HomeLatest News‘ನಿಮ್ಮ ಶೂ ಸೂಪರ್ ಸಾರ್!’: ಅಭಿಮಾನಿಯ ನೇರ ಮಾತು ಕೇಳಿ ವಿರಾಟ್ ಕೊಹ್ಲಿ ಖುಷ್!

‘ನಿಮ್ಮ ಶೂ ಸೂಪರ್ ಸಾರ್!’: ಅಭಿಮಾನಿಯ ನೇರ ಮಾತು ಕೇಳಿ ವಿರಾಟ್ ಕೊಹ್ಲಿ ಖುಷ್!

ಭಾರತದ ಕ್ರಿಕೆಟ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮೈದಾನದಲ್ಲಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲೂ ತಮ್ಮ ಅಭಿಮಾನಿಗಳೊಂದಿಗೆ ಬೆರೆಯುವ ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಮತ್ತು ಅಭಿಮಾನಿಯೊಬ್ಬರ ನಡುವೆ ನಡೆದ ರಸವತ್ತಾದ ಹಾಗೂ ಸರಳ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಮುಂಬೈ ಏರ್‌ಪೋರ್ಟ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಕಂಡ ಅಭಿಮಾನಿಯೊಬ್ಬರು ಅವರ ಬಳಿಗೆ ಬಂದು, “ನಾನು ನಿಮ್ಮ ಬ್ರ್ಯಾಂಡ್‌ನ ಶೂಗಳನ್ನು ಖರೀದಿಸಿದ್ದೇನೆ, ‘ಕ್ವಾಲಿಟಿ ಏಕ್ ನಂಬರ್ ಹೈ’ (ಗುಣಮಟ್ಟ ಅತ್ಯುತ್ತಮವಾಗಿದೆ)” ಎಂದು ನೇರವಾಗಿ ಹೊಗಳಿದ್ದಾರೆ. ಅಭಿಮಾನಿಯ ಈ ಮಾತುಗಳನ್ನು ಕೇಳಿದ ಕೊಹ್ಲಿ ಮೊಗದಲ್ಲಿ ತಕ್ಷಣವೇ ಮುಗುಳುನಗೆ ಮೂಡಿದ್ದು, ಕೊಹ್ಲಿ ಅತ್ಯಂತ ಖುಷಿಯಿಂದ ಧನ್ಯವಾದ ತಿಳಿಸಿದ್ದಾರೆ.

ಕ್ರಿಕೆಟ್ ಜಗತ್ತಿನ ದೈತ್ಯ ತಾರೆಯಾಗಿದ್ದರೂ, ತಮ್ಮ ಉತ್ಪನ್ನದ ಗ್ರಾಹಕರಿಂದ ಬಂದ ನೇರ ಪ್ರತಿಕ್ರಿಯೆಯನ್ನು ಅತ್ಯಂತ ವಿನಮ್ರವಾಗಿ ಸ್ವೀಕರಿಸಿದ ಕೊಹ್ಲಿಯ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಭಾರತ ತಂಡದ ಪರ ಅದ್ಭುತ ಪ್ರದರ್ಶನ ನೀಡಿರುವ ಕೊಹ್ಲಿ, ಕ್ರೀಡೆಯ ಜೊತೆಗೆ ಫ್ಯಾಷನ್ ಹಾಗೂ ಫಿಟ್‌ನೆಸ್ ಉದ್ಯಮದಲ್ಲೂ ತಮ್ಮದೇ ಆದ ಬ್ರ್ಯಾಂಡ್ ಹೊಂದಿದ್ದು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular