HomeEntertainmentಕಲ್ಕಿ 2 ಚಿತ್ರದ ಸೆಟ್‌ನಿಂದ ಬಂತು ಸಿಹಿಸುದ್ದಿ: ಬೈರವನ ಹೊಸ ಲುಕ್ ಕಂಡು ಥ್ರಿಲ್ ಆದ...

ಕಲ್ಕಿ 2 ಚಿತ್ರದ ಸೆಟ್‌ನಿಂದ ಬಂತು ಸಿಹಿಸುದ್ದಿ: ಬೈರವನ ಹೊಸ ಲುಕ್ ಕಂಡು ಥ್ರಿಲ್ ಆದ ಸಿನಿಪ್ರಿಯರು

ಬಾಲಿವುಡ್ ಹಾಗೂ ಟಾಲಿವುಡ್‌ ಅಂಗಳದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಕಲ್ಕಿ ಚಿತ್ರದ ಮುಂದುವರಿದ ಭಾಗವಾದ ಕಲ್ಕಿ 2 ಚಿತ್ರದ ಚಿತ್ರೀಕರಣ ಪುನರಾರಂಭಗೊಂಡಿದೆ. ನಟ ಪ್ರಭಾಸ್ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಚಿತ್ರತಂಡವು ಸೆಟ್‌ನಿಂದ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಬೈರವ ಪಾತ್ರದಲ್ಲಿ ನಟ ಪ್ರಭಾಸ್ ಮತ್ತೆ ಶೂಟಿಂಗ್‌ಗೆ ಕಣಕ್ಕಳಿದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಲು ನಿರ್ಮಾಪಕರು ನೆರಳಿನ ದೃಶ್ಯಗಳ ಮೂಲಕ ಅವರ ಲುಕ್ ಅನ್ನು ಆಕರ್ಷಕವಾಗಿ ತೋರಿಸಿದ್ದಾರೆ. ಸದ್ಯಕ್ಕೆ ಚಿತ್ರದ ಬಿಡುಗಡೆ ದಿನಾಂಕ ಅಥವಾ ಇತರೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಡದಿದ್ದರೂ, ಸುಮತಿ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ ಎಂದು ತಿಳಿಸಲಾಗಿದೆ.

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರವು 2028ರಲ್ಲಿ ತೆರೆಕಾಣುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮೊದಲ ಭಾಗದ ಇತರೆ ಪ್ರಮುಖ ತಾರಾಗಣವೇ ಈ ಬಾರಿಯೂ ತಮ್ಮ ಪಾತ್ರಗಳಲ್ಲಿ ಮುಂದುವರಿಯಲಿದ್ದು, ಪ್ರಭಾಸ್ ಅವರ ಹುಟ್ಟುಹಬ್ಬದ ದಿನದಂದು ಬಂದಿರುವ ಈ ಅಪ್ಡೇಟ್ ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular