HomeKarnatakaಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆ ನಡೆಸುವಂತೆ ಸಚಿವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆ ನಡೆಸುವಂತೆ ಸಚಿವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸಬೇಕು. ಇದು ಯಾರದೋ ಒಬ್ಬರ ಜವಾಬ್ದಾರಿಯಲ್ಲ. ಇದು ಎಲ್ಲರ ಜವಾಬ್ದಾರಿ‌.‌ ನಾನು ಒಬ್ಬರ ಮೇಲೆಯೆ ಹೊರೆ ಹಾಕಲು ಇಷ್ಟಪಡುವುದಿಲ್ಲ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ರೈತರು ಕಬ್ಬು ಬೆಳೆದರೆ ಕಾರ್ಖಾನೆ ಇರಲಿದೆ. ಕಾರ್ಖಾನೆಗಳು ಸಹ ನಷ್ಟವಾಗದಂತೆ ಕಬ್ಬನ್ನು ಅರೆಯಬೇಕಿದೆ. ಆಗ ಇಬ್ಬರೂ ಉಳಿಯುತ್ತಾರೆ.‌ ಇದು ಎಲ್ಲರ ಬದುಕಿನ ಪ್ರಶ್ನೆ. ರೈತರ, ಸಕ್ಕರೆ ಕಾರ್ಖಾನೆಗಳ, ಸರ್ಕಾರದ ಸಮಸ್ಯೆಗಳು ಏನಿವೆ ಎಂದು ನಾವು ಒಟ್ಟಾಗಿ ಚರ್ಚಿಸಬೇಕಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರ ಪರಿಹಾರ ವಿಚಾರವಾಗಿ ಚರ್ಚಿಸಲು ಕೇಂದ್ರ ಸರ್ಕಾರದ ಬಳಿ ಸಮಯ ಕೇಳಿದ್ದೇನೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ. ಜನಪ್ರತಿನಿಧಿಗಳಿಗೆ ಕಬ್ಬು ಬೆಳಗಾರರ ಸಮಸ್ಯೆಗಳ ಚರ್ಚೆಯ ವಿಚಾರ ತಿಳಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತರ ಬಳಿಯು ಪ್ರತ್ಯೇಕವಾಗಿ ಮಾತಾಡಬೇಕಿದೆ. ಕೇಂದ್ರ ಮಂತ್ರಿಗಳ ಬಳಿಯೂ ಮಾತನಾಡುತ್ತೇನೆ.‌ ಅವರೂ ಸಹ ತಮ್ಮ ಕೈಲಾದಷದ್ಟು ಒಳ್ಳೆಯ ಕೆಲಸ‌ ಮಾಡಿದ್ದಾರೆ. ಈ ಸಮಸ್ಯೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಬಗೆಹರಿಸಬೇಕಿದೆ ಎಂದು ಹೇಳಿದರು.

ಸಭೆ ನಡೆಸಲು ಎಲ್ಲರ ಅನುಕೂಲಗಳಿಗೆ ಹೊಂದಿಕೆಯಾಗುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಬೆಳಗಾವಿಯಲ್ಲಿ ರೈತರಿಗೆ ಮಾತು ಕೊಟ್ಟು ಬಂದಿದ್ದೇನೆ. ಕೇಂದ್ರ ಸಚಿವರು, ಸಂಸದರು ಆ‌‌ ಭಾಗದ ಮಂತ್ರಿಗಳಿಗೆ ಆಹ್ವಾನಿಸಲಾಗುವುದು ಎಂದು ಹೇಳಿದರು‌.

ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಸಚಿವರಿಗೆ ಸೂಚನೆ

ಸಚಿವರೊಂದಿಗೆ ಸೋಮವಾರ ಸಭೆ ನಡೆಸಿದ ವಿಚಾರದ ಬಗ್ಗೆ ಕೇಳಿದಾಗ, “ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಚುನಾವಣಾ ಆಯೋಗದವರು 27 ರಂದು ಸಹ ಹೊಸ ಮತದಾರರ ಪಟ್ಟಿ ನೀಡುತ್ತಾರೆ. ಡಿ. 31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್‌ನ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಬೆಂಗಳೂರು ನಗರದಲ್ಲಿ ಸಿದ್ದತೆ ಮಾಡಿಕೊಳ್ಳಬೇಕಲ್ಲವೇ? ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಮಾಡಬಹುದು. ಹೀಗಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರಿಗೆ ಹೇಳಿದ್ದೇನೆ” ಎಂದರು.

ಪಂಚಾಯತ್ ಮಟ್ಟದಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಣ ಕೊಡಬೇಕೆಂದು ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್‌ ವೇಳೆ ತಿರ್ಮಾನವಾಗಿತ್ತು. ಹೀಗಾಗಿ ಶಾಸಕರಿಗೆ ಅನುದಾನಕ್ಕೆ ವರದಿ ಸಲ್ಲಿಸಲು ಹೇಳಿದ್ದೇನೆ ಹಾಗೂ ಕರೆ ಮಾಡಿ ಹಬ್ಬಕ್ಕೆ ಶುಭಕೋರಿದ್ದೇನೆ. ಅನುದಾನ ವಿಚಾರ ಬೆಂಗಳೂರು ಶಾಸಕರನ್ನ ಕರೆದು ಮಾತಾಡಿದ್ದೇನೆ‌ ಎಂದರು.

ಇದೇ ವೇಳೆ ರಾಜ್ಯದ ಸಮಸ್ತ ಜನತೆಗೂ ಆಯುಧ ಪೂಜೆಯ ಶುಭಾಶಯಗಳು.‌ ನಾಡಿನ‌ ಜನರಿಗೆ ಒಳಿತಾಗಲಿ. ರೈತ, ಕಾರ್ಮಿಕ, ಶ್ರಮಿಕ ವರ್ಗಗಳ ಪರಿಕರಗಳಿಗೆ ಪೂಜೆ ಸಲ್ಲಿಸಲಾಗಿದೆ. ಸರ್ಕಾರಿ, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಲಾಗಿದೆ. ಎಲ್ಲರ ಪ್ರಯಾಣ ಸುಖಕರವಾಗಿ, ಸುರಕ್ಷಿತವಾಗಿರಲಿ ಎಂದು ಚಾಮುಂಡಿಯ ಆಶೀರ್ವಾದ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular