HomeKarnatakaಸೋದರನ ಜೊತೆಯೇ ಪತ್ನಿಯ ಅಕ್ರಮ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

ಸೋದರನ ಜೊತೆಯೇ ಪತ್ನಿಯ ಅಕ್ರಮ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

ಆನೇಕಲ್: ಪತಿಯ ಸೋದರ ಸಂಬಂಧಿ ಜೊತೆಯೇ ಪತ್ನಿ ಅನೈತಿಕ ಸಂಬಂಧ ಹೊಂದ್ದಲ್ಲದೇ ಗರ್ಭವತಿಯಾಅದ ವಿಷಯ ತಿಳಿದ ಪತಿ ಅನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.

ಇಲ್ಲಿನ ನೆರಿಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟೋ ಡ್ರೈವರ್ ಚಾಲಕನಾಗಿದ್ದ ಮುನಿಕೃಷ್ಣ (35) ಮೃತ ವ್ಯಕ್ತಿ. ಪತ್ನಿಯ ಅನೈತಿಕ ಸಂಬಂಧಕ್ಕೆ ಕೃತ್ಯಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುನಿಕೃಷ್ಣ 10 ವರ್ಷಗಳ ಹಿಂದೆ ನಯನ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಒಬ್ಬ ಗಂಡು ಮಗ ಇದ್ದಾನೆ. ಪ್ರಸ್ತುತ ನಯನ ಎರಡನೇ ಮಗುವಿನ ಗರ್ಭಿಣಿಯಾಗಿದ್ದರು. ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇದ್ದಾಗ ಕುಮಾಅರ ಎಂಬ ಸಂಬಂಧಿ ದಂಪತಿ ಮಧ್ಯೆ ಎಂಟ್ರಿ ಕೊಟ್ಟಿದ್ದಾನೆ.

ಕುಮಾರ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈತ ನಯನಾಳನ್ನು ಕೆಲಸಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಸಂಬಂಧದಲ್ಲಿ ತಮ್ಮನಾಗಿರೋದ್ರಿಂದ ಯಾರು ಪ್ರಶ್ನೆ ಮಾಡಿರಲಿಲ್ಲ. ಆದರೆ ಕಳೆದೆರಡು ವರ್ಷದಿಂದ ಮುನಿಕೃಷ್ಣನ ಪತ್ನಿ ನಯನ ಹಾಗೂ ಕುಮಾರನ ನಡುವೆ ಪ್ರೀತಿ-ಪ್ರೇಮ-ಪ್ರಣಯ ಶುರುವಾಗಿತ್ತು. ಮುನಿಕೃಷ್ಣ ಮನೆಯಿಂದ ಆಟೋ ತೆಗೆದುಕೊಂಡು ಹೋಗುತ್ತಿದ್ದಂತೆ ಕುಮಾರ ಇತ್ತ ಮನೆಗೆ ಬರುತ್ತಿದ್ದ.

ಕೆಲ ದಿನಗಳ ಹಿಂದೆ ಮುನಿಕೃಷ್ಣನಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದ ಕುಮಾರ, ನಯನ ಹಾಗೂ ತಾನು ಇಬ್ಬರು ಜೊತೆಗಿರುವ ಫೋಟೋ, ಅಸಭ್ಯ ವಿಡಿಯೋಗಳನ್ನ ಕಳಿಸಿದ್ದ. ಜೊತೆಗೆ ಇಬ್ಬರು ವಾಟ್ಸಾಪ್ ಚಾಟ್ ಮಾಡಿಕೊಂಡಿರೋದನ್ನ ಕಳುಹಿಸಿದ್ದ. ಅಲ್ಲದೇ ನಯನಾಳ ಹೊಟ್ಟೆಯಲ್ಲಿರುವುದು ತನ್ನ ಮಗು ಎಂದು ಮೆಸೇಜ್ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಮುನಿಕೃಷ್ಣ ಹಾಗೂ ನಯನ ನಡುವೆ ಗಲಾಟೆಯಾಗಿತ್ತು. ಬಳಿಕ ನಯನ ತವರು ಮನೆ ಸೇರಿದ್ದಳು.

ಇಷ್ಟಾದರೂ ಸುಮ್ಮನಾಗದ ಕುಮಾರ, ಮುನಿಕೃಷ್ಣನಿಗೆ ಪದೇ ಪದೇ ಅವಮಾನಿಸುವುದು. ರಸ್ತೆಯಲ್ಲಿ ಹೋಗುವಾಗ ನಿಂದಿಸುವುದು. ಮನಬಂದಂತೆ ಮಾತನಡುವುದು ಮಾಡುತ್ತಾ ಟಾರ್ಚರ್ ಕೊಡುತ್ತಿದ್ದನಂತೆ. ಇದರಿಂದ ಮುನಿಕೃಷ್ಣ ಬೇಸರಗೊಂಡಿದ್ದ.

ನಯನ ಹಾಗೂ ಕುಮಾರ್ ನಡುವಿನ ಸಂಬಂಧದ ಬಗ್ಗೆ ಗ್ರಾಮದಲ್ಲಾಗಲಿ, ಕುಟುಂಬದವರಿಗಾಗಲಿ ಸಂಶಯ ಬಂದಿರಲಿಲ್ಲ. ಮುನಿಕೃಷ್ಣ, ಆತ್ಮಹತ್ಯೆಗೆ ಒಂದು ದಿನ ಮೊದಲು ತನ್ನ ಸಹೋದರನಿಗೆ ಕರೆ ಮಾಡಿ ವಿಷಯವನ್ನೆಲ್ಲ ಹೇಳಿದ್ದನಂತೆ. ಮರುದಿನ ನೇಣಿಗೆ ಕೊರಳೊಡ್ದಿದ್ದಾರೆ.

ವಿಷಯ ತಿಳಿದ ಕುಟುಂಬಸ್ಥರು ನಯನ ಹಾಗೂ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular