alex Certify ಚಳಿಗಾಲದಲ್ಲಿ ಬಿರುಕು ಬಿಟ್ಟ ಪಾದಕ್ಕೆ ಮನೆಯಲ್ಲಿಯೇ ಇದೆ ʼಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಬಿರುಕು ಬಿಟ್ಟ ಪಾದಕ್ಕೆ ಮನೆಯಲ್ಲಿಯೇ ಇದೆ ʼಮದ್ದುʼ

ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಸುಂದರ ಮುಖ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮೇಕಪ್, ಪಾರ್ಲರ್ ಒಂದಾ, ಎರಡಾ? ಆದ್ರೆ ನಿಮ್ಮ ಪಾದ ಹೇಗಿದೆ ಅಂತಾ ನೋಡಿಕೊಂಡಿದ್ದೀರಾ..?

ಸಾಕಷ್ಟು ಮಂದಿ ಮುಖಕ್ಕೆ ಕೊಡುವ ಮಹತ್ವವನ್ನು ದೇಹದ ಇತರ ಭಾಗಗಳಿಗೆ ನೀಡುವುದಿಲ್ಲ. ಬೇರೆಯವರು ಹೆಚ್ಚಾಗಿ ನೋಡುವುದು ಮುಖವನ್ನ ನಿಜ. ಹಾಗಂತ ಪಾದಗಳ ಬಗ್ಗೆಯೂ ಗಮನ ಹರಿಸ್ತಾರೆ. ನಿಮ್ಮ ಸೌಂದರ್ಯಕ್ಕೆ ನಿಮ್ಮ ಪಾದಗಳೇ ಕಪ್ಪು ಚುಕ್ಕಿಯಾಗಬಹುದು. ಸೌಂದರ್ಯವೊಂದೆ ಅಲ್ಲ ಪಾದ ಬಿರುಕುಬಿಟ್ಟು ಉರಿಯಾಗುವುದರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಅನೇಕರಿಗೆ ಪಾದದ ರಕ್ಷಣೆ ಮಾಡುವುದು ಕಷ್ಟದ ಹಾಗೂ ಪರಿಶ್ರಮದ ಕೆಲಸ. ಉಳಿದ ಕಾಲದಲ್ಲಿ ಬಿಡಿ, ಚಳಿಗಾಲದಲ್ಲಿ ಕಾಲಿನ ಬಗ್ಗೆ ನೀವು ಅಲಕ್ಷ ಮಾಡುವುದು ಸರಿಯಲ್ಲ. ಒಂದು ನಿಂಬೆ ಹಣ್ಣು ನಿಮ್ಮ ಕಾಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಪಾದಗಳು ಚಳಿಗಾಲದಲ್ಲಿ ಒಡೆಯುವುದು ಸಾಮಾನ್ಯ. ಕೆಲವರಿಗೆ ಚರ್ಮ ಬಿರುಕು ಬಿಟ್ಟು ರಕ್ತ ಬರುತ್ತಿರುತ್ತದೆ. ಇಂತವರು ಪಾದವನ್ನು ಸ್ವಚ್ಛಗೊಳಿಸಿ, ನಿಂಬು ರಸವನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಆಲಿವ್ ಆಯಿಲ್ ಕೂಡ ಬಿರುಕಿನ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಕಂದು ಸಕ್ಕರೆ, ಆಲಿವ್ ಆಯಿಲ್, ನಿಂಬು ರಸ ಬೆರೆಸಿ ಅದನ್ನು ಪಾದಗಳಿಗೆ ಹಚ್ಚುತ್ತ ಬಂದರೆ ಒಳ್ಳೆಯದು.

ಪಾದಗಳ ಕಾಂತಿ ಹೆಚ್ಚಿಸಲು ರಾಮಬಾಣ ನಿಂಬೆ ಹಣ್ಣು. ನಿಂಬೆ ಹಣ್ಣಿನಲ್ಲಿ ಆಮ್ಲೀಯ ಗುಣ ಹಾಗೂ ಜೀವಸತ್ವ ಸಿ ಇರುತ್ತದೆ. ಇವು ಉಗುರು ಹಾಗೂ ಪಾದಗಳು ಕಾಂತಿಯುತವಾಗಲು ನೆರವಾಗುತ್ತವೆ. ಮೂರು ನಿಂಬೆ ಹಣ್ಣನ್ನು ತೆಗೆದುಕೊಂಡು ಅದರ ರಸವನ್ನು ತೆಗೆಯಿರಿ. ಉಗುರು ಬೆಚ್ಚಗಿನ ನೀರಿಗೆ ಈ ರಸವನ್ನು ಹಾಕಿ. ಬೇಕಾದಲ್ಲಿ ರೋಸ್ ವಾಟರ್ ಹಾಕಿ, ನಿಮ್ಮ ಪಾದಗಳನ್ನು ಸ್ವಲ್ಪ ಸಮಯಗಳ ಕಾಲ ಅದರೊಳಗೆ ಇಟ್ಟುಕೊಳ್ಳಿ. ಇದರಿಂದ ಆಯಾಸ ಕಡಿಮೆಯಾಗುವುದಲ್ಲದೆ, ಪಾದಗಳು ಕಾಂತಿಯುತವಾಗುತ್ತವೆ.

ಜೇನಿನ ಹನಿ ಕೂಡ ಪಾದಗಳಿಗೆ ಒಳ್ಳೆಯದು. ಬೆಚ್ಚಗಿನ ನೀರಿಗೆ ಕೆಲ ಹನಿ ಜೇನು ತುಪ್ಪ ಸೇರಿಸಿ, ನಿಂಬೆ ರಸವನ್ನು ಹಾಕಿ ಅದರೊಳಗೆ ಕೆಲ ಸಮಯ ಪಾದಗಳನ್ನು ಇಟ್ಟುಕೊಳ್ಳಬೇಕು. ನಿಂಬು ರಸ ಹಾಗೂ ಜೇನು ತುಪ್ಪದಿಂದ ನಿಮ್ಮ ಪಾದಗಳಿಗೆ ಮಜಾಜ್ ಕೂಡ ಮಾಡಿಕೊಳ್ಳಬಹುದು.

ಕೆಲವರ ಪಾದಗಳಿಂದ ವಾಸನೆ ಬರುತ್ತಿರುತ್ತದೆ. ಇಂತವರ ಜೊತೆ ಇರಲು ಯಾರೂ ಇಚ್ಛಿಸುವುದಿಲ್ಲ. ಹಾಗಾಗಿ ಪಾದಗಳ ವಾಸನೆ ಹೋಗಲಾಡಿಸಲು ನಿಂಬು ಮದ್ದು. ನಿಂಬು ರಸವನ್ನು ಬೆಚ್ಚಗಿನ ನೀರಿಗೆ ಹಾಕಿ, ಸ್ವಲ್ಪ ಸಮಯ ಕಾಲನ್ನು ಅದರಲ್ಲಿಟ್ಟುಕೊಳ್ಳಬೇಕು. ದಿನನಿತ್ಯ ಮಾಡಿದರೆ ಕ್ರಮೇಣ ವಾಸನೆ ಕಡಿಮೆಯಾಗುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...