HomeUncategorizedಮಗು ಹುಟ್ಟಿದ ಆರು ವಾರದಲ್ಲೇ ವಿಕ್ಟೋರಿಯಾಸ್ ಸೀಕ್ರೆಟ್ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಮಾಡೆಲ್ ಬಾರ್ಬರಾ...

ಮಗು ಹುಟ್ಟಿದ ಆರು ವಾರದಲ್ಲೇ ವಿಕ್ಟೋರಿಯಾಸ್ ಸೀಕ್ರೆಟ್ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಮಾಡೆಲ್ ಬಾರ್ಬರಾ ಪಾಲ್ವಿನ್

ಮಗುವಿಗೆ ಜನ್ಮ ನೀಡಿ ಕೇವಲ ಆರು ವಾರಗಳWithin 6 weeks) ಬಳಿಕ ವಿಕ್ಟೋರಿಯಾಸ್ ಸೀಕ್ರೆಟ್ ರಾಂಪ್ ಮೇಲೆ ಹೆಜ್ಜೆ ಹಾಕಿ ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದ ಖ್ಯಾತ ಸೂಪರ್ ಮಾಡೆಲ್ ಬಾರ್ಬರಾ ಪಾಲ್ವಿನ್, ತಮ್ಮ ಕ್ಯುಟ್ ಹಾಗೂ ಗ್ಲಾಮರಸ್ ಲುಕ್‌ನ ಹಿಂದಿನ ಅಸಲಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಗಂಡು ಮಗುವಿನ ಆಗಮನದ ಬಳಿಕ ಅವರು ಮಾಡಿರುವ ಈ ಅದ್ಭುತ ಕಮ್‌ಬ್ಯಾಕ್ ಸೋಷಿಯಲ್ ಮೀಡಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಗುವಿನ ಜನನದ ಬಳಿಕ ಕೇವಲ ಆರು ವಾರಗಳಲ್ಲಿ ಕೆಲಸಕ್ಕೆ ಮರಳಿದ ಅನುಭವದ ಕುರಿತು ಮಾತನಾಡಿದ ಬಾರ್ಬರಾ ಪಾಲ್ವಿನ್, ಅಮೆರಿಕದಲ್ಲಿ ಅನೇಕ ಮಹಿಳೆಯರು ಹೆರಿಗೆಯಾದ ಆರು ವಾರಗಳ ಒಳಗೆ ಕೆಲಸಕ್ಕೆ ಮರಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ವಿಕ್ಟೋರಿಯಾಸ್ ಸೀಕ್ರೆಟ್ ತಂಡವು ಮಹಿಳೆಯರ ಪರವಾಗಿ ನಿಂತು ತಮಗೆ ಈ ಅವಕಾಶ ನೀಡಿರುವುದು ಹೆಮ್ಮೆಯ ವಿಷಯ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮಗಳ ಫೋಟೋ ಹಂಚಿಕೊಳ್ಳುವುದರ ಜೊತೆಗೆ, ರ‍್ಯಾಂಪ್ ವಾಕ್ ಮಾಡುವಾಗ ತೆರೆಮರೆಯಲ್ಲಿ ನಡೆದ ಮಜೆಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ತೆರೆಮರೆಯಲ್ಲಿ ತಮ್ಮ ಬ್ರಾ ಒಳಗೆ ನರ್ಸಿಂಗ್ ಪ್ಯಾಡ್‌ಗಳನ್ನು ಸ್ಯೂ (ಕುಂಟೆ) ಮಾಡಲಾಗಿತ್ತು ಎಂದು ಹೇಳುವ ಮೂಲಕ ಅವರು ಗ್ಲಾಮರ್ ಜಗತ್ತಿನ ವಾಸ್ತವತೆಯನ್ನು ಹೊರಹಾಕಿದ್ದಾರೆ.

ತಮ್ಮ ಸುಂದರ ಯಶಸ್ಸಿನ ಹಿಂದೆ ಕುಟುಂಬ ಹಾಗೂ ಸ್ನೇಹಿತರ ದೊಡ್ಡ ಬೆಂಬಲವಿದೆ ಎಂದು ತಿಳಿಸಿರುವ ಅವರು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಎಲ್ಲ ತಾಯಂದರಿಗೂ ಇಂತಹ ಆಯ್ಕೆಗಳು ಸುಲಭವಾಗಿ ಸಿಗುವುದಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡಿರುವ ಅವರು, ತಾಯಂದಿರಿಗೆ ಹೆಚ್ಚಿನ ಸಮಯ ಹಾಗೂ ಬೆಂಬಲ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಂಪ್ ಮೇಲಿನ ಗ್ಲಾಮರ್ ಬದುಕಿನಾಚೆಗೆ ತಮ್ಮ ನಿಜ ಜೀವನದ ದೈನಂದಿನ ಕಷ್ಟಗಳನ್ನು ಹೇಳಿಕೊಂಡಿರುವ ಅವರು, ಕೆಲವೊಮ್ಮೆ ಸರಿಯಾಗಿ ಸ್ನಾನ ಮಾಡಲು ಅಥವಾ ನೆಮ್ಮದಿಯಾಗಿ ಊಟ ಮಾಡಲು ಸಮಯ ಸಿಗದಿರುವುದೇ ದೊಡ್ಡ ಸಾಧನೆಯಂತೆನಿಸುತ್ತದೆ ಎಂದಿದ್ದಾರೆ. ತಾಯ್ತನ ಎಂಬುದು ಕಷ್ಟ, ಸುಂದರ ಹಾಗೂ ಭಾವನಾತ್ಮಕ ಅನುಭವವಾಗಿದ್ದು, ಎಲ್ಲ ಹೊಸ ತಾಯಂದರೂ ತಮ್ಮನ್ನು ತಾವು ಪ್ರಶಂಸಿಸಿಕೊಳ್ಳಬೇಕು ಎಂದು ಕರೆನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular