HomeEntertainmentಬಿಗ್‌ ಬಾಸ್‌ ಕನ್ನಡ 13: ಕಾವ್ಯ ಮುನಿರಾಜು ಗೌಡ ಎಲಿಮಿನೇಟ್‌

ಬಿಗ್‌ ಬಾಸ್‌ ಕನ್ನಡ 13: ಕಾವ್ಯ ಮುನಿರಾಜು ಗೌಡ ಎಲಿಮಿನೇಟ್‌

ಬೆಂಗಳೂರು: ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರ ಮನೆಯಲ್ಲಿ ಎಲಿಮಿನೇಷನ್‌ ಪ್ರಕ್ರಿಯೆ ಮುಂದುವರಿದಿದೆ. ಕಳೆದ ವಾರ ಸಂಗೀತಾ ಭಟ್‌ ಮತ್ತು ಮಾಡರ್ನ್‌ ಮಹಾಕವಿ ಮಂಜ ಶೋನಿಂದ ಹೊರಬಿದ್ದಿದ್ದರು. ಇದೀಗ ಈ ವಾರ ಕಾವ್ಯ ಮುನಿರಾಜು ಗೌಡ ಅವರ ಬಿಗ್‌ ಬಾಸ್‌ ಪಯಣ ಅಂತ್ಯಗೊಂಡಿದೆ. ಕಾವ್ಯ ಎಲಿಮಿನೇಟ್‌ ಆಗುತ್ತಿದ್ದಂತೆ ಮನೆಯಲ್ಲಿದ್ದ ಸ್ಪರ್ಧಿಗಳು ಭಾವುಕರಾದರು.

ಈ ವಾರದ ಎಲಿಮಿನೇಷನ್‌ ಪಟ್ಟಿಯಲ್ಲಿ ತಾಂಡವ್‌ ರಾಮ್‌, ಸೋನಿಕಾ ಗೌಡ ಮತ್ತು ಕಾವ್ಯ ಮುನಿರಾಜು ಗೌಡ ಇದ್ದರು. ಈ ಮೂವರಲ್ಲಿ ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿತ್ತು. ಈ ನಡುವೆ ಕಿಚ್ಚ ಸುದೀಪ್‌ ಅವರು ಈ ವಾರ ಒಬ್ಬರಲ್ಲ, ಇಬ್ಬರು ಎಲಿಮಿನೇಟ್‌ ಆಗಲಿದ್ದಾರೆ ಎಂದು ಹೇಳಿ ಸ್ಪರ್ಧಿಗಳಿಗೆ ಶಾಕ್‌ ನೀಡಿದರು. ಟಿವಿಯಲ್ಲಿ ಈ ಪ್ರಕ್ರಿಯೆಯನ್ನು ನೋಡುತ್ತಿದ್ದ ಮನೆಯ ಇತರ ಸ್ಪರ್ಧಿಗಳು ಕೂಡ ಆತಂಕಕ್ಕೊಳಗಾದರು. ಆದರೆ, ಇದು ಕಿಚ್ಚ ನೀಡಿದ ಚಮಕ್‌ ಆಗಿತ್ತು.

ಎಲಿಮಿನೇಟ್‌ ಆದರೆ ಏನು ಕಳೆದುಕೊಳ್ಳುತ್ತೀರಿ? ಕಿಚ್ಚನ ಪ್ರಶ್ನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲಿಮಿನೇಷನ್‌ ಪ್ರಕ್ರಿಯೆಗೂ ಮುನ್ನ ಕಿಚ್ಚ ಸುದೀಪ್‌ ಅವರು ಮೂವರು ಸ್ಪರ್ಧಿಗಳಿಗೂ, “ಇವತ್ತು ಎಲಿಮಿನೇಟ್‌ ಆದರೆ ಏನು ಕಳೆದುಕೊಳ್ಳುತ್ತೀರಿ?” ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸೋನಿಕಾ ಗೌಡ, ಬಿಗ್‌ ಬಾಸ್‌ ಮನೆ ತನಗೆ ದೊಡ್ಡ ಅವಕಾಶವಾಗಿದೆ ಎಂದು ಹೇಳಿದರು. “ಐದು ವರ್ಷಗಳ ಹಿಂದೆ ಎಲ್ಲವನ್ನೂ ಬಿಟ್ಟು ಕುಟುಂಬಕ್ಕೆ ಹೊಂದಿಕೊಂಡು ಹೋಗುತ್ತಿದ್ದೆ. ಆದರೆ, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಆಸೆ ಇತ್ತು. ಈ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞಳಾಗಿದ್ದೇನೆ” ಎಂದು ತಮ್ಮ ಮನದ ಮಾತು ಹಂಚಿಕೊಂಡರು.

ಕಾವ್ಯ ಕೂಡ ಬಿಗ್‌ ಬಾಸ್‌ ಶೋ ತನ್ನ ಪಾಲಿಗೆ ಮಹತ್ವದ ಅವಕಾಶ ಎಂದು ಹೇಳಿದರು. “ಒಂದು ವೇಳೆ ಎಲಿಮಿನೇಟ್‌ ಆದರೆ ನನಗೆ ರಿಗ್ರೆಟ್‌ ಇರುತ್ತದೆ. ಇಷ್ಟು ದಿನ ವೀಕ್ಷಕರು ನನ್ನನ್ನು ಒಬ್ಬ ಕಲಾವಿದೆಯಾಗಿ ನೋಡಿದ್ದಾರೆ. ಈ ಶೋ ಮೂಲಕ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳುವ ಅವಕಾಶ ಕಳೆದುಕೊಳ್ಳುತ್ತೇನೆ” ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ತಾಂಡವ್‌ ರಾಮ್‌ ಮಾತನಾಡಿ, ತಾವು ಯಾವುದೇ ವಿಚಾರದಲ್ಲೂ ಸೋಲಲು ಇಷ್ಟಪಡುವುದಿಲ್ಲ, ಗೆಲ್ಲಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ ಎಂದರು. ಬಿಗ್‌ ಬಾಸ್‌ ಮನೆಯಿಂದ ಸಿಗಬಹುದಾದ ಅನುಭವ ಮತ್ತು ಅವಕಾಶಗಳನ್ನು ಕಳೆದುಕೊಳ್ಳುವ ನೋವು ಕಾಡುತ್ತದೆ ಎಂದು ಹೇಳಿದರು.

ಸೂಟ್‌ಕೇಸ್‌ ಮೂಲಕ ಎಲಿಮಿನೇಷನ್‌ ಪ್ರಕ್ರಿಯೆ

ಈ ವಾರದ ಎಲಿಮಿನೇಷನ್‌ ಪ್ರಕ್ರಿಯೆಯನ್ನು ಕಿಚ್ಚ ಸುದೀಪ್‌ ವಿಭಿನ್ನವಾಗಿ ನಡೆಸಿದರು. ತಾಂಡವ್‌, ಸೋನಿಕಾ ಮತ್ತು ಕಾವ್ಯ ಅವರನ್ನು ಆಕ್ಟಿವಿಟಿ ರೂಮ್‌ಗೆ ಕರೆದೊಯ್ದು, ತಲಾ ಒಂದೊಂದು ಸೂಟ್‌ಕೇಸ್‌ ಮುಂದೆ ನಿಲ್ಲಿಸಿದರು.

ಸೂಟ್‌ಕೇಸ್‌ ತೆರೆದಾಗ ‘ಸೇಫ್‌’ ಎಂಬ ಬೋರ್ಡ್‌ ಸಿಕ್ಕವರಿಗೆ ಮನೆಯಲ್ಲಿ ಮುಂದುವರಿಯುವ ಅವಕಾಶವಿತ್ತು. ‘ಎಲಿಮಿನೇಟೆಡ್‌’ ಎಂಬ ಬೋರ್ಡ್‌ ಸಿಕ್ಕವರು ಶೋನಿಂದ ಹೊರಹೋಗಬೇಕಿತ್ತು.

ಅಂತಿಮವಾಗಿ ಸೋನಿಕಾ ಮತ್ತು ತಾಂಡವ್‌ ಅವರ ಸೂಟ್‌ಕೇಸ್‌ನಲ್ಲಿ ‘ಸೇಫ್‌’ ಬೋರ್ಡ್‌ ಕಾಣಿಸಿಕೊಂಡಿತು. ಆದರೆ, ಕಾವ್ಯ ಅವರ ಸೂಟ್‌ಕೇಸ್‌ನಲ್ಲಿ ‘ಎಲಿಮಿನೇಟೆಡ್‌’ ಎಂಬ ಬೋರ್ಡ್‌ ಇದ್ದ ಕಾರಣ ಅವರು ಬಿಗ್‌ ಬಾಸ್‌ ಮನೆಯಿಂದ ಹೊರಬರಬೇಕಾಯಿತು.

ಕಾವ್ಯ ಎಲಿಮಿನೇಟ್‌ ಆಗುತ್ತಿದ್ದಂತೆ ತಾಂಡವ್‌ ರಾಮ್‌ ಮತ್ತು ಆಸಿಯಾ ಕಣ್ಣೀರಿಟ್ಟರು. ಮನೆಯೊಳಗೆ ಕಾವ್ಯ ಅವರೊಂದಿಗಿನ ಒಡನಾಟ ಮತ್ತು ಈ ವಿದಾಯದ ಕ್ಷಣ ಭಾವುಕ ವಾತಾವರಣಕ್ಕೆ ಕಾರಣವಾಯಿತು.

ಕಾವ್ಯ ಎಲಿಮಿನೇಷನ್‌ಗೆ ಕಾರಣವೇನು?

ಕಾವ್ಯ ಅವರ ಎಲಿಮಿನೇಷನ್‌ ಕುರಿತು ಮಾತನಾಡಿದ ಕಿಚ್ಚ ಸುದೀಪ್‌, ಆಟದಲ್ಲಿ ಸ್ಥಿರತೆ ಇಲ್ಲದಿರುವುದು ಅವರ ಎಲಿಮಿನೇಷನ್‌ಗೆ ಕಾರಣವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತ ಕಾವ್ಯ ಅವರ ತಾಯಿ ಮತ್ತು ತಮ್ಮ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡರು. “ಇನ್ನೂ ಆಟ ಆಡಬೇಕಿತ್ತು. ಫೈಟ್‌ ಮಾಡಿದ್ದಾಳೆ, ಆದರೆ ಇನ್ನಷ್ಟು ಉತ್ತಮವಾಗಿ ಆಡಬಹುದಿತ್ತು. ಕೆಲವೊಮ್ಮೆ ಸೈಲೆಂಟ್‌ ಆಗಿ ಆಡಿದ್ದಾಳೆ ಅನಿಸುತ್ತದೆ. ಟಾಸ್ಕ್‌ಗಳಲ್ಲಿ ಇನ್ನೂ ಚೆನ್ನಾಗಿ ಪ್ರದರ್ಶನ ನೀಡಬಹುದಿತ್ತು” ಎಂದು ಹೇಳಿದರು.

ಬಿಗ್‌ ಬಾಸ್‌ ಮನೆಯ ಆರಂಭದಿಂದಲೂ ಕಾವ್ಯ ಅವರ ಆಟದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಅವರು ಸುರಕ್ಷಿತ ಆಟಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳೂ ಕೇಳಿಬಂದಿದ್ದವು. ಇದೀಗ ಅವರ ಪಯಣ ಅಂತ್ಯಗೊಂಡಿದ್ದು, ಮುಂದಿನ ವಾರ ಮನೆಯಲ್ಲಿ ಯಾವ ಸ್ಪರ್ಧಿಯ ಆಟಕ್ಕೆ ಬ್ರೇಕ್‌ ಬೀಳಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular