ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ರಾಜ್ಯ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಬಳಿಕ ಮೈಸೂರಿಗೂ ಭೇಟಿ ನೀಡಲಿದ್ದಾರೆ. ಈ ವೇಳೆ ಮೆಟ್ರೋ ರೈಲು ಸೇವೆಗೆ ಚಾಲನೆ ನೀಡುವುದರ ಜೊತೆಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲೂ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಅವರ ಈ ಪ್ರವಾಸದಲ್ಲಿ ಬೆಂಗಳೂರು ಮತ್ತು ಮೈಸೂರಿನ ಪ್ರಮುಖ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಹಾಗಾದರೆ ಪ್ರಧಾನಿ ಅವರ ಪ್ರವಾಸದ ವೇಳಾಪಟ್ಟಿ ಏನು? ಯಾವ ಸಮಯಕ್ಕೆ ಎಲ್ಲಿಗೆ ಭೇಟಿ ನೀಡಲಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ
ಬೆಳಗ್ಗೆ:
-
ಬೆಳಗ್ಗೆ 7:20: ದೆಹಲಿಯಿಂದ ಭಾರತೀಯ ವಾಯುಪಡೆಯ BBJ ವಿಮಾನದಲ್ಲಿ ಪ್ರಯಾಣ ಆರಂಭ.
-
ಬೆಳಗ್ಗೆ 10:10: ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ.
-
ಬೆಳಗ್ಗೆ 10:10: ಎಂಐ-17 ಹೆಲಿಕಾಪ್ಟರ್ ಮೂಲಕ ಪ್ರಯಾಣ.
-
ಬೆಳಗ್ಗೆ 10:30: ಬೆಂಗಳೂರು ಹೆಲಿಪ್ಯಾಡ್-1ಕ್ಕೆ ಆಗಮನ.
-
ಬೆಳಗ್ಗೆ 10:35: ರಸ್ತೆ ಮಾರ್ಗವಾಗಿ ಕಾರ್ಯಕ್ರಮದ ಸ್ಥಳಕ್ಕೆ ಪ್ರಯಾಣ.
-
ಬೆಳಗ್ಗೆ 10:40: ಕಾರ್ಯಕ್ರಮದ ಸ್ಥಳಕ್ಕೆ ಆಗಮನ.
-
ಬೆಳಗ್ಗೆ 10:45ರಿಂದ ಮಧ್ಯಾಹ್ನ 12:00ರವರೆಗೆ: ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲಿ ಭಾಗಿ.
ಮಧ್ಯಾಹ್ನ: ಮೆಟ್ರೋಗೆ ಚಾಲನೆ, ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
-
ಮಧ್ಯಾಹ್ನ 12:00: ಕಾರ್ಯಕ್ರಮದ ಸ್ಥಳದಿಂದ ನಿರ್ಗಮನ.
-
ಮಧ್ಯಾಹ್ನ 12:05: ಬೆಂಗಳೂರು ಹೆಲಿಪ್ಯಾಡ್-1ಕ್ಕೆ ಆಗಮನ.
-
ಮಧ್ಯಾಹ್ನ 12:10: ಎಂಐ-17 ಹೆಲಿಕಾಪ್ಟರ್ ಮೂಲಕ ಪ್ರಯಾಣ.
-
ಮಧ್ಯಾಹ್ನ 12:30: ಬೆಂಗಳೂರು ಹೆಲಿಪ್ಯಾಡ್-2ಕ್ಕೆ ಆಗಮನ.
-
ಮಧ್ಯಾಹ್ನ 12:35: ರಸ್ತೆ ಮಾರ್ಗವಾಗಿ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ.
-
ಮಧ್ಯಾಹ್ನ 12:40: ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಆಗಮನ.
-
ಮಧ್ಯಾಹ್ನ 12:45ರಿಂದ 1:05ರವರೆಗೆ: ಮೆಟ್ರೋ ರೈಲು ಸೇವೆಗೆ ಚಾಲನೆ ಹಾಗೂ ಮೆಟ್ರೋದಲ್ಲಿ ಪ್ರಯಾಣ.
-
ಮಧ್ಯಾಹ್ನ 1:05: ಐಐಎಂ ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ಆಗಮನ.
-
ಮಧ್ಯಾಹ್ನ 1:10: ಐಐಎಂ ಬೆಂಗಳೂರು ಸಭಾಂಗಣಕ್ಕೆ ಆಗಮನ.
-
ಮಧ್ಯಾಹ್ನ 1:15ರಿಂದ 2:15ರವರೆಗೆ: ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಷ್ಟ್ರಕ್ಕೆ ಸಮರ್ಪಣೆ.
-
ಮಧ್ಯಾಹ್ನ 2:20: ಕಾರ್ಯಕ್ರಮದ ಸ್ಥಳದಿಂದ ನಿರ್ಗಮನ.
-
ಮಧ್ಯಾಹ್ನ 2:25: ಬೆಂಗಳೂರು ಹೆಲಿಪ್ಯಾಡ್-2ಕ್ಕೆ ಆಗಮನ.
-
ಮಧ್ಯಾಹ್ನ 2:30: ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ.
ಮೈಸೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ
ಸಂಜೆ:
-
ಸಂಜೆ 3:20: ಮೈಸೂರು ಹೆಲಿಪ್ಯಾಡ್ಗೆ ಆಗಮನ.
-
ಸಂಜೆ 3:25: ರಸ್ತೆ ಮಾರ್ಗವಾಗಿ ಪ್ರಯಾಣ.
-
ಸಂಜೆ 3:30: ಕೆ.ಸಿ. ಲೇಔಟ್ ಪಾರ್ಕ್ಗೆ ಆಗಮನ.
-
ಸಂಜೆ 3:30ರಿಂದ 3:45ರವರೆಗೆ: ಭಾರತ್ ಒನ್ ಕಾರ್ಯಕ್ರಮದಲ್ಲಿ ಭಾಗಿ.
-
ಸಂಜೆ 3:50: ಕಾರ್ಯಕ್ರಮದ ಸ್ಥಳದಿಂದ ನಿರ್ಗಮನ.
-
ಸಂಜೆ 3:55: COSMOS ಮೈಸೂರು ಕಾರ್ಯಕ್ರಮದ ಸ್ಥಳಕ್ಕೆ ಆಗಮನ.
-
ಸಂಜೆ 4:00ರಿಂದ 5:45ರವರೆಗೆ: COSMOS ಮೈಸೂರು ಉದ್ಘಾಟನೆ.
-
ಸಂಜೆ 5:45: ಕಾರ್ಯಕ್ರಮದ ಸ್ಥಳದಿಂದ ನಿರ್ಗಮನ.
-
ಸಂಜೆ 6:00: ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ.
-
ಸಂಜೆ 6:05: ಭಾರತೀಯ ವಾಯುಪಡೆಯ BBJ ವಿಮಾನದಲ್ಲಿ ದೆಹಲಿಗೆ ಪ್ರಯಾಣ.
-
ರಾತ್ರಿ 8:55: ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮನ.
ಬೆಂಗಳೂರು, ಮೈಸೂರಿನಲ್ಲಿ ಭದ್ರತೆ ಹೆಚ್ಚಳ
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಪ್ರಮುಖ ಕಾರ್ಯಕ್ರಮಗಳ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಮೆಟ್ರೋ ಸೇವೆ ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಈ ಭೇಟಿಯ ಪ್ರಮುಖ ಆಕರ್ಷಣೆಯಾಗಲಿವೆ.

