ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ಇಂದಿನ ದಿನಮಾನದಲ್ಲಿ ವ್ಯಾಯಾಮ ಮಾಡಬೇಕಾದದ್ದು ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ ಕೂಡ. 5 ಬೆಸ್ಟ್ ವ್ಯಾಯಾಮಗಳು ಯಾವವು ಅನ್ನೋದ್ರ ಬಗ್ಗೆ ಹಾರ್ವರ್ಡ್ ಆರೋಗ್ಯ ವಿದ್ಯಾಲಯದ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.
ಈಜುವುದು ಒಳ್ಳೆಯ ಮತ್ತು ಸಂಪೂರ್ಣ ವ್ಯಾಯಾಮ. ಇದರಿಂದ ದೇಹಕ್ಕೆ ವರ್ಕೌಟ್ ಆಗೋದಲ್ಲದೇ ಮನಸ್ಸೂ ರಿಲ್ಯಾಕ್ಸ್ ಆಗುತ್ತೆ. ಇದರಿಂದ ಡಿಪ್ರೆಷನ್ ಕಡಿಮೆಯಾಗುತ್ತೆ. ಮೂಡ್ ಹದಕ್ಕೆ ಬರುತ್ತೆ ಜೊತೆಗೆ ಒತ್ತಡವೂ ನಿವಾರಣೆಯಾಗುತ್ತೆ.
ಥಾಯ್ ಚೈ ವ್ಯಾಯಾಮ, ಇದೊಂಥರಾ ಚೀನಾದ ಸಮರ ಕಲೆಯಂಥದ್ದು. ಇದರಲ್ಲಿ ಮುಖ್ಯವಾಗಿ ವ್ಯಾಯಾಮ ಮಾಡುತ್ತಿರುವಾಗಲೇ ನಿಧಾನವಾಗಿ ಉಸಿರಾಟದ ಮೇಲೆ ಹಿಡಿತವಿರಬೇಕು. ಈ ವ್ಯಾಯಾಮ ವಯಸ್ಸಾದವರಿಗೆ ಒಳ್ಳೆಯದು.
ಶಕ್ತಿಯುತ ವ್ಯಾಯಾಮ, ಇದು ಭಾರವಾದ ವಸ್ತುಗಳಾದ ಡಂಬಲ್ಸ್ ಅಥವಾ ಬಾರ್ಬೆಲ್ಸ್, ಎಲಾಸ್ಟಿಕ್ ಬಾಂಡ್ಸ್, ಭಾರವಾದ ಆಂಕಲ್ ಕಪ್ಸ್ ಗಳನ್ನು ಉಪಯೋಗಿಸಿಕೊಂಡು ಮಾಡುವ ವ್ಯಾಯಾಮ. ಇದರಿಂದ ದೇಹದ ಮಾಂಸಖಂಡಗಳು ಬಲಗೊಳ್ಳುತ್ತೆ.
ವಾಕಿಂಗ್ ಅತ್ಯುತ್ತಮ ವ್ಯಾಯಾಮ. ದಿನವೂ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದರಿಂದ ದೇಹಕ್ಕೆ ಹಾಗೂ ಮನಸ್ಸಿಗೆ ಉಲ್ಲಾಸ ಸಿಗುತ್ತದೆ.
ಕೆಗೆಲ್ ವ್ಯಾಯಾಮ, ಇದು ಮಹಿಳೆ ಹಾಗೂ ಪುರುಷ ಇಬ್ಬರಿಗೂ ಒಳ್ಳೆಯದು. ಮಸಲ್ಸ್ ಅನ್ನು ಶಕ್ತಿಯುತವನ್ನಾಗಿ ಮಾಡುತ್ತೆ ಈ ವ್ಯಾಯಾಮ. ದಿನವೊಂದಕ್ಕೆ 4 ರಿಂದ 5 ಬಾರಿ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತೆ.