ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ನಂದಿನಿ ಹಾಲಿನ ಉತ್ಪನ್ನಗಳ ದರದಲ್ಲೂ ಹೆಚ್ಚಳವಾಗಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ತನ್ನ ಜನಪ್ರಿಯ ನಂದಿನಿ ಬ್ರ್ಯಾಂಡ್‌ನ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಬೆಲೆಗಳನ್ನು ಪರಿಷ್ಕರಿಸಿದ್ದು, ನವೆಂಬರ್ 4ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಇದರಿಂದ ಗೃಹಿಣಿಯರು, ಸಾಮಾನ್ಯ ಗ್ರಾಹಕರು ಹಾಗೂ ಹೋಟೆಲ್ ಮತ್ತು ಬೇಕರಿ ಮಾಲೀಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.
ಹಾಲಿನ ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ. ಇತ್ತೀಚೆಗೆ ಗುಜರಾತ್‌ನ ಅಮೂಲ್ ಸಂಸ್ಥೆಯೂ ತುಪ್ಪದ ಬೆಲೆಯನ್ನು ಹೆಚ್ಚಿಸಿತ್ತು. ಇದೀಗ ಅದರ ಬೆನ್ನಲ್ಲೇ ಕೆಎಂಎಫ್ ಕೂಡ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಮಾಡಿದೆ.
ನಂದಿನಿ ತುಪ್ಪದ ಹೊಸ ದರಗಳು
ಬೆಂಗಳೂರು ಹಾಲು ಒಕ್ಕೂಟ ಪ್ರಕಟಿಸಿರುವ ಪರಿಷ್ಕೃತ ದರಪಟ್ಟಿಯ ಪ್ರಕಾರ, ತುಪ್ಪದ ವಿವಿಧ ಪ್ಯಾಕ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.
ನಂದಿನಿ ತುಪ್ಪದ ಹೊಸ ದರಗಳು
200 ಮಿ.ಲೀ – ₹95
500 ಮಿ.ಲೀ – ₹425
1 ಲೀಟರ್ ಸ್ಯಾಚೆಟ್ – ₹850
1 ಲೀಟರ್ ಪೆಟ್ ಜಾರ್ – ₹870
5 ಲೀಟರ್ – ₹4,250
ನಂದಿನಿ ಬೆಣ್ಣೆಯ ಪರಿಷ್ಕೃತ ದರ
ಬ್ಲಿಸ್ಟರ್ ಪ್ಯಾಕ್ (10 ಗ್ರಾಂ) – ₹9
ಸಾಲ್ಟೆಡ್ ಬೆಣ್ಣೆ (100 ಗ್ರಾಂ) – ₹90
ಸಾಲ್ಟೆಡ್ ಬೆಣ್ಣೆ (500 ಗ್ರಾಂ) – ₹380
ಅನ್‌ಸಾಲ್ಟೆಡ್ ಬೆಣ್ಣೆ (200 ಗ್ರಾಂ) – ₹160
ಅನ್‌ಸಾಲ್ಟೆಡ್ ಬೆಣ್ಣೆ (500 ಗ್ರಾಂ) – ₹390
ನಂದಿನಿ ಪನ್ನೀರ್ ಹೊಸ ದರ
200 ಗ್ರಾಂ – ₹115
500 ಗ್ರಾಂ – ₹260
1 ಕೆ.ಜಿ – ₹485
ಮೀಡಿಯಂ ಫ್ಯಾಟ್ ಪನ್ನೀರ್ (200 ಗ್ರಾಂ) – ₹110

