HomeEntertainmentಪ್ರಿಯಾಂಕಾ ಚೋಪ್ರಾ ಸಿನಿಮಾದಲ್ಲಿ ತೋರಿಸಿದ್ದು ಶೇಕಡಾ 10 ರಷ್ಟು ಕಷ್ಟ ಮಾತ್ರ: ಬಯೋಪಿಕ್ ವಿರುದ್ಧ ಮೇರಿ...

ಪ್ರಿಯಾಂಕಾ ಚೋಪ್ರಾ ಸಿನಿಮಾದಲ್ಲಿ ತೋರಿಸಿದ್ದು ಶೇಕಡಾ 10 ರಷ್ಟು ಕಷ್ಟ ಮಾತ್ರ: ಬಯೋಪಿಕ್ ವಿರುದ್ಧ ಮೇರಿ ಕೋಮ್ ಅಸಮಾಧಾನ!

ಭಾರತದ ದಂತಕಥೆ ಬಾಕ್ಸಿಂಗ್ ಪಟು ಹಾಗೂ ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್, ತಮ್ಮ ಜೀವನವನ್ನು ಆಧರಿಸಿ ನಿರ್ಮಿಸಲಾಗಿದ್ದ ‘ಮೇರಿ ಕೋಮ್’ ಬಯೋಪಿಕ್ ಚಿತ್ರದ ಬಗ್ಗೆ ಆಸಕ್ತಿದಾಯಕ ಮತ್ತು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಹೊರಬಂದ ನಂತರ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಪ್ರಿಯಾಂಕಾ ಚೋಪ್ರಾ ಅಭಿನಯದ ಈ ಸಿನಿಮಾ ತಮ್ಮ ನಿಜ ಜೀವನದ ಶೇಕಡಾ 10 ರಷ್ಟು ಕಷ್ಟಗಳನ್ನು ಮಾತ್ರ ತೋರಿಸಿದೆ ಹೊರತು ಸಂಪೂರ್ಣ ನೈಜತೆಯಿಂದ ಕೂಡಿರಲಿಲ್ಲ ಎಂದು ಹೇಳಿದ್ದಾರೆ.

2014 ರಲ್ಲಿ ತೆರೆಕಂಡ ‘ಮೇರಿ ಕೋಮ್’ ಚಿತ್ರವು ಆರು ಬಾರಿ ವಿಶ್ವ ಚಾಂಪಿಯನ್ ಆದ ಮೇರಿ ಕೋಮ್ ಅವರ ಕ್ರೀಡಾ ಪಯಣವನ್ನು ಆಧರಿಸಿತ್ತು. ಉಮಂಗ್ ಕುಮಾರ್ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಮೇರಿ ಕೋಮ್ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದು, ಈ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತ್ತು. ಆದರೆ ಸಿನಿಮಾ ಬಿಡುಗಡೆಯಾದ 12 ವರ್ಷಗಳ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇರಿ ಕೋಮ್, “ಚಿತ್ರದಲ್ಲಿ ತೋರಿಸಲಾದ ಹಲವು ಘಟನೆಗಳು ನೈಜವಾಗಿರಲಿಲ್ಲ. ನನ್ನ ಕಠಿಣ ಶ್ರಮ ಮತ್ತು ಜೀವನದ ಹೋರಾಟದ ಕೇವಲ ಶೇಕಡಾ 10 ರಷ್ಟು ಭಾಗ ಮಾತ್ರ ಸಿನಿಮಾದಲ್ಲಿದೆ” ಎಂದು ಹೇಳಿದ್ದಾರೆ.

ತಮ್ಮ ಜೀವನದ ನೈಜ ಕಷ್ಟಗಳು ಮತ್ತು ಸಾಧನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ತಮ್ಮ ಆತ್ಮಚರಿತ್ರೆ ‘ಅನ್‌ಬ್ರೇಕಬಲ್’ (Unbreakable) ಪುಸ್ತಕವನ್ನು ಓದಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅಲ್ಲದೆ ಈ ಸಿನಿಮಾದ ಸೀಕ್ವೆಲ್ ಅಥವಾ ಎರಡನೇ ಭಾಗ ನಿರ್ಮಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಸ್ವತಃ ಪ್ರಿಯಾಂಕಾ ಚೋಪ್ರಾ ಕೂಡ ಈ ಪಾತ್ರದಲ್ಲಿ ಈಶಾನ್ಯ ಭಾರತದ ನಟಿಯೊಬ್ಬರು ನಟಿಸಿದ್ದರೆ ಇನ್ನಷ್ಟು ಸೂಕ್ತವಾಗಿರುತ್ತಿತ್ತು ಎಂದು ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular