HomeLatest Newsಟಿ. ನಟರಾಜನ್ ಮತ್ತೆ ಸನ್‌ರೈಸರ್ಸ್‌ಗೆ ವಾಪಸ್: ಮುಂಬರುವ ಐಪಿಎಲ್‌ಗಾಗಿ ಪ್ರಮುಖ ಫ್ರಾಂಚೈಸಿಗಳ ಮಾಸ್ಟರ್ ಪ್ಲಾನ್

ಟಿ. ನಟರಾಜನ್ ಮತ್ತೆ ಸನ್‌ರೈಸರ್ಸ್‌ಗೆ ವಾಪಸ್: ಮುಂಬರುವ ಐಪಿಎಲ್‌ಗಾಗಿ ಪ್ರಮುಖ ಫ್ರಾಂಚೈಸಿಗಳ ಮಾಸ್ಟರ್ ಪ್ಲಾನ್

ಮುಂಬರುವ 2027ರ ಐಪಿಎಲ್ (IPL 2027) ಆವೃತ್ತಿಗಾಗಿ ತಂಡಗಳ ನಡುವಿನ ಆಟಗಾರರ ಹಸ್ತಾಂತರ (Trade Window) ಪ್ರಕ್ರಿಯೆ ಭರದಿಂದ ಸಾಗಿದ್ದು, ಹಲವು ಪ್ರಮುಖ ಹೈ-ಪ್ರೊಫೈಲ್ ಆಟಗಾರರು ತಮ್ಮ ಹಳೆಯ ತಂಡಗಳಿಗೆ ಮರಳಿದರೆ ಮತ್ತೆ ಕೆಲವರು ಹೊಸ ಫ್ರಾಂಚೈಸಿಗಳನ್ನು ಸೇರಿಕೊಂಡಿದ್ದಾರೆ. ಇದುವರೆಗೆ ನಡೆದಿರುವ ಪ್ರಮುಖ ಟ್ರೇಡಿಂಗ್ ವಿವರಗಳು ಇಲ್ಲಿವೆ.

1. ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ (MI – PBKS):

ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಬಿಗ್ ಟ್ರೇಡ್ ನಡೆದಿದ್ದು, ಮುಂಬೈ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ 18 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇನ್ನೊಂದೆಡೆ, 2019ರಿಂದ ಪಂಜಾಬ್ ಪರ ಆಡಿ 111 ವಿಕೆಟ್ ಕಸಿದಿರುವ ಎಡಗೈ ವೇಗಿ ಅರ್ಷದೀಪ್ ಸಿಂಗ್ 18 ಕೋಟಿ ರೂ. ದರಕ್ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ರಿಷಭ್ ಪಂತ್ ಮತ್ತು ಕುಲದೀಪ್ ಯಾದವ್ (DC – LSG):

ಲಕ್ನೋ ಸೂಪರ್ ಜೈಂಟ್ಸ್‌ನಿಂದ ರಿಷಭ್ ಪಂತ್ ದೆಹಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ವಾಪಸಾಗಿದ್ದಾರೆ. 27 ಕೋಟಿ ರೂ.ಗೆ ಲಕ್ನೋ ಸೇರಿದ್ದ ಪಂತ್, ಈ ಬಾರಿ 15 ಕೋಟಿ ರೂ. ಪರಿಷ್ಕೃತ ಮೊತ್ತಕ್ಕೆ ತಮ್ಮ ಹಳೆಯ ತಂಡ ದೆಹಲಿಗೆ ಮರಳಿದ್ದಾರೆ. ಪ್ರತಿಯಾಗಿ ದೆಹಲಿ ಕ್ಯಾಪಿಟಲ್ಸ್‌ನಿಂದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ 13.50 ಕೋಟಿ ರೂ. ದರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ್ದಾರೆ.

3. ಸಿಎಸ್‌ಕೆ ಮತ್ತು ಎಸ್‌ಆರ್‌ಎಚ್ ನಡುವೆ 4 ಆಟಗಾರರ ಹಸ್ತಾಂತರ (CSK – SRH):

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಾಲ್ಕು ಆಟಗಾರರ ಅದಲು-ಬದಲು ನಡೆದಿದೆ. ಸನ್‌ರೈಸರ್ಸ್‌ನಿಂದ ಇಂಗ್ಲೆಂಡ್ ಆಲ್ ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ (6 ಕೋಟಿ ರೂ.) ಹಾಗೂ ಜಾಕ್ ಎಡ್ವರ್ಡ್ಸ್ (3 ಕೋಟಿ ರೂ.) ಸಿಎಸ್‌ಕೆ ಸೇರಿದ್ದಾರೆ. ಬದಲಾಗಿ ಎಡಗೈ ವೇಗಿ ಖಲೀಲ್ ಅಹ್ಮದ್ (4.8 ಕೋಟಿ ರೂ.) ಮತ್ತು ನೇಥನ್ ಎಲ್ಲಿಸ್ (2 ಕೋಟಿ ರೂ.) ಎಸ್‌ಆರ್‌ಎಚ್‌ಗೆ ಹಸ್ತಾಂತರಗೊಂಡಿದ್ದಾರೆ.

4. ಟಿ. ನಟರಾಜನ್ ಮತ್ತು ಜೀಶನ್ ಅನ್ಸಾರಿ (SRH – DC):

ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ತಮಿಳುನಾಡಿನ ಎಡಗೈ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ 5 ಕೋಟಿ ರೂ. ಪರಿಷ್ಕೃತ ಮೊತ್ತಕ್ಕೆ ಸನ್‌ರೈಸರ್ಸ್ ಹೈದರಾಬಾದ್‌ಗೆ ಮರಳಿದ್ದಾರೆ. ಪ್ರತಿಯಾಗಿ ಯುವ ಲೆಗ್ ಸ್ಪಿನ್ನರ್ ಜೀಶನ್ ಅನ್ಸಾರಿ 40 ಲಕ್ಷ ರೂ. ದರದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular