ಜಾತಕದಲ್ಲಿ ದೋಷ, ಗ್ರಹ ದೋಷ ಅಥವಾ ತಿಳಿಯದೆ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗುತ್ತದೆ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ಟರೂ ಯಶಸ್ಸು ಸಿಗುವುದಿಲ್ಲ. ಜ್ಯೋತಿಷ್ಯದಲ್ಲಿ ಹೇಳಿದ ಕೆಲ ಉಪಾಯಗಳನ್ನು ಅನುಸರಿಸಿದ್ರೆ ಅದೃಷ್ಟ ಒಲಿದು ಬರುತ್ತದೆ. ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನು ಸೇರಿಸಿ ಸ್ನಾನ ಮಾಡಿದ್ರೆ ದುರಾದೃಷ್ಟ ದೂರವಾಗಿ ಯಶಸ್ಸು, ಸಂಪತ್ತು, ಸಂತೋಷ ಲಭಿಸುತ್ತದೆ.
ನೀರಿಗೆ ಏಲಕ್ಕಿ-ಕೇಸರಿ ಬೆರೆಸಿ ಸ್ನಾನ ಮಾಡಿದಲ್ಲಿ ಕೆಟ್ಟ ದಿನಗಳು ದೂರವಾಗುತ್ತ ಬರುತ್ತವೆ. ನಿಧಾನವಾಗಿ ಜೀವನದಲ್ಲಿ ಪ್ರಗತಿ ಕಾಣಿಸಲು ಶುರುವಾಗುತ್ತದೆ.
ನೀರಿಗೆ ಹಾಲು ಹಾಕಿ ಸ್ನಾನ ಮಾಡಿದಲ್ಲಿ ಮನುಷ್ಯನ ಆಯಸ್ಸು ವೃದ್ಧಿಯಾಗುತ್ತದೆ. ಜೊತೆಗೆ ಶಾರೀರಿಕ ಬಲ ಹೆಚ್ಚಾಗುತ್ತದೆ.
ನೀರಿಗೆ ಎಳ್ಳು ಬೆರೆಸಿ ಸ್ನಾನ ಮಾಡುವುದ್ರಿಂದ ಮಹಾಲಕ್ಷ್ಮಿ ಕೃಪೆ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಧನ-ಸಮೃದ್ಧಿ ಸದಾ ನೆಲೆಸಿರುತ್ತದೆ.
ನೀರಿಗೆ ತುಪ್ಪ ಬೆರೆಸಿ ಸ್ನಾನ ಮಾಡುವುದ್ರಿಂದ ಆರೋಗ್ಯಕರ ಹಾಗೂ ಸುಂದರ ಚರ್ಮ ಪ್ರಾಪ್ತಿಯಾಗುತ್ತದೆ.
ನೀರಿಗೆ ಚಂದನ, ಶ್ರೀಗಂಧವನ್ನು ಸೇರಿಸಿ ಸ್ನಾನ ಮಾಡುವುದ್ರಿಂದ ದುಃಖ, ಕಷ್ಟ ದೂರವಾಗುತ್ತದೆ.