ಜೀವನದಲ್ಲಿ ಯಶಸ್ಸು ಹಾಗೂ ಪ್ರೀತಿ ಪಡೆಯಲು ಜನರು ಏನೆಲ್ಲ ಮಾಡ್ತಾರೆ. ಕೆಲವರು ದುಬಾರಿ ಕ್ರಮಗಳನ್ನು ಪಾಲಿಸ್ತಾರೆ. ಆದ್ರೆ ನಿಮ್ಮ ಮನೆಯಲ್ಲಿರುವ ಸಣ್ಣ ಮೇಣದ ಬತ್ತಿ ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಮನೆಯ ಕತ್ತಲನ್ನು ಹೊಡೆದೋಡಿಸಿ ಬೆಳಕು ನೀಡುವ ಜೊತೆಗೆ ಮೇಣದ ಬತ್ತಿಯಿಂದ ಅನೇಕ ಉಪಯೋಗಗಳಿವೆ. ಮೇಣದ ಬತ್ತಿ ಹಚ್ಚುವಾಗ ಅದ್ರ ಬಣ್ಣ ಹಾಗೂ ದಿಕ್ಕಿನ ಬಗ್ಗೆ ಗಮನ ನೀಡಬೇಕಾಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ.
ಮನೆಯ ಈಶಾನ್ಯ ಮೂಲೆಯಲ್ಲಿ ಹಸಿರು ಬಣ್ಣದ ಮೇಣದ ಬತ್ತಿಯನ್ನು ಹಚ್ಚಬೇಕು. ಕೆಟ್ಟ ಶಕ್ತಿಗಳ ಪ್ರವೇಶವನ್ನು ಇದು ತಡೆಯುತ್ತದೆ. ಓದಲು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಮನೆಯ ನೈರುತ್ಯ ಭಾಗದಲ್ಲಿ ಗುಲಾಬಿ ಅಥವಾ ಹಳದಿ ಬಣ್ಣದ ಮೇಣದಬತ್ತಿಯನ್ನು ಹಚ್ಚಿ. ಇದ್ರಿಂದ ಮನೆಯಲ್ಲಿ ಗಲಾಟೆಯಾಗುವುದಿಲ್ಲ. ಕುಟುಂಬಸ್ಥರ ಮಧ್ಯೆ ಪ್ರೀತಿ ಬೆಳೆಯುತ್ತದೆ.
ಹಣದ ಕೊರತೆ ಕಡಿಮೆ ಮಾಡಲು ಮನೆಯ ದಕ್ಷಿಣ ಭಾಗದಲ್ಲಿ ಕೆಂಪು ಮೇಣದ ಬತ್ತಿಯನ್ನು ಹಚ್ಚಿ.
ಮನೆ ಶಾಂತಿ-ಸಮೃದ್ಧಿಗಾಗಿ ಆಗ್ನೇಯ ಭಾಗದಲ್ಲಿ ನೀಲಿ ಬಣ್ಣದ ಮೇಣದಬತ್ತಿಯನ್ನು ಹಚ್ಚಬೇಕು.
ಮನೆಯ ಉತ್ತರ ಭಾಗದಲ್ಲಿ ಬಿಳಿ ಬಣ್ಣದ ಮೇಣದ ಬತ್ತಿ ಹಚ್ಚುವುದ್ರಿಂದ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ.