HomeIndiaಮುಖಾಮುಖಿಯಾದರೂ ಮೋದಿ ನೇರವಾಗಿ ನೋಡದೇ ಕಣ್ಣಿನ ಸಂಪರ್ಕ ತಪ್ಪಿಸಿ ಬೇರೆಡೆ ನೋಡಲು ಯತ್ನಿಸುತ್ತಿದ್ದರು: ಸೋನಿಯಾ ಗಾಂಧಿ

ಮುಖಾಮುಖಿಯಾದರೂ ಮೋದಿ ನೇರವಾಗಿ ನೋಡದೇ ಕಣ್ಣಿನ ಸಂಪರ್ಕ ತಪ್ಪಿಸಿ ಬೇರೆಡೆ ನೋಡಲು ಯತ್ನಿಸುತ್ತಿದ್ದರು: ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕಥನದಲ್ಲಿ ಭಾರತದ ಹಲವು ನಾಯಕರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೂ ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಲ್ಪನೆಯ ಭಾರತಕ್ಕಾಗಿ ಹೋರಾಡುತ್ತಿದ್ದರೆ ತಾವು ತಮ್ಮದೇ ಆದ ಭಾರತದ ಕನಸಿಗಾಗಿ ಹೋರಾಡುತ್ತಿರುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಲೋಕಾರ್ಪಣೆಯಾಗಿರುವ ತಮ್ಮ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ನಲ್ಲಿ ಈ ಬಗ್ಗೆ ಸೋನಿಯಾ ಗಾಂಧಿ ಬರೆದಿ಼ದ್ದಾರೆ. ಪ್ರಧಾನಿ ಮೋದಿಯವರ ಜೊತೆ ತಮಗೆ ಯಾವುದೇ ನೇರ ಒಡನಾಟವಿರಲಿಲ್ಲ. ಪರಸ್ಪರ ಮುಖಾಮುಖಿಯಾದಾಗಲೆಲ್ಲಾ ಮೋದಿಯವರು ಬೇರೆಡೆ ನೋಡಲು ಯತ್ನಿಸುತ್ತಿದ್ದರು. ಅವರು ನೇರವಾಗಿ ನೋಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಈಗ ಮೂರನೇ ಅವಧಿಗೆ ಅಧಿಕಾರದಲ್ಲಿದ್ದಾರೆ. ಇಲ್ಲಿಯವರೆಗೆ ಅವರ ಜೊತೆ ನನಗೆ ಯಾವುದೇ ನೈಜ ಒಡನಾಟ ಬೆಳೆದಿಲ್ಲ. ಸಂಸತ್ ಅಧಿವೇಶನದ ಮುಕ್ತಾಯದ ವೇಳೆ ಅಥವಾ ಪ್ರಮುಖ ಪಕ್ಷಗಳ ನಾಯಕರು ಲೋಕಸಭಾಬ್ ಸ್ಪೀಕರ್ ಕೊಠಡಿಯಲ್ಲು ಸೇರುವಂತಹ ಅಧಿಕೃತ ಸಭೆಗಳಲ್ಲಿ ನಾವು ಭೇಟಿಯಾಗುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಅದು ತುಂಬಾ ಸಣ್ಣ ಕೋಣೆ. ಸಾಮಾನ್ಯವಾಗಿ ಅನೇಕರು ಉಪಸ್ಥಿತರಿರುತ್ತಾರೆ. ಆದರೆ ಅವರು ನನ್ನೆದುರು ಬಂದಾಗ ನಾವು ಔಪಚಾರಿಕವಾಗಿ ನಮಸ್ತೆ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ. ಪಕ್ಷಾತೀತವಾಗಿ ನಾಯಕರು ಪರಸ್ಪರ ಸೌಹಾರ್ದಯುತೆಯಿಂದ ಇರುತ್ತಿದ್ದ ಹಿಂದಿನ ದಿನಗಳಿಗಿಂತ ಇದು ಭಿನ್ನವಾಗಿದೆ. ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡದೇ ಬೇರೆಡೆಗೆ ಮುಖತಿರುಗಿಸಲು ಯತ್ನಿಸುತ್ತಾರೆ ಎಂದು ಸೋನಿಯಾ ಗಾಂಧಿ ವಿವರಿಸಿದ್ದಾರೆ.

ಇನ್ನು ತಮ್ಮ ಆಸ್ಪತ್ರೆಯ ಚಿಕಿತ್ಸೆ ಬಳಿಕ ವಾಪಸ್ ಆದ ನಂತರ ಮೋದಿಯವರು ನೀವು ಚೆನ್ನಾಗಿದ್ದೀರಾ? ಎಂದು ವಿಚಾರಿಸುತ್ತಿದ್ದರು. ಅದಕ್ಕೆ ನಾನು ಹೌದು. ಈಗ ನಾನು ಚನ್ನಾಗಿದ್ದೇನೆ ಧನ್ಯವಾದಗಳು ಎಂದು ಉತ್ತರಿಸುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.

ಅಂತಹ ಚಿಕ್ಕಪುಟ್ಟ ಸಂಭಾಷಣೆಗಳನ್ನು ಹೊರತುಪಡಿಸಿ ನಾವು ಎಂದಿಗೂ ಸರಿಯಾಗಿ ಮಾತುಕತೆ ನಡೆಸಿಲ್ಲ. ವರ್ಷಗಳ ಕಾಲ ನಾವು ಔಪಚಾರಿಕವಾಗಿ ಹುಟ್ಟುಹಬ್ಬ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಮಾತ್ರ ವಿನಿಮಯ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love), ಇಂದು (ನ.10ರಂದು ಅಧಿಕೃತವಾಗಿ ಬಿಡುಗಡೆಗೊಂಡಿದೆ. ದೆಹಲಿಯ ಖಾನ್‌ ಮಾರ್ಕೆಟ್‌ನಲ್ಲಿ ಸೋನಿಯಾ ಗಾಂಧಿ ಪುಸ್ತಕ ಮಾರಾಟ ಭರದಿಂದ ಸಾಗಿದೆ. ಭಾರತದ ಆಧುನಿಕ ರಾಜಕೀಯ ಇತಿಹಾಸದ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವವೊಂದರ ಆಪ್ತ, ಭಾವನಾತ್ಮಕ ಮತ್ತು ಆತ್ಮಾವಲೋಕನದ ಚಿತ್ರಣವನ್ನು ಈ ಪುಸ್ತಕ ಒದಗಿಸುತ್ತದೆ.

ಇದರಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಆರಂಭಿಕ ಜೀವನ, ರಾಜೀವ್‌ ಗಾಂಧಿ ಅವರ ಪರಿಚಯ ಮತ್ತು ವಿವಾಹ ಹಾಗೂ ಭಾರತಕ್ಕೆ ಅವರ ಪ್ರಯಾಣದ ಸಂಪೂರ್ಣ ವಿವರಗಳನ್ನು ಒಳಗೊಂಡಿದೆ.

“ಅಪರಿಚಿತವಾದದ್ದು ಪರಿಚಿತವಾಗುತ್ತದೆ. ಪರಿಚಿತವಾದದ್ದು ಪ್ರೀತಿಗೆ ಪಾತ್ರವಾಗುತ್ತದೆ. ಪ್ರೀತಿ ಜವಾಬ್ದಾರಿಯಾಗಿ ಬೆಳೆಯುತ್ತದೆ. ಅದು ತನ್ನತನ ಅಥವಾ ಒಳಗೊಳ್ಳುವ ಸೇರಿದ ಭಾವನೆಯಗಿದೆ” ಎಂದು ಸೋನಿಯಾ ಗಾಂಧಿ ಅವರ ಆತ್ಮಕಥನ ಪ್ರಕಟಿಸಿದ ಪ್ರಕಾಶನ ಸಂಸ್ಥೆ ಹಾರ್ಪರ್‌ಕಾಲಿನ್ಸ್ ಇಂಡಿಯಾ ಹೇಳಿದೆ. ಹಾಗಾದರೆ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕಥನದಲ್ಲಿ ಹಲವಾರು ಅಂಶಗಳಿವೆ. ಐದು ದಶಕಗಳ ಭಾರತದ ಪಯಣವನ್ನು ಇದರಲ್ಲಿ ಹೇಗೆ ಸೆರೆಹಿಡಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular