HomeKarnatakaಸ್ಟಿಂಗ್ ಆಪರೇಷನ್: ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಮಹಿಳೆ

ಸ್ಟಿಂಗ್ ಆಪರೇಷನ್: ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಮಹಿಳೆ

ಬೆಂಗಳೂರು: ಸ್ಟಿಂಗ್ ಅಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಮಹಿಳೆ ಕೆಲ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಸಿಸಿಬಿ ಪೊಲೀಸರು ನೋಟಿಸ್ ನೀಡುವ ಮುನ್ನವೇ ಸುಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ ಮಹಿಳೆ ಕೃಪಾ ಆಳ್ವಾ, ಮಾಜಿ ಸಿಎಂ ಸಿದ್ದರಾಮಯ್ಯ ತನಗೆ ಯಾವುದೇ ತೊಂದರೆ ಕೊಟ್ಟಿಲ್ಲ. ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಕೂಡ ಆಗಿಲ್ಲ. ನನಗೆ ಹೇಳಿಕೊಟ್ಟಹಾಗೆ ನಾಅನು ಹೇಳಿದ್ದೆ ಅಷ್ಟೇ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗಾಗಿ ರೆಕಾರ್ಡ್ ಮಾಡುವವರ ಅಣತಿಯಂತೆ ಎಲ್ಲವೂ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ಉದ್ದೇಶ ಪೂರ್ವಕವಾಗಿ ಹೇಳಿಕೆ ಪಡೆದು ವಿಡಿಯೋ ಮಾಡಿದ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಗುವ ಸಾಧ್ಯತೆ ಇದೆ.

ಮತ್ತೊಂದೆಡೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದು, ಸ್ಟಿಂಗ್ ವಿವಾದಕ್ಕೆ ಜೆಡಿಎಸ್ ಮೂಲ ಕಾರಣ ಎಂದಿದ್ದಾರೆ. ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ ಎಂಬಾತನಿಂದ ಮೊಬೈಲ್ ಕೊಳ್ಳಲು 50 ಸಾವಿರ ಹಣ ರವಾನೆ ಆಗಿದೆ. ಸ್ಟಿಂಗ್ ವಿಡಿಯೋ ಹರಿಬಿಟ್ಟ ವ್ಯಕ್ತಿ ಕೆನಡಾಗೆ ಹೋಗಿ ವಿಡಿಯೋ ಆಪ್​​ಲೋಡ್ ಮಾಡಿದ್ದಾನೆ. ಇದಕ್ಕೂ ಮುಂಚೆ ಆತನಿಗೆ ಜೆಡಿಎಸ್ ನಿಂದಲೇ 5 ಲಕ್ಷ ಹಣ ಸಂದಾಯವಾಗಿದೆ. ಮೂವರನ್ನು ಅರೆಸ್ಟ್ ಮಾಡಿದ್ರೆ ಈ ವಿಚಾರದ ಸತ್ಯ ಹೊರಬರಲಿದೆ. ಓರ್ವ ಕುಮಾರಸ್ವಾಮಿ ರೈಟ್ ಹ್ಯಾಂಡ್ ಮತ್ತೊಬ್ಬ ಲೆಫ್ಟ್ ಹ್ಯಾಂಡ್, ಇನ್ನೊಬ್ಬ ಮಿಡಲ್ ಹ್ಯಾಂಡ್ ಎಂದವರು ಹೇಳಿದ್ದಾರೆ.

ಮೋಹನ್ ಗೌಡ ಮನೆ ಮೇಲೆ ಸಿಸಿಬಿ ರೈಡ್ ಆಗಿದ್ದು, ಬರೋಬ್ಬರಿ 17 ಪೆನ್​​ಡ್ರೈವ್​​ಗಳು ಸಿಕ್ಕಿವೆ. ಅವುಗಳಲ್ಲಿ ಇರುವ ವಿಚಾರವನ್ನು ಖುದ್ದು ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರೇ ಬಹಿರಂಗ ಪಡಿಸುತ್ತಾರೆ.

ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಏನೇನ್ ಮಾಡಿದ್ರಿ? ಸುಪ್ರೀಂಕೋರ್ಟ್​​ನಲ್ಲಿ ದಾವೆ ಹೂಡಲು ವಕೀಲರಿಗೆ 10 ಲಕ್ಷ ಕೊಟ್ಟ ವಿಚಾರವೂ ಪೆನ್​​ಡ್ರೈವ್​​ನಲ್ಲಿದೆ. ಇನ್ನೊಂದು ವಾರದಲ್ಲಿ ಎಲ್ಲ ಸತ್ಯಾಂಶ ಬಿಚ್ಚಿಡ್ತೇನೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular