ಬೆಂಗಳೂರು: ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆಯಾಗಿದೆ. ನವೆಂಬರ್ 11ರ ಬುಧವಾರ 24 ಕ್ಯಾರೆಟ್ ಅಪರಂಜಿ ಚಿನ್ನದ 10 ಗ್ರಾಂ ಬೆಲೆಯಲ್ಲಿ ₹710 ಕಡಿಮೆಯಾಗಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆ ₹1,41,980ಕ್ಕೆ ಇಳಿದಿದೆ.
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರೀ ಕುಸಿತ ಕಂಡುಬಂದಿದೆ. ಇಂದು ಪ್ರತಿ ಕೆ.ಜಿ ಬೆಳ್ಳಿಯ ಬೆಲೆಯಲ್ಲಿ ₹5,000 ಇಳಿಕೆಯಾಗಿದೆ. ಹಾಗಾದರೆ, ಬೆಂಗಳೂರು ಸೇರಿದಂತೆ ಮಾರುಕಟ್ಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ವಿವರ.
ನವೆಂಬರ್ 11ರಂದು ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹14,198, 10 ಗ್ರಾಂಗೆ ₹1,41,980. ಬೆಲೆಯಲ್ಲಿ ₹710 ಇಳಿಕೆ.
22 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹13,015, 10 ಗ್ರಾಂಗೆ ₹1,30,150. ಬೆಲೆಯಲ್ಲಿ ₹650 ಇಳಿಕೆ.
18 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹10,649, 10 ಗ್ರಾಂಗೆ ₹1,06,490. ಬೆಲೆಯಲ್ಲಿ ₹530 ಇಳಿಕೆ.
24 ಕ್ಯಾರೆಟ್ ಚಿನ್ನದ ಬೆಲೆ
ನವೆಂಬರ್ 11ರಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹71 ಇಳಿಕೆಯಾಗಿದೆ. ಇದರಿಂದ ಒಂದು ಗ್ರಾಂ ಚಿನ್ನದ ಬೆಲೆ ₹14,198ಕ್ಕೆ ತಲುಪಿದೆ. ಇನ್ನು 10 ಗ್ರಾಂಗೆ ₹710 ಕಡಿಮೆಯಾಗಿದ್ದು, ಇಂದಿನ ಬೆಲೆ ₹1,41,980 ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ ₹65 ಕಡಿಮೆಯಾಗಿದ್ದು, ಇಂದಿನ ಬೆಲೆ ₹13,015 ಆಗಿದೆ. 10 ಗ್ರಾಂ ಚಿನ್ನದ ಬೆಲೆ ₹650 ಇಳಿಕೆಯಾಗಿ ₹1,30,150ಕ್ಕೆ ತಲುಪಿದೆ.
18 ಕ್ಯಾರೆಟ್ ಚಿನ್ನದ ಬೆಲೆ
18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹53 ಇಳಿಕೆಯಾಗಿದೆ. ಹೀಗಾಗಿ ಒಂದು ಗ್ರಾಂ ಬೆಲೆ ₹10,649 ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ₹530 ಕಡಿಮೆಯಾಗಿದ್ದು, ಇಂದಿನ ದರ ₹1,06,490 ದಾಖಲಾಗಿದೆ.
ಬೆಳ್ಳಿ ಬೆಲೆಯಲ್ಲಿ ₹5,000 ಕುಸಿತ
ಚಿನ್ನದ ಬೆಲೆಯ ಇಳಿಕೆಯ ಜೊತೆಗೆ ಬೆಳ್ಳಿ ಖರೀದಿದಾರರಿಗೂ ಸಿಹಿ ಸುದ್ದಿ ಸಿಕ್ಕಿದೆ. ನವೆಂಬರ್ 11ರಂದು ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆ.ಜಿ.ಗೆ ₹5,000 ಇಳಿಕೆಯಾಗಿದೆ. ಇದರಿಂದ ಒಂದು ಗ್ರಾಂ ಬೆಳ್ಳಿ ಬೆಲೆ ₹200 ಆಗಿದ್ದು, ಒಂದು ಕೆ.ಜಿ ಬೆಳ್ಳಿಯ ಬೆಲೆ ₹2,00,000ಕ್ಕೆ ತಲುಪಿದೆ.

