HomeKarnatakaಮಗನಿಗೆ ಸ್ಕೂಟರ್ ನೀಡಿದ್ದಕ್ಕೆ ಮಹಿಳೆಗೆ 26,500 ರೂ. ದಂಡ

ಮಗನಿಗೆ ಸ್ಕೂಟರ್ ನೀಡಿದ್ದಕ್ಕೆ ಮಹಿಳೆಗೆ 26,500 ರೂ. ದಂಡ

ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಚಲಾಯಿಸಲು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ನೋಂದಾಯಿತ ಮಾಲೀಕರಿಗೆ ನ್ಯಾಯಾಲಯವು 26,500 ರೂ. ದಂಡ ವಿಧಿಸಿದೆ.

ಶಿವಮೊಗ್ಗ ನಗರದ ಆಲ್ಕೊಳ ಸರ್ಕಲ್ ಬಳಿ ಸಂಚಾರ ಪೊಲೀಸರು ನಡೆಸಿದ ತಪಾಸಣೆ ವೇಳೆ ಅಪ್ರಾಪ್ತ ಬಾಲಕನೊಬ್ಬ ಸ್ಕೂಟರ್ ಚಲಾಯಿಸುತ್ತಿರುವುದು ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ನ್ಯಾಯಾಲಯ ದಂಡ ವಿಧಿಸಿದೆ.

ಘಟನೆಯ ವಿವರ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನಾಂಕ 09-10-2026ರಂದು ಸಂಜೆ 5:57ರ ಸುಮಾರಿಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸ್ವಪ್ನಾ ಎಲ್. ಹಾಗೂ ಸಿಬ್ಬಂದಿಗಳಾದ ಸೂರ್ಯನಾಯ್ಕ (ಸಿಪಿಸಿ-1275) ಮತ್ತು ಮೊಹಮ್ಮದ್ ಫಾರೂಕ್ (ಸಿಪಿಸಿ-1371) ಅವರು ಆಲ್ಕೊಳ ಸರ್ಕಲ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ವಿನೋಬನಗರ ಪೊಲೀಸ್ ಚೌಕಿ ರಸ್ತೆಯ ಕಡೆಯಿಂದ ಆಲ್ಕೊಳ ಸರ್ಕಲ್ ಕಡೆಗೆ ಬರುತ್ತಿದ್ದ ಟಿವಿಎಸ್ ಕಂಪನಿಯ ಜುಪಿಟರ್ ಸ್ಕೂಟರ್‌ ಅನ್ನು ಪೊಲೀಸರು ಗಮನಿಸಿದ್ದಾರೆ. ಈ ಸ್ಕೂಟರ್ ಅನ್ನು ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಸ್ಕೂಟರ್‌ನ ನೋಂದಾಯಿತ ಮಾಲೀಕರು ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿರುವುದು ತಿಳಿದುಬಂದಿದೆ. ಹೀಗಾಗಿ, ವಾಹನದ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಲಘು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ನ್ಯಾಯಾಲಯದಿಂದ ₹26,500 ದಂಡ

ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ ನಾಲ್ಕನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ವಾಹನದ ನೋಂದಾಯಿತ ಮಾಲೀಕರಿಗೆ ₹26,500 ದಂಡ ವಿಧಿಸಿದೆ ಎಂದು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪೋಷಕರಿಗೆ ಎಚ್ಚರಿಕೆ

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ವಾಹನ ಅಥವಾ ಇತರ ಮೋಟಾರು ವಾಹನಗಳನ್ನು ಚಲಾಯಿಸಲು ನೀಡುವುದು ಕಾನೂನುಬಾಹಿರವಾಗಿದ್ದು, ಇದರಿಂದ ಅಪಘಾತಗಳ ಅಪಾಯವೂ ಹೆಚ್ಚಾಗುತ್ತದೆ. ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸಂಚಾರ ನಿಯಮಗಳ ಪಾಲನೆಯ ದೃಷ್ಟಿಯಿಂದ ಪೋಷಕರು ಮತ್ತು ವಾಹನ ಮಾಲೀಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಅಪ್ರಾಪ್ತರಿಗೆ ವಾಹನ ನೀಡುವ ಪ್ರಕರಣಗಳಲ್ಲಿ ವಾಹನದ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ‘ಕಿರಿಯ ಸಂಶೋಧನಾರ್ಥಿ’ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಎಎನ್ ಆರ್ ಎಫ್ -ಐಆರ್ ಜಿ ಸಂಶೋಧನಾ ಯೋಜನೆ: “ಕ್ಯಾಸನೂರು ಅರಣ್ಯ ಕಾಯಿಲೆಗೆ (KFD) ಬಹು-ವೇದಿಕೆಯ ಲಸಿಕೆ ತಂತ್ರಗಳ ವೈಜ್ಞಾನಿಕ ವಿನ್ಯಾಸ: ಸಬ್‌ಯೂನಿಟ್ ಚಿಮೆರಾ ಮತ್ತು ವೈರಸ್ ಸದೃಶ್ಯ ಕಣ ಆಧಾರಿತ ವಿಧಾನಗಳು” ಯೋಜನೆಯಡಿ ಖಾಲಿ ಇರುವ ‘ಕಿರಿಯ ಸಂಶೋಧನಾರ್ಥಿ’ (ಜೆಆರ್ ಎಫ್ ) ಹುದ್ದೆಯ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಸೂಕ್ಷ್ಮಾಣು ಜೀವಶಾಸ್ತ್ರ (Microbiology), ಜೈವಿಕ ತಂತ್ರಜ್ಞಾನ (Biotechnology), ಜೀವರಸಾಯನಶಾಸ್ತ್ರ (Biochemistry) ಅಥವಾ ಜೀವವಿಜ್ಞಾನದ ಇತರ ವಿಷಯಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎಸ್ಸಿ.ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಫೆಲೋಶಿಪ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಎ ಎನ್ ಆರ್ ಎಫ್ -ಐಆರ್ ಜಿ ಮಾರ್ಗಸೂಚಿಯನ್ವಯ 3 ವರ್ಷಗಳ ಅವಧಿಗೆ ಪ್ರತಿ ತಿಂಗಳು ರೂ. 37,000/- + ಹೆಚ್ ಆರ್ ಎ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರ, ವಿದ್ಯಾರ್ಹತೆ ಹಾಗೂ ಅನುಭವದ ಧೃಢೀಕೃತ ದಾಖಲಾತಿಗಳೊಂದಿಗೆ ಪ್ರೊ. ಎನ್.ಬಿ. ತಿಪ್ಪೇಸ್ವಾಮಿ, ಪ್ರಧಾನ ಸಂಶೋಧಕರು, ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ – 577451 ಇಲ್ಲಿಗೆ ನೇರವಾಗಿ ಅಥವಾ ಇ-ಮೇಲ್ [email protected] ಮೂಲಕ ದಿನಾಂಕ 28/10/2026ರ ಒಳಗಾಗಿ ತಲುಪುವಂತೆ ಸಲ್ಲಿಸಬೇಕು.

ಅರ್ಜಿಯ ನಮೂನೆ ಹಾಗೂ ಹೆಚ್ಚಿನ ವಿವರಗಳನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.kuvempu.ac.in ನಲ್ಲಿ ಪಡೆಯಬಹುದು. ಸಂದರ್ಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular