುವಂಶೀಯವಾಗಿ ಥೈರಾಯಿಡ್ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆಟ, ದೈಹಿಕ ಶ್ರಮದ ಬಗ್ಗೆ ಆಸಕ್ತಿ ತೋರದಿರುವುದು ಕೂಡ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದರೂ ಕೆಲವರು ನಿರ್ಲಕ್ಷ್ಯ ತೋರುತ್ತಾರೆ. ಮತ್ತೆ ಕೆಲವರು ಭಯದಿಂದ ವೈದ್ಯರ ಬಳಿಗೆ ಹೋಗುವುದಿಲ್ಲ. ಹಾಗಾಗಿ ಕೆಲವೊಮ್ಮೆ ಸಮಸ್ಯೆ ಜಾಸ್ತಿಯಾಗಿ ತೊಂದರೆ ಅನುಭವಿಸುವ ಪರಿಸ್ಥಿತಿ ಬರುತ್ತದೆ ಎನ್ನುತ್ತಾರೆ ವೈದ್ಯರು.

ಅಲ್ಲದೇ, ಥೈರಾಯಿಡ್ ತೊಂದರೆ ಇರುವವರಿಗೆ ಹೆಣ್ಣು ಮಕ್ಕಳಲ್ಲಿ ಅಂಡಾಣು ಉತ್ಪತ್ತಿ ಕಡಿಮೆಯಾಗುತ್ತದೆ. ಪುರುಷರಲ್ಲಿಯೂ ವೀರ್ಯಾಣು ಉತ್ಪತ್ತಿ ಮತ್ತು ಕೌಂಟಿಂಗ್ ನಲ್ಲಿ ವ್ಯತ್ಯಾಸಗಳು ಆಗಬಹುದಾದ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಥೈರಾಯಿಡ್ ಫಂಕ್ಷನಿಂಗ್ ಡಿಸ್ಟರ್ಬ್ ಆದರೆ, ಆರೋಗ್ಯದ ತೊಂದರೆ ಕಾಣಿಸಿಕೊಳ್ಳುತ್ತವೆ. ಜಾಸ್ತಿ ತೂಕವಿದ್ದವರು ತೀರಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ಬೇರೆ ಕಾಯಿಲೆಗಳೂ ಕೂಡ ಆವರಿಸಬಹುದಾದ ಸಾಧ್ಯತೆ ಇರುತ್ತದೆ. ಹಾಗಾಗಿ ಥೈರಾಯಿಡ್ ತೊಂದರೆ ಇರುವವರು ವೈದ್ಯರನ್ನು ಸಂಪರ್ಕಿಸಿ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು. ಚಿಕ್ಕಮಕ್ಕಳಿಂದ ಹಿಡಿದು ವೃದ್ಧಾಪ್ಯದವರಲ್ಲೂ ಥೈರಾಯಿಡ್ ತೊಂದರೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಲೈಫ್ ಸ್ಟೈಲ್ ಕೂಡ ಕಾರಣ ಎನ್ನುತ್ತಾರೆ ವೈದ್ಯರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read