HomeIndiaಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ: 1.08 ಕೋಟಿ ಹೆಸರುಗಳು ಪಟ್ಟಿಯಿಂದ ಹೊರಕ್ಕೆ

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ: 1.08 ಕೋಟಿ ಹೆಸರುಗಳು ಪಟ್ಟಿಯಿಂದ ಹೊರಕ್ಕೆ

ಒಟ್ಟು ಮತದಾರರು- 4,55,00,011

ಮಹಿಳಾ ಮತದಾರರು- 2,29,12,355

ಪುರುಷ ಮತದಾರರು-2,25,40,493

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೃತೀಯ ಲಿಂಗಿಗಳು -2,841-

ಸೇವಾ ಮತದಾರರು -44,322

18ರಿಂದ 19 ವರ್ಷದೊಳಗಿನವರು -ರ-6,83,364 –

85 ವರ್ಷ ಮೇಲ್ಪಟ್ಟವರು -3,92,134

ವಿಶೇಷ ಚೇತನ ಮತದಾರರು-5,65,340

ಸಾಗರೋತ್ತರ ಮತದಾರರು-3,252

ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ

ಬೆಂಗಳೂರು- ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR-2026) ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಬಾರಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬರೋಬ್ಬರಿ 1,07,96,339 ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿದಿದ್ದು, ರಾಜ್ಯದ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪರಿಷ್ಕರಣೆ ಪ್ರಕ್ರಿಯೆ ಹಾಗೂ ಅಂತಿಮ ಮತದಾರರ ಪಟ್ಟಿಯ ವಿವರಗಳನ್ನು ಹಂಚಿಕೊಂಡರು. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.

ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾದ ಈ ವಿಶೇಷ ತೀವ್ರ ಪರಿಷ್ಕರಣೆಯ ನಂತರ, ಸುಮಾರು 1.07 ಕೋಟಿಗೂ ಹೆಚ್ಚು (1,07,96,339 – 19.48%) ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.

ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ 4,46,35,975 (80.52%) ಮತದಾರರು ಮಾತ್ರ ಸಹಿ ಮಾಡಿದ ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ.ಇವುಗಳಲ್ಲಿ 55.32% ಸ್ವತಃ, 39.42% ಸಂತತಿ (Progeny) ಹಾಗೂ 5.25% ಯಾವುದೇ ಗುರುತಿಸುವಿಕೆ ಇಲ್ಲದ ವರ್ಗಗಳಡಿಯಲ್ಲಿ ಡಿಜಿಟಲೀಕರಿಸಲಾಗಿದೆ ಎಂದರು.

2026ರ ಜೂನ್ 30ರಿಂದ ಆಗಸ್ಟ್ 17ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಮನೆಗೆ ಭೇಟಿ ನೀಡಿ ಮತದಾರರ ಗಣತಿ ನಮೂನೆಗಳನ್ನು ವಿತರಿಸಿದ್ದರು. ಜೂನ್ 16ರಂದು ಮತದಾರರ ಪಟ್ಟಿಯಲ್ಲಿದ್ದ ಒಟ್ಟು 5,54,32,314 ಮತದಾರರಿಗೆ ಗಣತಿ ನಮೂನೆಗಳನ್ನು ಸಿದ್ಧಪಡಿಸಲಾಗಿತ್ತು. ಈ ಪೈಕಿ 4,46,35,975 ಮತದಾರರು ಸಹಿ ಮಾಡಿದ ನಮೂನೆಗಳನ್ನು ಸಲ್ಲಿಸಿದ್ದು, ಶೇ.80.52ರಷ್ಟು ನಮೂನೆಗಳು ಸ್ವೀಕೃತವಾಗಿದ್ದವು.

ಉಳಿದ 1,07,96,339 ಮತದಾರರ ಗಣತಿ ನಮೂನೆಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿರಲಿಲ್ಲ.

ಈ ಮತದಾರರನ್ನು ಗೈರುಹಾಜರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ನಕಲಿ ಅಥವಾ ಪುನರಾವರ್ತಿತ ನೋಂದಣಿ ಹೊಂದಿದವರು ಎಂಬ ವರ್ಗಗಳ ಅಡಿಯಲ್ಲಿ ಗುರುತಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಹೆಸರುಗಳು ಹೊರಗುಳಿದ ವಿಭಾಗಗಳು

ಯಾವ ವರ್ಗದಲ್ಲಿ ಎಷ್ಟು ಮತದಾರರು?

ಪರಿಷ್ಕರಣೆ ವೇಳೆ ಕರಡು ಪಟ್ಟಿಯಿಂದ ಹೊರಗುಳಿದ 1.08 ಕೋಟಿ ಮತದಾರರ ಪೈಕಿ 65,45,679 ಮಂದಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. 19,00,926 ಮಂದಿ ಗೈರುಹಾಜರಿದ್ದರೆ, 16,39,864 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ವರ್ಗೀಕರಿಸಲಾಗಿದೆ.

ಇನ್ನು 7,09,870 ಮತದಾರರನ್ನು ಈಗಾಗಲೇ ನೋಂದಾಯಿತರಾಗಿರುವ ಅಥವಾ ನಕಲಿ/ಪುನರಾವರ್ತಿತ ನೋಂದಣಿ ಹೊಂದಿರುವವರು ಎಂದು ಗುರುತಿಸಲಾಗಿದೆ.

ನಿಯಮಾನುಸಾರ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಕಾಶದ ಮೂಲಕ ಅರ್ಹ ಮತದಾರರು ತಮ್ಮ ಹೆಸರುಗಳನ್ನು ಮರುಸೇರ್ಪಡೆಗೊಳಿಸಿಕೊಳ್ಳಲು ಅವಕಾಶವಿದೆ.

ಹಕ್ಕು ಮತ್ತು ಆಕ್ಷೇಪಣೆಗಳ ಪರಿಶೀಲನೆ

ಹಕ್ಕು ಮತ್ತು ಆಕ್ಷೇಪಣೆಗಳ ಪರಿಶೀಲನೆ

ಕರಡು ಮತದಾರರ ಪಟ್ಟಿ ಪ್ರಕಟಿಸಿದ ಬಳಿಕ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದ ಅಥವಾ ದತ್ತಾಂಶದೊಂದಿಗೆ ಹೊಂದಿಕೆಯಾಗದ ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿತ್ತು.

ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಪ್ರಕರಣಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿದ್ದಾರೆ.

ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ವ್ಯಕ್ತಿಗಳು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ಕ್ರಮ ಕೈಗೊಳ್ಳುವುದು ಪರಿಷ್ಕರಣೆಯ ಉದ್ದೇಶವಾಗಿದೆ ಎಂದು ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. ಅಂತಿಮ ಪಟ್ಟಿಯ ಪ್ರತಿಗಳನ್ನು ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೂ ಒದಗಿಸಲಾಗಿದೆ.

2026ರ ಜೂನ್ 16ರಂದು ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರಿದ್ದರು. ಇವರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಈ ಪೈಕಿ 4,46,35,975 ಮತದಾರರು ಸಹಿ ಮಾಡಿದ ನಮೂನೆಗಳನ್ನು ಸಲ್ಲಿಸಿದ್ದು, ಒಟ್ಟು ಮತದಾರರ ಶೇ. 80.52ರಷ್ಟು ಜನರ ಮಾಹಿತಿಯನ್ನು ಡಿಜಿಟಲೀಕರಿಸಲಾಗಿದೆ. ಉಳಿದ 1,07,96,339 ಮತದಾರರ ಗಣತಿ ನಮೂನೆಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಹೆಸರುಗಳು ಹೊರಗುಳಿಯಲು ಕಾರಣಗಳು

ಒಂದು ಕೋಟಿಗೂ ಅಧಿಕ ಹೆಸರುಗಳು ಹೊರಗುಳಿಯಲು ಕಾರಣವೇನು?

ಗಣತಿ ನಮೂನೆಗಳು ಸಲ್ಲಿಕೆಯಾಗದ 1,07,96,339 ಮತದಾರರನ್ನು ವಿವಿಧ ವರ್ಗಗಳ ಅಡಿಯಲ್ಲಿ ಗುರುತಿಸಲಾಗಿದೆ. ಅವರ ವಿವರ ಹೀಗಿದೆ:

ಮೃತಪಟ್ಟವರು: 65,45,679

ಗೈರುಹಾಜರಿದ್ದವರು: 19,00,926

ಶಾಶ್ವತವಾಗಿ ಸ್ಥಳಾಂತರಗೊಂಡವರು: 16,39,864

ನಕಲಿ ಅಥವಾ ಪುನರಾವರ್ತಿತ ನೋಂದಣಿ: 7,09,870

ಈ ವರ್ಗೀಕರಣದ ಪ್ರಕಾರ, ಒಟ್ಟು 1.08 ಕೋಟಿ ಹೆಸರುಗಳು ಪರಿಷ್ಕರಣೆಯ ವೇಳೆ ಪಟ್ಟಿಯಿಂದ ಹೊರಗುಳಿದಿವೆ. ಆದರೆ ಗಣತಿ ನಮೂನೆ ಸಲ್ಲಿಸದಿರುವುದೇ ಒಬ್ಬ ವ್ಯಕ್ತಿ ಅನರ್ಹ ಮತದಾರ ಎಂಬುದಕ್ಕೆ ಅಂತಿಮ ಆಧಾರವಲ್ಲ. ಅರ್ಹ ಮತದಾರರು ತಮ್ಮ ಹೆಸರುಗಳನ್ನು ಮತ್ತೆ ಸೇರ್ಪಡೆಗೊಳಿಸಲು ಚುನಾವಣಾ ಆಯೋಗದ ನಿಯಮಾನುಸಾರ ಅವಕಾಶವಿದೆ.

ಕರಡು ಪಟ್ಟಿ ಪ್ರಕಟಿಸಿದ ಬಳಿಕ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹಿಂದಿನ ಮತದಾರರ ಪಟ್ಟಿಯಲ್ಲಿನ ವಿವರಗಳು ಲಭ್ಯವಿಲ್ಲದ ಅಥವಾ ದತ್ತಾಂಶದೊಂದಿಗೆ ಹೊಂದಿಕೆಯಾಗದ ಮತದಾರರಿಗೆ ನೋಟಿಸ್‌ಗಳನ್ನು ನೀಡಿ, ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ.

ಅರ್ಹ ಮತದಾರರು ಹೊರಗುಳಿಯದಂತೆ ಕ್ರಮ

ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರ ಹೆಸರುಗಳು ಉಳಿಯಬೇಕು ಹಾಗೂ ಅನರ್ಹ ವ್ಯಕ್ತಿಗಳ ಹೆಸರುಗಳು ಸೇರ್ಪಡೆಯಾಗಬಾರದು ಎಂಬ ಉದ್ದೇಶದಿಂದ ಈ ಪರಿಷ್ಕರಣೆ ನಡೆಸಲಾಗಿದೆ ಎಂದು ತಿಳಿಸಿದರು.

ಫಾರ್ಮ್ 7 ಸಲ್ಲಿಕೆ ಮತ್ತು ನೋಟೀಸ್‌ಗಳು

2,29,235 ಫಾರ್ಮ್ 7 ಸಲ್ಲಿಕೆ

43,80,000 ಜನರಿಗೆ ‌ನೋಟಿಸ್ ನೀಡಲಾಗಿತ್ತು. 61,960 ನೋಟೀಸ್ ನೀಡಿದವರು ವಿಚಾರಣೆ ಅಪೂರ್ಣ. ಫಾರ್ಮ್ 7 ಬಲ್ಕ್ ಆಗಿ ಜನರೇಟ್ ಆಗಿಲ್ಲ. ಅದಕ್ಕೆ ಕಾನೂನಿನ ಅಡಿಯಲ್ಲಿ ಅವಕಾಶ ಇಲ್ಲ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ. 2,29,235 ಫಾರ್ಮ್ 7 ಸಲ್ಲಿಕೆ ಆಗಿದ್ದು, ಇದರಲ್ಲಿ 1,88,324 ವಿಚಾರಣೆ ನಡೆಸಿ ಮತಪಟ್ಟಿಯಿಂದ ಡಿಲೀಟ್ ಮಾಡಲಿದೆ.1091 – ಅನರ್ಹ ಮತದಾರರು 184 ಮತದಾರು ವಿಚಾರಣೆಗೆ ಗೈರು ಆಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಪರಿಶೀಲಿಸಬಹುದಾಗಿದೆ.

“ಕರಡು ಪಟ್ಟಿ ಪ್ರಕಟಣೆಯ ನಂತರ ಬಂದ ಹಕ್ಕುಗಳು (Claims) ಮತ್ತು ಆಕ್ಷೇಪಣೆಗಳನ್ನು (Objections) ಚುನಾವಣಾ ಆಯೋಗದ ನಿಯಮಾವಳಿಗಳಂತೆ ಸಂಪೂರ್ಣವಾಗಿ ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ. ಪಟ್ಟಿಯಲ್ಲಿ ಇನ್ನು ಮುಂದೆ ಯಾವುದೇ ಲೋಪದೋಷಗಳಾಗದಂತೆ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ಈ ಪಟ್ಟಿಯ ಪ್ರತಿಗಳನ್ನು ಈಗಾಗಲೇ ಒದಗಿಸಲಾಗಿದೆ,” ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 1.08 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿದಿರುವುದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular