ಅಕ್ಷಯ ತೃತೀಯ ತನ್ನದೆ ವಿಶೇಷತೆಗಳನ್ನು ಹೊಂದಿದೆ. ಈ ಬಾರಿ ಏ. ೨೩ ರಂದು ಅಕ್ಷಯ ತೃತೀಯ ಬಂದಿದೆ. ಅಕ್ಷಯ ತೃತೀಯದಂದು ಕೆಲವೊಂದು ವಸ್ತುಗಳನ್ನು ಮನೆಗೆ ತರಬೇಕು. ಆ ವಸ್ತುಗಳನ್ನು ಮನೆಗೆ ತಂದ್ರೆ ಲಕ್ಷ್ಮಿ ಪ್ರಸನ್ನಳಾಗಿ ಸದಾ ಮನೆಯಲ್ಲಿ ನೆಲೆಸಿರುತ್ತಾಳೆಂದು ನಂಬಲಾಗಿದೆ.
ಅಕ್ಷಯ ತೃತೀಯವೆಂದ್ರೆ ಅದು ಬಂಗಾರ-ಬೆಳ್ಳಿ ಖರೀದಿಗೆ ವಿಶೇಷ ದಿನ. ಸಾಮಾನ್ಯವಾಗಿ ಜನರು ಅಕ್ಷಯ ತೃತೀಯದಂದು ಬಂಗಾರ-ಬೆಳ್ಳಿ ಆಭರಣಗಳನ್ನು ಮನೆಗೆ ತರ್ತಾರೆ.
ಶಾಸ್ತ್ರಗಳ ಪ್ರಕಾರ ಅಕ್ಷಯ ತೃತೀಯದಂದು ಬಂಗಾರ ಅಥವಾ ಬೆಳ್ಳಿಯ ಲಕ್ಷ್ಮಿ ಚರಣದ ಪಾದುಕೆಯನ್ನು ಮನೆಗೆ ತನ್ನಿ. ಲಕ್ಷ್ಮಿ ಪಾದವನ್ನು ನಿಯಮಿತ ರೂಪದಲ್ಲಿ ಪೂಜೆ ಮಾಡಬೇಕು. ಯಾರು ಲಕ್ಷ್ಮಿ ಪಾದವನ್ನು ಪೂಜೆ ಮಾಡ್ತಾರೋ ಅವರಿಗೆ ಆರ್ಥಿಕ ಸಮಸ್ಯೆ ಕಾಡುವುದಿಲ್ಲವೆಂದು ನಂಬಲಾಗಿದೆ. ಲಕ್ಷ್ಮಿ ಪಾದುಕೆಯನ್ನು ಎಲ್ಲಿ ಸ್ಥಾಪನೆ ಮಾಡುತ್ತಾರೋ ಅಲ್ಲಿ ಸಮಸ್ಯೆ ಸುಳಿಯುವುದಿಲ್ಲ ಎನ್ನಲಾಗಿದೆ. ಇದ್ರ ಸ್ಥಾಪನೆಯಿಂದ ಧನ, ಆಯಸ್ಸು, ಸಂಪತ್ತು ವೃದ್ಧಿಯಾಗುತ್ತದೆ.
ಗ್ರಂಥಗಳ ಪ್ರಕಾರ ಲಕ್ಷ್ಮಿ ಪಾದದಲ್ಲಿ 16 ಶುಭ ಗುರುತುಗಳಿವೆಯಂತೆ. ಅಷ್ಟ ಲಕ್ಷ್ಮಿಯ ಎರಡೂ ಕಾಲಿನಲ್ಲಿರುವ 16 ಗುರುತುಗಳು 16 ಕಲೆಗಳ ಪ್ರತೀಕವಾಗಿದೆ. ಇದೇ ಕಾರಣಕ್ಕೆ ಲಕ್ಷ್ಮಿಯನ್ನು ಶೋಷಡಿ ಎಂದು ಕರೆಯುತ್ತಾರೆ. ಅಕ್ಷಯ ತೃತೀಯದಂದು ಲಕ್ಷ್ಮಿ ಪಾದುಕೆಯನ್ನು ತಂದು ಪೂಜೆ ಮಾಡುವುದ್ರಿಂದ ಎಂದೂ ಆರ್ಥಿಕ ನಷ್ಟವಾಗುವುದಿಲ್ಲವೆಂದು ನಂಬಲಾಗಿದೆ.