ನೈರ್ಮಲ್ಯದ ದೃಷ್ಟಿಯಿಂದ ಒಂದೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಸ್ನಾನ ಒಳ್ಳೆಯದು. ಪ್ರತಿಯೊಬ್ಬರೂ ಪ್ರತಿ ದಿನ ಸ್ನಾನ ಮಾಡಬೇಕು. ಸ್ನಾನದ ವಿಚಾರದಲ್ಲಿ ಆಲೋಚನೆಗಳು ಬೇರೆ ಬೇರೆಯಾಗಿವೆ. ಕೆಲವರು ಬೆಳಿಗ್ಗೆ ಸ್ನಾನ ಮಾಡಿದ್ರೆ ಮತ್ತೆ ಕೆಲವರು ರಾತ್ರಿ ಸ್ನಾನ ಮಾಡಿ ಮಲಗುತ್ತಾರೆ.
ಬೆಳಿಗ್ಗೆ ಸಮಯದ ಅಭಾವದಿಂದಾಗಿ ರಾತ್ರಿ ಸ್ನಾನ ಮಾಡಿ ಮಲಗುವವರ ಸಂಖ್ಯೆ ಹೆಚ್ಚಿದೆ. ರಾತ್ರಿ ಸ್ನಾನ ಮಾಡಿದ್ರೆ ಒಳ್ಳೆಯದಾ ಇಲ್ಲ ಬೆಳಿಗ್ಗೆ ಮಾಡಿದ್ರೆ ಒಳ್ಳೆಯದಾ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.
ಹಿಂದೂ ಧರ್ಮದ ಪ್ರಕಾರ ಬೆಳಗ್ಗಿನ ಸ್ನಾನ ಬಹಳ ಒಳ್ಳೆಯದು. ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿದ್ರೆ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ನಂಬಲಾಗಿದೆ. ವಿಜ್ಞಾನಿಗಳು ಕೂಡ ಇದನ್ನೇ ಹೇಳ್ತಾರೆ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ್ರೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆಯಂತೆ. ಸ್ನಾನ ಮಾಡುವುದ್ರಿಂದ ದೇಹ ಉತ್ಸಾಹಿತಗೊಳ್ಳುತ್ತದೆ. ದಿನದ ಕೆಲಸವನ್ನು ಆರಾಮವಾಗಿ ಉತ್ಸಾಹದಿಂದ ಮುಗಿಸಲು ಸಾಧ್ಯವಾಗುತ್ತದೆ.
ರಾತ್ರಿ ಸ್ನಾನ ಮಾಡೋದು ಕೆಟ್ಟದೇನಲ್ಲ. ಬೆಳಿಗ್ಗೆನಿಂದ ಕೆಲಸ ಮಾಡಿ ಸುಸ್ತಾದವರಿಗೆ ರಾತ್ರಿ ಸ್ನಾನ ಹಿತವೆನಿಸುತ್ತದೆ. ಸ್ನಾನ ಮಾಡುವುದ್ರಿಂದ ಬೆವರು, ತುರಿಕೆ, ಕಿರಿಕಿರಿ ಕಡಿಮೆಯಾಗಿ ಸುಖಕರ ನಿದ್ರೆ ನಿಮ್ಮನ್ನು ಆವರಿಸುತ್ತದೆ. ರಾತ್ರಿ ಯಾವಾಗ್ಲೂ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.
ಭಾರತದಂತಹ ದೇಶದಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ಎರಡೂ ಬಾರಿ ಸ್ನಾನ ಮಾಡುವುದು ಒಳ್ಳೆಯದು. ಬೆಳಿಗ್ಗೆ ಸ್ನಾನ ಮನಸ್ಸು, ದೇಹವನ್ನು ಫ್ರೆಶ್ ಮಾಡಿದ್ರೆ ರಾತ್ರಿ ಸ್ನಾನ ಸುಖ ನಿದ್ರೆಗೆ ಕಾರಣವಾಗುತ್ತದೆ. ಇದ್ರಿಂದ ಒತ್ತಡ ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ.