HomeLatest Newsಒಂದೇ ಒಂದು ರನ್ ದೂರದಲ್ಲಿದ್ದ ಪಡಿಕ್ಕಲ್ ದ್ವಿಶತಕ ಕನಸು ಭಗ್ನ: ವಿವಾದಾತ್ಮಕ ನಿರ್ಧಾರದಿಂದ ಕ್ರೀಸ್‌ ನಲ್ಲೇ...

ಒಂದೇ ಒಂದು ರನ್ ದೂರದಲ್ಲಿದ್ದ ಪಡಿಕ್ಕಲ್ ದ್ವಿಶತಕ ಕನಸು ಭಗ್ನ: ವಿವಾದಾತ್ಮಕ ನಿರ್ಧಾರದಿಂದ ಕ್ರೀಸ್‌ ನಲ್ಲೇ ಬೆರಗಾದ ಎಡಗೈ ಬ್ಯಾಟರ್!

ಲಿಂಕನ್‌ನಲ್ಲಿ ನ್ಯೂಜಿಲೆಂಡ್ ಎ ತಂಡದ ವಿರುದ್ಧ ನಡೆಯುತ್ತಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ. ಆದರೆ, ಅಂಪೈರ್ ನೀಡಿದ ವಿವಾದಾತ್ಮಕ ಔಟ್ ತೀರ್ಪಿನಿಂದಾಗಿ ಕನ್ನಡಿಗ ಪಡಿಕ್ಕಲ್ ಕೇವಲ ಒಂದು ರನ್ ಅಂತರದಲ್ಲಿ ತಮ್ಮ ಚೊಚ್ಚಲ ದ್ವಿಶತಕ ವಂಚಿತರಾಗಿದ್ದಾರೆ.

ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ 199 ರನ್ ಗಳಿಸಿ ದ್ವಿಶತಕದ ಸನಿಹದಲ್ಲಿದ್ದರು. ಗಿಬ್ಸನ್ ಎಸೆದ ಲೆಗ್ ಸೈಡ್ ಎಸೆತವನ್ನು ತಳ್ಳಲು ಯತ್ನಿಸಿದಾಗ ಚೆಂಡು ಬ್ಯಾಟ್‌ಗೆ ತಾಗದೆ ಪ್ಯಾಡ್‌ಗೆ ಸ್ಪರ್ಶಿಸಿ ವಿಕೆಟ್ ಕೀಪರ್ ಮಿಚೆಲ್ ಹೇ ಕೈ ಸೇರಿತ್ತು. ನ್ಯೂಜಿಲೆಂಡ್ ಎ ಆಟಗಾರರು ಅಪೀಲ್ ಮಾಡಿದ ತಕ್ಷಣವೇ ಅಂಪೈರ್ ಬ್ರಾಡ್ ವಿಲ್ಸನ್ ಔಟ್ ಎಂದು ತೀರ್ಪು ನೀಡಿದರು.

ಅಂಪೈರ್ ನಿರ್ಧಾರದಿಂದ ತೀವ್ರ ಆಘಾತಕ್ಕೊಳಗಾದ ಪಡಿಕ್ಕಲ್, ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂದು ಮೈದಾನದಲ್ಲೇ ಅಂಪೈರ್‌ಗೆ ಸೈನ್ಯೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಸ್ವಲ್ಪ ಸಮಯ ಕ್ರೀಸ್‌ನಲ್ಲೇ ನಿಂತು ನಿರಾಸೆಯಿಂದಲೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವದತ್ ಪಡಿಕ್ಕಲ್ ಅವರ 199 ರನ್ ಸಾಹಸದ ಜೊತೆಗೆ ಸಾಯಿ ಸುದರ್ಶನ್, ಯಶ್ ರಾಥೋಡ್ ಹಾಗೂ ವಾಷಿಂಗ್ಟನ್ ಸುಂದರ್ ಗಳಿಸಿದ ಅರ್ಧಶತಕಗಳ ನೆರವಿನಿಂದ ಭಾರತ ಎ ಪಡೆ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಎ ತಂಡ 8 ವಿಕೆಟ್ ನಷ್ಟಕ್ಕೆ 488 ರನ್ ಕಲೆಹಾಕಿದ್ದು, 284 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ಪ್ರಸ್ತುತ ವಾಷಿಂಗ್ಟನ್ ಸುಂದರ್ 51 ರನ್ ಹಾಗೂ ಆಕಾಶ್ ದೀಪ್ ಶೂನ್ಯ ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular