HomeIndiaಪಿಟ್ಸ್ ಬಂದಂತೆ ನಾಟಕವಾಡಿ ಸುಬ್ಬಂದಿಗಳ ಮೇಲೆ ಹಲ್ಲೆ: ತಮಿಳುನಾಡಿನ ಜೈಲಿನಿಂದ ಸಿನಿಮೀಯ ರೀತಿಯಲ್ಲಿ 17 ಕೈದಿಗಳು...

ಪಿಟ್ಸ್ ಬಂದಂತೆ ನಾಟಕವಾಡಿ ಸುಬ್ಬಂದಿಗಳ ಮೇಲೆ ಹಲ್ಲೆ: ತಮಿಳುನಾಡಿನ ಜೈಲಿನಿಂದ ಸಿನಿಮೀಯ ರೀತಿಯಲ್ಲಿ 17 ಕೈದಿಗಳು ಪರಾರಿ

ಚೆನ್ನೈ: ಪಿಟ್ಸ್ ಬಂದಂತೆ ನಟಿಸಿ ಜೈಲಿನ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ, 17 ಕೈದಿಗಳು ಸಿನಿಮೀಯ ರೀತಿಯಲ್ಲಿ ಜೈಲಿನಿಂದ ಪರಾರಿಯಾಗಿರುವ ಘಟನೆ ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ತೆಕ್ಕಂಪಟ್ಟಿ ಉಪ ಜೈಲಿನಲ್ಲಿ ಸೋಮವಾರ ತಡರಾತ್ರಿ ಕೈದಿಗಳು ಪಕ್ಕಾ ಪ್ಲಾನ್ ಮಾಡಿ ಜೈಲಿನಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಒಟ್ಟು 17 ವಿಚಾರಣಾಧೀನ ಕೈದಿಗಳು ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಳೆದ 30 ವರ್ಷಗಳಲ್ಲೇ ರಾಜ್ಯದಲ್ಲಿ ನಡೆದ ಅತ್ಯಂತ ದೊಡ್ಡ ಜೈಲು ಪರಾರಿ ಪ್ರಕರಣ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾತ್ರಿ ಸುಮಾರು 10.30ರ ವೇಳೆಗೆ, ಜೈಲಿನಲ್ಲಿದ್ದ ಸಹ ಕೈದಿಯೊಬ್ಬನಿಗೆ ಫಿಟ್ಸ್ (ಮೂರ್ಛೆ ರೋಗ) ಬಂದಿದೆ ಎಂದು ಸಬೂಬು ಹೇಳಿ ಕೈದಿಗಳು ಜೈಲು ಸಿಬ್ಬಂದಿಯ ನೆರವು ಕೋರಿದ್ದರು. ಇದನ್ನು ನಂಬಿ ಭದ್ರತಾ ಸಿಬ್ಬಂದಿ ಜೈಲು ಕೊಠಡಿಯೊಳಗೆ ಪ್ರವೇಶಿಸುತ್ತಿದ್ದಂತೆ, ಅವರ ಮೇಲೆ ಕೈದಿಗಳು ಏಕಾಏಕಿ ಎರಗಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಈ ಗಲಾಟೆಯಲ್ಲಿ ಜೈಲು ಸಿಬ್ಬಂದಿ ಸೇರಿದಂತೆ ಮೂವರು ಗಾಯಗೊಂಡಿದ್ದು, ಅವರನ್ನು ತೇಣಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ತಮಿಳುನಾಡು ಪೊಲೀಸರು ತಕ್ಷಣವೇ ಕೈದಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳವಾರ ಬೆಳಗಿನ ವೇಳೆಗೆ ಪರಾರಿಯಾಗಿದ್ದ ನಾಲ್ವರು ಕೈದಿಗಳಾದ ಸಿಲಂಬರಸನ್, ಪ್ರವೀಣ್ ಕುಮಾರ್, ರಾಜಾ ಸಿಕಂದರ್ ಮತ್ತು ರಾಜ್‌ಕುಮಾರ್ ಅವರನ್ನು ಬಂಧಿಸಿದ್ದಾರೆ.

ಉಳಿದ 13 ಕೈದಿಗಳ ಪತ್ತೆಗೆ 17 ಪ್ರತ್ಯೇಕ ವಿಶೇಷ ಪೊಲೀಸ್ ಪಡೆಗಳನ್ನು ರಚಿಸಲಾಗಿದೆ. ತೇಣಿ ಜಿಲ್ಲೆಯು ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡಿರುವುದರಿಂದ, ಕೇರಳದ ಇಡುಕ್ಕಿ ಜಿಲ್ಲೆ ಸೇರಿದಂತೆ ಗಡಿ ಅರಣ್ಯ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿಸಲಾಗಿದೆ.

1995ರಲ್ಲಿ ವೆಲ್ಲೂರು ಕೋಟೆಯಲ್ಲಿದ್ದ ಎಲ್‌ಟಿಟಿಇ ಶಂಕಿತರು ಸುರಂಗ ದೋಚಿ ಪರಾರಿಯಾದ ನಂತರ ನಡೆದ ಅತಿದೊಡ್ಡ ಜೈಲು ಬ್ರೇಕ್ ಇದಾಗಿದೆ. ಕಾನೂನು ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ತನಿಖೆಗೆ ಆದೇಶಿಸಿದ್ದು, ಭದ್ರತಾ ಲೋಪ ಎಸಗಿದ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular