ಕೆನ್ನೆಗೊಂದು, ಗಲ್ಲಕೊಂದು, ತುಟಿಗೊಂದು ಸಿಹಿ ಮುತ್ತು. ಯಸ್ ಚಿಕ್ಕವರಿಂದ ಹಿಡಿದು ಮುದುಕರ ತನಕ ಎಲ್ಲರೂ ತಮ್ಮ ಪ್ರೀತಿಯನ್ನು ಸಿಹಿ ಮುತ್ತಿನ ಮೂಲಕ ವ್ಯಕ್ತಪಡಿಸ್ತಾರೆ. ಈ ಮುತ್ತಿನ ಮತ್ತೇ ಹಾಗೆ. ಎಂತ ಸಿಟ್ಟನ್ನೂ ಅರೆ ಕ್ಷಣದಲ್ಲಿ ಕರಗಿಸುವಂತಹದ್ದು.
ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನ. ಜನರು ಸಾಮಾನ್ಯವಾಗಿ ತಮ್ಮ ಪ್ರೀತಿಯನ್ನು ತೋರಿಸಲು ಮುತ್ತಿನ ಮೊರೆ ಹೋಗ್ತಾರೆ. ತಮ್ಮ ಪ್ರೀತಿಯನ್ನು ಜನರು ಬೇರೆ ಬೇರೆ ವಿಧದಲ್ಲಿ ವ್ಯಕ್ತಪಡಿಸ್ತಾರೆ. ಕೆಲವರು ಉಡುಗೊರೆ ನೀಡಿ, ಮತ್ತೆ ಕೆಲವರು ಮುತ್ತು ಕೊಟ್ಟು. ಮುತ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಕವಿತೆಗಳಿವೆ. ಅನೇಕರು ಇದರ ಬಗ್ಗೆ ಬರೆದಿದ್ದಾರೆ. ಆದ್ರೆ ಅನೇಕರಿಗೆ ತಿಳಿದಿಲ್ಲ ಮುತ್ತು ಕೂಡ ಒಂದು ಭಾಷೆ.
ಮುತ್ತಿಗೆ ಸಾವಿರಾರು ಅರ್ಥಗಳಿವೆ. ಎಲ್ಲಿ ಮುತ್ತು ಕೊಟ್ಟರೆ ಏನರ್ಥ ಎಂಬುದು ನಿಮಗೆ ಗೊತ್ತಾ?
ಕೆನ್ನೆಗೆ ಕೊಡುವ ಮುತ್ತು ಸ್ನೇಹದ ಸಂಕೇತ. ಇದು ಸಹಕಾರ ಮತ್ತು ಪರಿಪೂರ್ಣತೆಯನ್ನು ಪ್ರತಿಬಿಂಬಿಸುತ್ತದೆ. ಆಕರ್ಷಣೆಯ ಸಂಕೇತವೂ ಹೌದು.
ತುಟಿಗೆ ಮುತ್ತು ನೀಡುವುದು ಉತ್ಸಾಹವನ್ನು ಪ್ರದರ್ಶಿಸುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಉತ್ತಮ ವಿಧಾನವಾಗಿದೆ.
ಕುತ್ತಿಗೆಯ ಬಳಿ ಮುತ್ತು ಕೊಡುವುದು ಅನ್ಯೋನ್ಯತೆಯ ಪ್ರತಿಬಿಂಬ. ದೈಹಿಕ ಆಕರ್ಷಣೆಯನ್ನು ಒತ್ತಿ ಹೇಳಲು ಉತ್ತಮ ಮಾರ್ಗವಾಗಿದೆ.
ನಿಮ್ಮ ಆದ್ಯತೆಯನ್ನು ವ್ಯಕ್ತಪಡಿಸಲು ಕೈಗಳಿಗೆ ಮುತ್ತು ಕೊಡುತ್ತಾರೆ. ಇದು ನಂಬಿಕೆಯ ಸಂಕೇತವೂ ಆಗಿದೆ.