HomeIndiaರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ರಾಷ್ಟ್ರಪತಿ ಕೋವಿಂದ್ ಭೇಟಿ ಮಾಡಿ ದೀಪಾವಳಿ ಶುಭಾಶಯ ತಿಳಿಸಿದ ಪ್ರಧಾನಿ...

ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ರಾಷ್ಟ್ರಪತಿ ಕೋವಿಂದ್ ಭೇಟಿ ಮಾಡಿ ದೀಪಾವಳಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ರಾಷ್ಟ್ರಪತಿ ಜಿ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದೆನು ಎಂದು ಪ್ರಧಾನಮಂತ್ರಿಯವರು ಈ ಕುರಿತಾಗಿ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಅವರ ಕುಟುಂಬದವರ ಭೇಟಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿ, ದೀಪಾವಳಿಯ ಶುಭ ಸಂದರ್ಭದಲ್ಲಿ ಅವರಿಗೆ ಶುಭಾಶಯಗಳನ್ನು ಕೋರಿದರು.

ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಜಿ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದೆನು. ದೀಪಾವಳಿಯ ಶುಭ ಸಂದರ್ಭದಲ್ಲಿ ಅವರಿಗೆ ಶುಭಾಶಯಗಳನ್ನು ತಿಳಿಸಿದೆನು ಎಂದು ಮೋದಿ ತಿಳಿಸಿದ್ದಾರೆ.

ನಾಗಪುರದಲ್ಲಿ ರೈತರೊಂದಿಗೆ ದೀಪಾವಳಿ ಆಚರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಡೆಗೆ ಪ್ರಧಾನಮಂತ್ರಿ ಶ್ಲಾಘನೆ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರದ ನಾರ್ಖೇಡ್‌ ನಲ್ಲಿರುವ ಲೋಹರಿ ಸವಂಗಾ ಗ್ರಾಮದಲ್ಲಿ ರೈತರೊಂದಿಗೆ ದೀಪಾವಳಿ ಆಚರಿಸಿದ ಬಗೆ ಹಾಗೂ ಅರುಣಾಬಾಯಿ ಮತ್ತು ರಂಭಾವು ಬಲ್ಪಾಂಡೆ ಅವರ ನಿವಾಸದಲ್ಲಿ ತಂಗಿದ್ದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಮಹಾರಾಷ್ಟ್ರದ ಎನ್‌ಡಿಎ ಸರ್ಕಾರವು ರೈತರಿಗಾಗಿ ಮತ್ತು ಅವರ ಯೋಗಕ್ಷೇಮ ಖಾತರಿಪಡಿಸಿಕೊಳ್ಳಲು ಸಹಾನುಭೂತಿ ಹೊಂದಿರುವುದನ್ನು ಈ ಹೃದಯಸ್ಪರ್ಶಿ ನಡೆಯು ಸಾರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಲೋಹರಿ ಸವಂಗಾ ಗ್ರಾಮದಲ್ಲಿ (ನಾರ್ಖೇಡ್, ನಾಗ್ಪುರ) ರೈತರೊಂದಿಗೆ ದೀಪಾವಳಿ ಆಚರಿಸಿ, ಅರುಣಾಬಾಯಿ ಮತ್ತು ರಂಭಾವು ಬಾಲ್ಪಾಂಡೆ ಅವರ ನಿವಾಸದಲ್ಲಿ ತಂಗಿದ್ದ ನಡೆಯು ಅತ್ಯಂತ ಹೃದಯಸ್ಪರ್ಶಿಯಾಗಿದೆ. ಇದು ರೈತರಿಗಾಗಿ ಶ್ರಮಿಸುತ್ತಿರುವ ಮತ್ತು ಅವರ ಕಲ್ಯಾಣ ಖಾತರಿಪಡಿಸುತ್ತಿರುವ ಮಹಾರಾಷ್ಟ್ರದ ಎನ್‌ಡಿಎ ಸರ್ಕಾರದ ದಯಾಮಯ ಮನೋಭಾವವನ್ನು ಒತ್ತಿಹೇಳಿದೆ”

ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಛತ್ತೀಸ್‌ ಗಢದ ಬಸ್ತಾರ್‌ ನ ಕರಣ್‌ ಪುರದಲ್ಲಿರುವ ‘ಕೋಬ್ರಾ’ (CoBRA) ಕಾರ್ಯಾಚರಣೆ ನೆಲೆಗೆ ಭೇಟಿ ನೀಡಿದರು. ಬಸ್ತಾರ್ ಮತ್ತು ಅಬುಜ್‌ ಮಾದ್ ಪ್ರದೇಶಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಿಗೆ ತರಬೇತಿ ಕೇಂದ್ರವಾಗಿ ಮತ್ತು ಕಾರ್ಯಾಚರಣೆ ಆರಂಭಿಸುವ ತಾಣವಾಗಿ (launch pad) ಈ ನೆಲೆ ಕಾರ್ಯನಿರ್ವಹಿಸುತ್ತದೆ.

ಇಲ್ಲಿ ಪ್ರಧಾನ ಮಂತ್ರಿಯವರು ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು. ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಕೋಟ್ಯಂತರ ಭಾರತೀಯರು ತಮ್ಮ ಪ್ರೀತಿಪಾತ್ರರೊಂದಿಗೆ ಪವಿತ್ರ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ತಾವು ಈ ಹಿಂದೆ ಕಾರ್ಗಿಲ್, ಹಿಮಾಲಯದ ಲೆಪ್ಚಾ, ಕರಾವಳಿಯ ಸರ್ ಕ್ರೀಕ್ ಮತ್ತು ಸಮುದ್ರದಲ್ಲಿರುವ ಐಎನ್‌ಎಸ್ ವಿಕ್ರಾಂತ್ (INS Vikrant) ನೌಕೆಯಲ್ಲಿ ಧೀರ ಸೈನಿಕರೊಂದಿಗೆ ಆಚರಿಸಿದ ಸ್ಮರಣೀಯ ದೀಪಾವಳಿಗಳನ್ನು ನೆನಪಿಸಿಕೊಂಡರು.

“ಗಡಿಯಲ್ಲಿರಲಿ ಅಥವಾ ದೇಶದ ಒಳಗಿರಲಿ, ದೇಶವನ್ನು ರಕ್ಷಿಸುವ ಕಾವಲುಗಾರರೇ, ‘ಮಾ ಭಾರತಿ’ಯ (ಭಾರತ ಮಾತೆಯ) ಧೀರ ಪುತ್ರರೇ, ನೀವೆಲ್ಲರೂ ನನಗೆ ಪ್ರೀತಿಪಾತ್ರರು, ನೀವೆಲ್ಲರೂ ನನ್ನ ಕುಟುಂಬದ ಭಾಗವಾಗಿದ್ದೀರಿ” ಎಂದು ಮೋದಿ ಹೇಳಿದರು.

ಮಾವೋವಾದಿ ಭಯೋತ್ಪಾದನೆಯ ವಿರುದ್ಧದ ದಶಕಗಳ ಸುದೀರ್ಘ ಹೋರಾಟದಲ್ಲಿ ಭಾರತ ಜಯಗಳಿಸಿ, ಪ್ರತಿ ಜಿಲ್ಲೆಯನ್ನೂ ನಕ್ಸಲ್ ಮುಕ್ತವನ್ನಾಗಿ ಮಾಡಿರುವ ಹಾಗೂ ಕೋಟ್ಯಂತರ ನಾಗರಿಕರು ಭಯದಿಂದ ಮುಕ್ತರಾಗಲು ಕಾರಣವಾಗಿರುವ ಈ ಸಂದರ್ಭದಲ್ಲಿ, 2026ರ ದೀಪಾವಳಿಯು ಅತ್ಯಂತ ವಿಶೇಷವಾಗಿದೆ ಎಂದು ಪ್ರಧಾನ ಮಂತ್ರಿಗಳು ಬಣ್ಣಿಸಿದರು.

ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಶ್ರಮಿಸಿದ ಲಕ್ಷಾಂತರ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸಲು ಮತ್ತು 140 ಕೋಟಿ ಭಾರತೀಯರ ಪರವಾಗಿ ಕೃತಜ್ಞತೆ ಸಲ್ಲಿಸಲು ತಾವು ಬಸ್ತಾರ್‌ ಗೆ ಬಂದಿರುವುದಾಗಿ ಅವರು ತಿಳಿಸಿದರು. “ನಿಮ್ಮ ತ್ಯಾಗ, ಸಮರ್ಪಣಾ ಭಾವ ಮತ್ತು ಸೇವಾ ಮನೋಭಾವಕ್ಕೆ ಕೃತಜ್ಞತೆ ಸಲ್ಲಿಸಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ,” ಎಂದು ಪ್ರಧಾನಿ ಮೋದಿ ಹೇಳಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular