HomeEntertainmentಬಾಕ್ಸ್ ಆಫೀಸ್ ಧಮಾಕಾಗೆ ಸಜ್ಜಾದ 'ರಾಮಾಯಣ': ಮುಂಬೈ ಪ್ರೀಮಿಯರ್ ಪ್ರದರ್ಶನದಲ್ಲಿ ಭರ್ಜರಿ ಮೆಚ್ಚುಗೆ, ರಣಬೀರ್-ಯಶ್ ಚಿತ್ರಕ್ಕೆ...

ಬಾಕ್ಸ್ ಆಫೀಸ್ ಧಮಾಕಾಗೆ ಸಜ್ಜಾದ ‘ರಾಮಾಯಣ’: ಮುಂಬೈ ಪ್ರೀಮಿಯರ್ ಪ್ರದರ್ಶನದಲ್ಲಿ ಭರ್ಜರಿ ಮೆಚ್ಚುಗೆ, ರಣಬೀರ್-ಯಶ್ ಚಿತ್ರಕ್ಕೆ ಜೈಕಾರ!

ಈ ವರ್ಷದ ಅತ್ಯಂತ ನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾಗಳಲ್ಲೊಂದಾದ ‘ರಾಮಾಯಣ’ ಚಿತ್ರವು ನವೆಂಬರ್ 5, 2026 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ರಣಬೀರ್ ಕಪೂರ್ (ಶ್ರೀರಾಮ), ನಟ ಯಶ್ (ರಾವಣ) ಹಾಗೂ ಸಾಯಿ ಪಲ್ಲವಿ (ಸೀತೆ) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಈಗಾಗಲೇ ಯುಕೆ ಮತ್ತು ಯುಎಸ್‌ನಲ್ಲಿ ಪ್ರೀಮಿಯರ್ ಶೋಗಳು ನಡೆದಿದ್ದು, ನವೆಂಬರ್ 3 ರಂದು ಮುಂಬೈನಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಚಿತ್ರರಂಗದ ಪ್ರಮುಖರು ಹಾಗೂ ಪಾತ್ರವರ್ಗದ ಕುಟುಂಬಸ್ಥರು ವೀಕ್ಷಿಸಿದ ಈ ಪ್ರದರ್ಶನದಿಂದ ಅತ್ಯಂತ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಭಾರತೀಯ ಸಿನಿರಂಗಕ್ಕೆ ಹೊಸ ಬೆಂಚ್‌ಮಾರ್ಕ್ ಎಂದ ಪ್ರಮುಖರು ಜನಪ್ರಿಯ ಯೂಟ್ಯೂಬರ್ ಆಶಿಶ್ ಚಂಚಲಾನಿ ಚಿತ್ರವನ್ನು ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದು, “ರಾಮಾಯಣ ಒಂದು ಎಪಿಕ್ ಬ್ಲಾಕ್‌ಬಸ್ಟರ್ ಸಿನಿಮಾ. ಭಾರತೀಯ ಚಿತ್ರರಂಗದಲ್ಲೇ ಅತ್ಯುತ್ತಮವಾದ ಆಕ್ಷನ್ ದೃಶ್ಯಗಳನ್ನು ಈ ಸಿನಿಮಾ ಒಳಗೊಂಡಿದೆ. ದೃಶ್ಯ ವೈಭವದ ಜೊತೆಗೆ ನಿರ್ದೇಶಕ ನಿತೀಶ್ ತಿವಾರಿ ಅವರ ನಿರ್ದೇಶನ ಅತ್ಯಂತ ಪರಿಣಾಮಕಾರಿಯಾಗಿದೆ. ಅದರಲ್ಲೂ ಲಕ್ಷ್ಮಣನ ಪಾತ್ರದಲ್ಲಿ ನಟಿಸಿರುವ ರವಿ ದುಬೆ ಅವರ ಅಭಿನಯ ಅದ್ಭುತವಾಗಿದೆ. ಈ ಸಿನಿಮಾವನ್ನು ಕಡ್ಡಾಯವಾಗಿ ದೊಡ್ಡ ತೆರೆಯಲ್ಲಿಯೇ (Big Screen) ವೀಕ್ಷಿಸಬೇಕು” ಎಂದು ಪ್ರಶಂಸಿಸಿದ್ದಾರೆ.

ಛಾಯಾಗ್ರಾಹಕ ಹಾಗೂ ನಿರ್ದೇಶಕ ಧ್ರುವಲ್ ಪಟೇಲ್ ಈ ಚಿತ್ರಕ್ಕೆ 5 ಸ್ಟಾರ್ ರೇಟಿಂಗ್ ನೀಡಿದ್ದು, “ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ಬೆಂಚ್‌ಮಾರ್ಕ್ ಸೃಷ್ಟಿಸುವ ಸಿನಿಮಾ” ಎಂದು ಬಣ್ಣಿಸಿದ್ದಾರೆ. ಸಿನಿಮಾದಲ್ಲಿ ಅಭಿನಯಿಸಿರುವ ನಟ ಕುನಾಲ್ ಕಪೂರ್, “ಈ ಸಿನಿಮಾ ಕಲ್ಪನೆಗೂ ಮೀರಿದ ದೃಶ್ಯಾವಳಿಗಳನ್ನು ತೆರೆಯ ಮೇಲೆ ತಂದಿದೆ, ಇಂತಹ ಮಹತ್ವಾಕಾಂಕ್ಷೆಯ ಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ” ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟೇ ಅಲ್ಲದೆ, ಮಹರ್ಷಿ ವಿಶ್ವಾಮಿತ್ರನ ಪಾತ್ರದಲ್ಲಿ ನಟಿಸಿರುವ ಅಜಿಂಕ್ಯ ದೇವ್, “ಇದೊಂದು ಬೇವರಿಂಗ್ ಅನುಭವ, ಚಿತ್ರದ ಕಲ್ಪನೆ, ವಿಎಫ್‌ಎಕ್ಸ್ (VFX) ಮತ್ತು ಪಾತ್ರವರ್ಗದ ನಟನೆ ಅದ್ಭುತವಾಗಿದೆ. ಇದನ್ನು ಚಿತ್ರಮಂದಿರಗಳಲ್ಲೇ ನೋಡಬೇಕು” ಎಂದು ಹೊಗಳಿದ್ದಾರೆ.

ಪ್ರೇಕ್ಷಕರ ತೀರ್ಪಿಗೆ ಕಾಯುತ್ತಿರುವ ಚಿತ್ರತಂಡ ಆರಂಭಿಕ ಪ್ರದರ್ಶನಗಳಲ್ಲಿ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ದೃಶ್ಯ ವೈಭವ ಹಾಗೂ ಅದ್ಭುತ ಮೇಕಿಂಗ್ ಎಲ್ಲರ ಮನ ಗೆದ್ದಿದೆ. ಇದೀಗ ನವೆಂಬರ್ 5 ರಂದು ಸಾಮಾನ್ಯ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಿನಿಮಾ ಎಂತಹ ಪ್ರತಿಕ್ರಿಯೆ ಪಡೆಯಲಿದೆ ಎಂಬ ಕುತೂಹಲ ಸಿನ ಪ್ರಿಯರಲ್ಲಿ ಹೆಚ್ಚಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular