HomeEntertainmentಮಗನ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಗಿಫ್ಟ್ ಕಳುಹಿಸಿಕೊಟ್ಟ ನಟ ದರ್ಶನ್: ಭಾವುಕ ಪೋಸ್ಟ್ ಹಂಚಿಕೊಂದ ವಿನೀಶ್

ಮಗನ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಗಿಫ್ಟ್ ಕಳುಹಿಸಿಕೊಟ್ಟ ನಟ ದರ್ಶನ್: ಭಾವುಕ ಪೋಸ್ಟ್ ಹಂಚಿಕೊಂದ ವಿನೀಶ್

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಮಗ ವಿನೀಶ್ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ವಿಶೇಷ ಉಡುಗೊರೆ ಕಳುಹಿಸಿದ್ದಾರೆ.

ನಟ ದರ್ಶನ್ ಪುತ್ರ ವಿನೀಶ್ ಗೆ 18ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತಂದೆ ದರ್ಶನ್ ಜೈಲಿನಿಂದಲೇ ಗಿಫ್ಟ್ ಕಳುಹಿಸಿಕೊಟ್ಟಿದ್ದಾರೆ. ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗದೇ ಜೈಲಿನಲ್ಲಿ ದರ್ಶನ್ ನೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿನೀಶ್ ಅವರು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದು, ಮಗನ ಜನ್ಮದಿನಕ್ಕೆ ವಿಶ್ ಮಾಡಿದ್ದಾರೆ. 18ನೇ ವರ್ಷದ ಜನ್ಮದಿನ ಆಚರಣೆಗೆ ತಂದೆ ಜೊತೆಗಿಲ್ಲ ಎಂಬ ಬೇಸರ ವಿನೀಶ್​​ಗೆ ಕಾಡುತ್ತಿದೆ.

ಇಂದು ದರ್ಶನ್ ಅವರನ್ನು ಭೇಟಿ ಮಾಡಲು ಮಗ ವಿನೀಶ್ ಹಾಗೂ ಸಂಬಂಧಿ ಸುಶಾಂತ್ ನಾಯ್ಡು ಜೈಲಿಗೆ ಭೇಟಿ ನೀಡಿದ್ದರು. 18ನೇ ವಯಸ್ಸಿಗೆ ಕಾಲಿಟ್ಟ ಮಗನನ್ನು ಕಂಡ ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ಜೈಲಿನಲ್ಲಿ ತಮಗೆ ಲಭ್ಯವಿದ್ದ ‘ಕಿಟ್‌ಕ್ಯಾಟ್’ ಚಾಕೊಲೇಟ್‌ ಅನ್ನು ಮಗನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿ ಆಶೀರ್ವದಿಸಿದ್ದಾರೆ.

18ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗದೆ ಭಾವುಕರಾಗಿದ್ದಾರೆ ನಟ ದರ್ಶನ್. ಜೈಲಿನಲ್ಲಿ ಸಿಕ್ಕ ಕಿಟ್‌ಕ್ಯಾಟ್ ಚಾಕೊಲೇಟ್ ನೀಡಿ ಆಶೀರ್ವದಿಸಿದ ಅಪ್ಪನ ಈ ಗಿಫ್ಟ್ ನೋಡಿ ಮಗ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ದರ್ಶನ್ ಬುದ್ಧಿವಾದ ಹೇಳಿ ಶುಭ ಹಾರೈಸಿದ್ದಾರೆ.

ಅಪ್ಪ ಜೈಲಿನಲ್ಲಿ ನೀಡಿದ ಈ ಸರಳ ಉಡುಗೊರೆಗೆ ಮಗ ವಿನೀಶ್ ಭಾವುಕರಾಗಿದ್ದಾರೆ. ‘ಈ ಪ್ರಪಂಚದಲ್ಲಿ ನನ್ನ ಅಪ್ಪ ಕೊಟ್ಟ ಈ ಗಿಫ್ಟ್‌ಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಗನಿಗೆ ಕಿವಿಮಾತು ಹೇಳಿದ ದರ್ಶನ್, “ಈಗ ನೀನು ಟಿನೇಜ್‌ಗೆ ಕಾಲಿಟ್ಟಿದ್ದೀಯಾ. ಇನ್ಮುಂದೆ ನಿನ್ನ ಬಗ್ಗೆ ಯಾವುದೇ ದೂರುಗಳು ಅಥವಾ ಕಂಪ್ಲೇಂಟ್‌ಗಳು ಬರಬಾರದು. ಜವಾಬ್ದಾರಿಯಿಂದ ನಡೆದುಕೋ’ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲಿಗೆ ಹೋದ ಬಳಿಕ ಸಾಕಷ್ಟು ಏರಿಳಿತಗಳನ್ನು ಅನುಭವಿಸಿದ್ದಾರೆ. ಈಗ ಅವರ ವಿರುದ್ಧ ಆಪ್ತ ಎನಿಸಿಕೊಂಡಿದ್ದ ಧನ್ವೀರ್ ಬಂಡಾಯ ಎದ್ದಿದ್ದು, ಕುಟುಂಬದ ಚಿಂತೆಯನ್ನು ಹೆಚ್ಚಿಸಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮ್ಯಾನೇಜರ್ ಕೇಸ್ ದಾಖಲು ಮಾಡಿದರೆ, ಧನ್ವೀರ್ ತಂದೆ ಪ್ರತಿ ದೂರು ದಾಖಲು ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular