ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಗೋವಾ ಚಿಕನ್ ಮಸಾಲದ ಕುರಿತ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಕೋಳಿ ಮಾಂಸ – ಅರ್ಧ ಕೆ.ಜಿ., ಮೆಣಸಿನ ಪುಡಿ -1 ಟೀ ಸ್ಪೂನ್, ಅರಿಶಿನ – ಅರ್ಧ ಟೀ ಸ್ಪೂನ್, ತೆಂಗಿನ ತುರಿ – ಅರ್ಧ ಕಪ್, ಈರುಳ್ಳಿ -2, ಬೆಳ್ಳುಳ್ಳಿ -1, ಶುಂಠಿ – ಸ್ವಲ್ಪ, ನಿಂಬೆಹಣ್ಣು – 1, ಕರಿಮೆಣಸಿನ ಪುಡಿ –ಅರ್ಧ ಸ್ಪೂನ್, ಒಣಮೆಣಸಿನ ಕಾಯಿ – 6, ಧನಿಯಾ – ಅರ್ಧ ಸ್ಪೂನ್, ಮೆಂತ್ಯ – ಅರ್ಧ ಸ್ಪೂನ್, ಜೀರಿಗೆ – 1 ಸ್ಪೂನ್, ಗಸಗಸೆ – 2 ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:
ಮಾಂಸವನ್ನು ತೊಳೆದುಕೊಂಡು ಚಿಕ್ಕ ತುಂಡುಗಳಾಗಿ ಮಾಡಿ ಅದಕ್ಕೆ ಉಪ್ಪು, ನಿಂಬೆರಸ ಸೇರಿಸಿ ಒಂದು ಕಡೆ ಇಡಿ. ತೆಂಗಿನ ತುರಿ, ಗಸಗಸೆ ರುಬ್ಬಿಕೊಳ್ಳಿರಿ.
ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ರುಬ್ಬಿಕೊಂಡ ಈರುಳ್ಳಿ ಮಿಶ್ರಣವನ್ನು ಸೇರಿಸಿರಿ. ಕೆಂಪು ಬಣ್ಣ ಬರುವವರೆಗೂ ಹುರಿದು ಬಳಿಕ ಕೋಳಿ ಮಾಂಸದ ತುಂಡುಗಳನ್ನು ಹಾಕಿರಿ.
ಹದವಾಗಿ ಹುರಿದುಕೊಂಡು ರುಬ್ಬಿದ ಮೆಣಸಿನಕಾಯಿ ಮಿಶ್ರಣ, ಉಳಿದ ಎಲ್ಲಾ ಮಸಾಲೆ ಪದಾರ್ಥಗಳನ್ನು ಸೇರಿಸಿ. ಸಣ್ಣದಾದ ಉರಿಯಲ್ಲಿ ಬೇಯಿಸಿರಿ.
ನಂತರ ರುಬ್ಬಿದ ತೆಂಗಿನ ಮಿಶ್ರಣ, ವಿನಿಗರ್ ಸೇರಿಸಿ ಮೆಣಸಿನ ಪುಡಿ, ಅರಿಶಿನ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿರಿ. ಸ್ವಲ್ಪ ಸಮಯದ ಬಳಿಕ ಕೆಳಗೆ ಇಳಿಸಿ.