HomeEntertainmentಸಂಗೀತಪ್ರಿಯರ ಗಮನ ಸೆಳೆಯುತ್ತಿರುವ 'ಗಾಮಿನಿ' ಚಿತ್ರದ ಹೊಸ ಹಾಡು: ಅನುರಾಧಾ ಭಟ್ ಗಾಯನಕ್ಕೆ ಮನಸೋತ ಪ್ರೇಕ್ಷಕರು

ಸಂಗೀತಪ್ರಿಯರ ಗಮನ ಸೆಳೆಯುತ್ತಿರುವ ‘ಗಾಮಿನಿ’ ಚಿತ್ರದ ಹೊಸ ಹಾಡು: ಅನುರಾಧಾ ಭಟ್ ಗಾಯನಕ್ಕೆ ಮನಸೋತ ಪ್ರೇಕ್ಷಕರು

ಕನ್ನಡ ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ ‘ಗಾಮಿನಿ’ ಸಿನಿಮಾದ ಮಧುರವಾದ ಗೀತೆಯೊಂದು ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ. ‘ಪ್ರೀತಿ ಅನ್ನೋ ಮೋಹದ ಬಲೆಯಲ್ಲಿ’ ಎಂಬ ಸಾಲುಗಳಿಂದ ಸಾಗುವ ಈ ಭಾವಪೂರ್ಣ ಹಾಡನ್ನು ಖ್ಯಾತ ಗಾಯಕಿ ಅನುರಾಧಾ ಭಟ್ ತಮ್ಮ ಮಧುರ ಧ್ವನಿಯಲ್ಲಿ ಹಾಡಿದ್ದು, ಕೇಳುಗರ ಮನ ಮುಟ್ಟುವಂತೆ ಮೂಡಿಬಂದಿದೆ.

ರಾಹುಲ್ ವಸ್ತರ್ ಅವರ ಆಕರ್ಷಕ ಸಂಗೀತ ಸಂಯೋಜನೆ ಈ ಹಾಡಿಗಿದ್ದು, ದಿನೇಶ್ ಐತನಹಳ್ಳಿ ಹಾಗೂ ರಾಮಾರ್ಜುನ್ ಅವರು ಅರ್ಥಪೂರ್ಣ ಸಾಹಿತ್ಯ ರಚಿಸಿದ್ದಾರೆ. ಸಾಹಿತ್ಯ ಮತ್ತು ಸಂಗೀತದ ಅತ್ಯುತ್ತಮ ಸಂಯೋಜನೆಯಿಂದಾಗಿ ಈ ಗೀತೆ ಬಿಡುಗಡೆಯಾದ ಅಲ್ಪ ಸಮಯದಲ್ಲೇ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರೀತಿಯ ಸುಂದರ ಭಾವನೆಗಳನ್ನು ಕಟ್ಟಿಕೊಡುವ ಈ ಹಾಡು ಯುವಜನರ ಮನಸ್ಸಿಗೆ ಹತ್ತಿರವಾಗುವಂತಿದೆ.

ಗುರುಪ್ರಕಾಶ್ ಬೆಳತಂಗಡಿ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಂಜನ್ ತಮ್ಮಯ್ಯ, ಮನೀಷಾ, ಶ್ರೇಯಾ ಸೇರಿದಂತೆ ಬೃಹತ್ ತಾರಾಗಣವೇ ಅಭಿನಯಿಸಿದೆ. ರಾಜು, ರವೀಶ್, ರಾಘವೇಂದ್ರ, ಉಷಾ, ಶೇಖರ್, ಶರಣ್ಯಾ, ನಿರಂಜನ್, ಸುಬ್ರಹ್ಮಣ್ಯ ಹಾಗೂ ಯತೀಶ್ ಮುಂತಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೀಪು ಅರಸೀಕೆರೆ ಮತ್ತು ಕಿರಣ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ರಾಮಾರ್ಜುನ್ ಅವರ ಸಂಕಲನವಿದೆ. ಸದ್ಯ ಬಿಡುಗಡೆಯಾಗಿರುವ ಈ ವಿಡಿಯೋ ಹಾಡು ಯೂಟ್ಯೂಬ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular