
ಹೆಚ್ಚುತ್ತಿರುವ ದೇಹದ ತೂಕದಿಂದಾಗಿ ಚಿಂತಿತರಾಗಿದ್ದೀರಾ. ತೂಕ ಇಳಿಸಿಕೊಳ್ಳಲು ವಿಪರೀತ ಹಣ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲವೆಂದು ದುಃಖಿತರಾಗಿದ್ದೀರಾ. ಚಿಂತೆ ಬೇಡ ಅದಕ್ಕೆ ಸುಲಭ ಪರಿಹಾರ ದೊರೆತಿದೆ. ಒಂದು ರೂಪಾಯಿ ಖರ್ಚಿಲ್ಲದೇ ನೀವು ತೂಕ ಕಡಿಮೆ ಮಾಡಿಕೊಳ್ಳಬಹುದೆಂದು ತಜ್ಞರು ಹೇಳಿದ್ದಾರೆ.
ಹೌದು. ಈ ಕುರಿತು ಅಧ್ಯಯನ ನಡೆಸಿರುವ ಬರ್ಮಿಗ್ ಹ್ಯಾಂ ವಿಶ್ವವಿದ್ಯಾನಿಲಯದ ಅಧ್ಯಾಪಕರು ತೂಕ ಕಡಿಮೆ ಮಾಡಿಕೊಳ್ಳಲು ಸರಳ ಹಾಗೂ ಸುಲಭ ಉಪಾಯವೊಂದನ್ನು ಸೂಚಿಸಿದ್ದಾರೆ. ಇದಕ್ಕಾಗಿ ಅವರು 12 ವಾರಗಳ ಕಾಲ ಪ್ರಯೋಗವನ್ನೂ ಮಾಡಿ ನೋಡಿ ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ.
ದಿನ ನಿತ್ಯ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಉಪಹಾರ ಮತ್ತು ಊಟ ಸೇವಿಸುವ ಅರ್ಧ ತಾಸಿಗೂ ಮುನ್ನ 500 ಎಂ.ಎಲ್. ನೀರು ಕುಡಿದು ಬಳಿಕ ಊಟ ಮಾಡಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದೆಂದು ಅವರು ಹೇಳಿದ್ದಾರೆ. ಹಾಗೆಂದು ಇದನ್ನೇ ಮುಖ್ಯವಾಗಿಸಿಕೊಳ್ಳಬೇಕೆಂದಿಲ್ಲ. ಇದರ ಜೊತೆಗೆ ವಾಕಿಂಗ್, ತರಕಾರಿ ಸೇವಿಸುವುದು ಮೊದಲಾದವನ್ನು ಮಾಡುವ ಮೂಲಕ ಇನ್ನಷ್ಟು ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ. ಇದ್ಯಾವುದಕ್ಕೂ ಸಮಯ ಸಿಗದಿದ್ದವರು ಮೇಲೆ ತಿಳಿಸಿರುವ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳಬಹುದಾಗಿದೆ.