HomeEntertainmentಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್ 'ಪ್ರೇಮದ ಊರಲಿ' ಸಿನಿಮಾದ 'ಏರುಪೇರು ಹೃದಯ' ವೀಡಿಯೊ ಸಾಂಗ್ ರಿಲೀಸ್

ಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್ ‘ಪ್ರೇಮದ ಊರಲಿ’ ಸಿನಿಮಾದ ‘ಏರುಪೇರು ಹೃದಯ’ ವೀಡಿಯೊ ಸಾಂಗ್ ರಿಲೀಸ್

ಸ್ಯಾಂಡಲ್‌ವುಡ್‌ನಲ್ಲಿ ಬಾಕ್ಸ್‌ಆಫೀಸ್ ದಾಖಲೆಗಳನ್ನು ಬರೆಯುವ ಮೂಲಕ ಯಶಸ್ಸು ಕಂಡ ‘ಪ್ರೇಮದ ಊರಲಿ’ ಸಿನಿಮಾದ ಬಹುನಿರೀಕ್ಷಿತ ”ಏರುಪೇರು ಹೃದಯ” ಸಂಪೂರ್ಣ ವೀಡಿಯೊ ಹಾಡು ಬಿಡುಗಡೆಯಾಗಿದೆ. ಪ್ರಸಿದ್ಧ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆಗೊಂಡಿರುವ ಈ ಹಾಡು ಸದ್ಯ ಸಂಗೀತ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಬಿಡುಗಡೆಯಾಗಿರುವ ಈ ಮಧುರ ಗೀತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಸುನಾದ್ ಗೌತಮ್ ಅವರ ಮೋಡಿಮಾಡುವ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಮನೋಜ್ ಕುಮಾರ್ ಹಾಗೂ ನವೀನ್ ವಿಶಾರದ ಸಾಹಿತ್ಯ ಒದಗಿಸಿದ್ದಾರೆ. ಖ್ಯಾತ ಗಾಯಕಿ ನಿನಾದ ನಾಯಕ್ ತಮ್ಮ ಸುಮಧುರ ಧ್ವನಿಯ ಮೂಲಕ ಹಾಡಿಗೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಶ್ರೀರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ ಹಾಗೂ ರಿಮಿಕಾ ಶಿವು ಮುಂತಾದ ಪ್ರತಿಭಾವಂತ ತಾರಾಗಣ ನಟಿಸಿದೆ. ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ವನಿಲ್ಲಾ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಜನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮಮತಾ ದೇವೇಂದ್ರ, ಪ್ರಶಾಂತ್ ಡಿ ಎಸ್ ಮತ್ತು ರಮೇಶ್ ಎನ್ ನಿರ್ಮಾಣ ಮಾಡಿದ್ದು, ರಾಜ್‌ಕಾಂತ್ ಎಸ್ ಕೆ ಅವರ ಸುಂದರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular