HomeKarnatakaಬಾಕಿ ಉಳಿದ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳಿಗೆ ಆಪ್ಷನ್ ಎಂಟ್ರಿಗೆ KEA ಅವಕಾಶ

ಬಾಕಿ ಉಳಿದ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳಿಗೆ ಆಪ್ಷನ್ ಎಂಟ್ರಿಗೆ KEA ಅವಕಾಶ

ಬೆಂಗಳೂರು: UGNEET-26 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ನ ಸ್ಟ್ರೇ ವೇಕೆನ್ಸಿ-3 ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು  ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವೆಬ್ ಸೈಟ್ ನಲ್ಲಿ ಲಿಂಕ್ ತೆರೆಯಲಾಗಿದೆ.

ಒಟ್ಟು 273 ವೈದ್ಯಕೀಯ ಹಾಗೂ ಎರಡು ದಂತ ವೈದ್ಯಕೀಯ ಸೀಟು ಉಳಿದಿದ್ದು, ಈ ಕಾಲೇಜುಗಳಿಗೆ ಆಪ್ಷನ್ಸ್ ದಾಖಲಿಸಬಹುದು.

ಇದುವರೆಗೂ ಸೀಟು ಹಂಚಿಕೆಯಾಗದ ಹಾಗೂ ಕಾಷನ್ ಡೆಪಾಸಿಟ್ ಕಟ್ಟಿರುವ ಅಭ್ಯರ್ಥಿಗಳು ಆಪ್ಷನ್ಸ್ ದಾಖಲಿಸಲು ಅರ್ಹರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅ.26ರಂದು ಬೆಳಿಗ್ಗೆ ‌10.30ರೊಳಗೆ ಆಪ್ಷನ್ಸ್ ದಾಖಲಿಸಬೇಕು.

ಬಳಿಕ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಕೂಡ ನಾಳೆ ಸಂಜೆಯೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

UGNEET-26: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ನ ಸ್ಟ್ರೇ ವೇಕೆನ್ಸಿ-2 ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು KEA ಪ್ರಕಟಿಸಿದೆ.

ಈ ಸುತ್ತಿನಲ್ಲಿ‌ 13 ವೈದ್ಯಕೀಯ ಮತ್ತು 12 ದಂತ ವೈದ್ಯಕೀಯ ಸೀಟು ಹಂಚಿಕೆಯಾಗಿದ್ದು, ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅ.26 ಕೊನೆ ದಿನವಾಗಿದೆ.

ವಿವಿಧ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಪೌರಾಡಳಿತ ನಿರ್ದೇಶನಾಲಯ, ಇಎಸ್ಐ, ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವೇಳಾಪಟ್ಟಿಯನ್ನು ಪ್ರಕಟಿಸಿದೆ.

ನ.6, ನ.7 ಮತ್ತು ನ.14ರಂದು ನಿರ್ದಿಷ್ಟ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಪೌರಾಡಳಿತ ನಿರ್ದೇಶನಾಲಯದ ಎಲೆಕ್ಟ್ರೀಷಿಯನ್ ಗ್ರೇಡ್- 1 (3 ಹುದ್ದೆ) ಮತ್ರು ಗ್ರೇಡ್- 2 (5 ಹುದ್ದೆ) ಹುದ್ದೆಗಳಿಗೆ ನ.6ರಂದು ಲಿಖಿತ ಪರೀಕ್ಷೆ ಇರಲಿದೆ.

ಇಎಸ್ಐ ನ ಫಾರ್ಮಸಿ ಅಧಿಕಾರಿ (11 ಹುದ್ದೆ) ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ- 23 ಹುದ್ದೆ) ಹಾಗೂ ನರ್ಸಿಂಗ್ ಅಧಿಕಾರಿ (11) ಹುದ್ದೆಗಳಿಗೆ ನ.7ರಂದು ಪರೀಕ್ಷೆ ನಡೆಯಲಿದೆ.

ಪೌರಾಡಳಿತ ನಿರ್ದೇಶನಾಲಯದ ನೀರು ಸರಬರಾಜು ಆಪರೇಟರ್ (122 ಹುದ್ದೆ) ಹಾಗೂ ಸಹಾಯಕ ನೀರು ಸರಬರಾಜು ಆಪರೇಟರ್ (80 ಹುದ್ದೆ) ಹುದ್ದಗಳಿಗೆ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ಅ.14ರಂದು ನಡೆಯಲಿದೆ.

ಅ.14ರಂದು ಮಧ್ಯಾಹ್ನದ ನಂತರ ಈ ಎಲ್ಲ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದೆ.

ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ

KSET-202Results: ಅ.11ರಂದು ನಡೆಸಲಾದ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆಸೆಟ್) 37 ವಿಷಯಗಳ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

ಆಕ್ಷೇಪಣೆಗಳು ಇದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅ.26ರ ಬೆಳಿಗ್ಗೆ‌ 10.30 ಗಂಟೆ ಒಳಗೆ ಇ-ಮೇಲ್ (https://cetonline.Karnataka.gov.in/kea/) ಮೂಲಕ ತಿಳಿಸಬೇಕು.

ಅಂತಿಮ ಕೀ ಉತ್ತರಗಳನ್ನೂ ಪ್ರಕಟಿಸಲಾಗಿದೆ.

ಯಶಸ್ವಿಯಾಗಿ ನಡೆದ ನೇಮಕಾತಿ ಪರೀಕ್ಷೆ

KeaRecruitmentExam: ಕಲ್ಯಾಣ ಕರ್ನಾಟಕ ವೃಂದದ ಭೂಮಾಪಕ, ಗ್ರಾಮ ಆಡಳಿತಾಧಿಕಾರಿ ಮತ್ತು ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಭಾನುವಾರ ಲಿಖಿತ ಪರೀಕ್ಷೆ ಯಶಸ್ವಿಯಾಗಿ ನಡೆಯಿತು.

ಬೆಳಗಿನ ಪರೀಕ್ಷೆಗೆ ಒಟ್ಟು 90,584 ಅಭ್ಯರ್ಥಿಗಳ ಪೈಕಿ ಶೇ 69ರಷ್ಟು ಮಂದಿ ಹಾಜರಾಗಿದ್ದರು. ಮಧ್ಯಾಹ್ನದ ನಂತರದ ಪರೀಕ್ಷೆಗೆ 85,737 ಅಭ್ಯರ್ಥಿಗಳ ಪೈಕಿ ಶೇ 69 ರಷ್ಟು ಮಂದಿ ಹಾಜರಾಗಿದ್ದರು ಎಂದು ಕೆಇಎ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular