HomeKarnatakaಸ್ಮಶಾನದಲ್ಲಿದ್ದ ಮೃತದೇಹ, ಅಸ್ತಿಪಂಜರಗಳ ಅಕ್ರಮ ಮಾರಾಟ: ರುದ್ರಭೂಮಿಯಲ್ಲಿ ದಂಧೆ: ಮೂವರ ಬಂಧನ

ಸ್ಮಶಾನದಲ್ಲಿದ್ದ ಮೃತದೇಹ, ಅಸ್ತಿಪಂಜರಗಳ ಅಕ್ರಮ ಮಾರಾಟ: ರುದ್ರಭೂಮಿಯಲ್ಲಿ ದಂಧೆ: ಮೂವರ ಬಂಧನ

ರಾಯಚೂರು: ಸ್ಮಶಾನದಲ್ಲಿರುವ ಮೃತದೇಹ, ಅಸ್ತಿಪಂಜರಗಳನ್ನೂ ಬಿಡದ ದುಷ್ಕರ್ಮಿಗಳು ಅವುಗಳನ್ನೂ ಅಕ್ರಮವಾಗಿ ಸಾಗಾಟ, ಮಾರಾಟ ಮಾಡುತ್ತಿರುವ ದಂಧೆ ರಾಯಚೂರಿನಲ್ಲಿ ಬಯಲಾಗಿದೆ.

ಸ್ಮಶಾನದಲ್ಲಿ ಹೂಳಲಾಗಿರುವ ಮೃತದೇಹಗಳು ಹಾಗೂ ಅಸ್ತಿಪಂಜರಗಳನ್ನ ಅಕ್ರಮವಾಗಿ ಖಾಸಗಿ ಮೆಡಿಕಲ್​ ಕಾಲೇಜಿಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕೇವಲ 500 ರೂ.ಗೆ ಸ್ಮಶಾನದ ಸಿಬ್ಬಂದಿ ಮೃತದೇಹಗಳನ್ನ ಮಾರಾಟ ಮಾಡುತ್ತಿದ್ದು, ಸ್ಥಳೀಯರೇ ಈ ದಂಧೆಯನ್ನು ಬಯಲಿಗೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಈ ದಂಧೆ ಬೆಳಕಿಗೆ ಬಂದಿದೆ. ಅಂತ್ಯಕ್ರಿಯೆ ನಡೆಸಿ ಹೂಳಲಾಗಿರುವ ಮೃತದೇಹಗಳನ್ನ ಖಾಸಗಿ ಮೆಡಿಕಲ್ ಕಾಲೇಜಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮೃತದೇಹಗಳನ್ನ ಹೊರತೆಗೆದು ದೊಡ್ಡ ದೊಡ್ಡ ಕಲ್ಲುಗಳಿಂದ ತುಂಡರಸಿ, ಅಂಗಾಂಗಗಳನ್ನೂ ಮಾರಾಟ ಮಾಡಲಾಗುತ್ತಿದೆ.

ಮೃತದೇಹಗಳ ಅಂಗಾಂಗಗಳನ್ನ ಬೇರ್ಪಡಿಸುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ. ಈ ಮೃತದೇಹಗಳನ್ನ ಕೇವಲ 200ರಿಂದ 500 ರೂ.ಗೆ, ಮಾರಾಟ ಮಾಡುತ್ತಿದ್ದರು. ಹೀಗೆ ಮಾರಾಟ ಮಾಡಿದ ಮೃತದೇಹಗಳನ್ನ ಮೆಡಿಕಲ್ ವಿದ್ಯಾರ್ಥಿಗಳಿಂದ ಬಳಕೆಯಾಗಿರುವ ಆರೋಪ ಕೇಳಿಬಂದಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರೇ ಖಾಸಗಿ ಮೆಡಿಕಲ್ ಕಾಲೇಜಿನ ಇಬ್ಬರು ಸಿಬ್ಬಂದಿ ಹಾಗೂ ಸ್ಮಶಾನದ ಸಿಬ್ಬಂದಿ ಸೇರಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಮಶಾನದ ಸಿಬ್ಬಂದಿ ವಿರೇಶ್​​, ಖಾಸಗಿ ಮೆಡಿಕಲ್ ಕಾಲೇಜು ಸಿಬ್ಬಂದಿ ರಾಜು ಹಾಗೂ ಅಪ್ಸರ್ ಬಂಧಿತ ಆರೋಪಿಗಳು. ವಿಚಾರಣೆ ವೇಳೆ ಈ ಮೂವರು ಮೃತದೇಹಗಳ ಸಾಗಾಟ, ಮಾರಾಟ ಕುರುತು ತಪ್ಪೊಪ್ಪಿಕೊಂಡಿದ್ದಾರೆ.

ನೇತಾಜಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ದಂಧೆ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular