HomeLatest Newsಮೆಸ್ಸಿ ಜೆರ್ಸಿ ಹಾಗೂ ಕಳ್ಳನ ವೇಷ ಧರಿಸಿ ವಿಶ್ವಕಪ್ ಹಿಡಿದ ಅಭಿಮಾನಿ: ಸೋಶಿಯಲ್ ಮೀಡಿಯಾದಲ್ಲಿ ವೈರಲ್...

ಮೆಸ್ಸಿ ಜೆರ್ಸಿ ಹಾಗೂ ಕಳ್ಳನ ವೇಷ ಧರಿಸಿ ವಿಶ್ವಕಪ್ ಹಿಡಿದ ಅಭಿಮಾನಿ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವೀಡಿಯೋ!

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದ ಸಖತ್ ವೈರಲ್ ಆಗುತ್ತಿದ್ದು, ಅದರಲ್ಲಿ ಫುಟ್‌ಬಾಲ್ ಅಭಿಮಾನಿಯೊಬ್ಬ ಕಳ್ಳನ ಅವತಾರ ತಾಳಿ, ಲಿಯೋನೆಲ್ ಮೆಸ್ಸಿ ಅವರ ಪ್ರಸಿದ್ಧ 10ನೇ ಸಂಖ್ಯೆಯ ಅರ್ಜೆಂಟೀನಾ ಜೆರ್ಸಿ ಧರಿಸಿ, ಕೈಯಲ್ಲಿ ನಕಲಿ ವಿಶ್ವಕಪ್ ಟ್ರೋಫಿ ಹಿಡಿದು ನಿಂತಿರುವುದು ನೆಟ್ಟಿಗರಲ್ಲಿ ಭಾರಿ ನಗೆಯಲೆ ಎಬ್ಬಿಸಿದೆ.

ಎಕ್ಸ್, ಟಿಕ್‌ಟಾಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿರುವ ಈ ವೀಡಿಯೋದಲ್ಲಿ, ವ್ಯಕ್ತಿಯು ಕಣ್ಣಿಗೆ ಕಪ್ಪು ಬಣ್ಣದ ಕಳ್ಳನ ಮಾಸ್ಕ್ ಧರಿಸಿ ಅರ್ಜೆಂಟೀನಾದ ನೀಲಿ ಮತ್ತು ಬಿಳಿ ಬಣ್ಣದ ಜೆರ್ಸಿಯಲ್ಲಿ ಕಪ್ ಹಿಡಿದು ಪೋಸ್ ನೀಡಿದ್ದಾನೆ. 2022ರಲ್ಲಿ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಸಾಧಿಸಿದ ವಿಜಯವನ್ನು ವ್ಯಂಗ್ಯ ಮಾಡುವ ಉದ್ದೇಶದಿಂದ ಈ ರೀತಿ ವೇಷ ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಫುಟ್‌ಬಾಲ್ ಜಗತ್ತಿನಲ್ಲಿ ಪಂದ್ಯದ ವೇಳೆ ಅಂಪೈರ್ ಅಥವಾ ರೆಫರಿ ನಿರ್ಧಾರಗಳು ಒಂದು ತಂಡಕ್ಕೆ ಅನುಕೂಲಕರವಾಗಿ ಬಂದಾಗ, ಎದುರಾಳಿ ತಂಡದ ಅಭಿಮಾನಿಗಳು ‘ಗೆಲುವನ್ನು ಕದ್ದಿದ್ದಾರೆ’ ಎಂದು ತಮಾಷೆ ಮಾಡುವುದು ಸಾಮಾನ್ಯ. 2022ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡಕ್ಕೆ ಗರಿಷ್ಠ ಅಂದರೆ 5 ಪೆನಾಲ್ಟಿಗಳನ್ನು ನೀಡಲಾಗಿತ್ತು. ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪೆನಾಲ್ಟಿ ಪಡೆದ ದಾಖಲೆಯಾಗಿದ್ದು, ಮೆಸ್ಸಿಗೆ ಕಪ್ ಕೊಡಿಸಲು ತೀರ್ಪುಗಳು ಬೆಂಬಲವಾಗಿ ಬಂದಿದ್ದವು ಎಂದು ಟೀಕಿಸುವ ಗುಂಪು ಈ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತ್ತೊಂದೆಡೆ, ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ (ಎಎಫ್‌ಎ) ವಿಶ್ವಕಪ್ ಬಹುಮಾನದ ಹಣದ ಅಕ್ರಮ ಹಣಕಾಸು ವಹಿವಾಟು ಹಾಗೂ ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ತನಿಖೆ ಎದುರಿಸುತ್ತಿದ್ದು, ಈ ನಡುವೆಯೇ ಈ ವ್ಯಂಗ್ಯಚಿತ್ರ ಮಾದರಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular