HomeInternationalBREAKING: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲು

BREAKING: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲು

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಇಂದು ಬೆಳಿಗ್ಗೆ 10:06-10:07ರ ಸುಮಾರಿಗೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಖುಜ್ದಾರ್ ನಗರದ ಪಶ್ಚಿಮ-ವಾಯುವ್ಯಕ್ಕೆ ಸುಮಾರು 48 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂಕಂಪದ ತೀವ್ರತೆ 5.8ರಷ್ಟು ತೀವ್ರತೆ ದಾಖಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಗಾಬೇಕಿದೆ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭೂಕಂಪ: 4.1ರಷ್ಟು ತೀವ್ರತೆ ದಾಖಲು

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದ್ದು, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.

ಶಿಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಭಾರತೀಯ ಕಾಲಮಾನ 4:36ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಮಾಹಿತಿ ನೀಡಿದೆ.

ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶದಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪದಿಂದ ಸಂಭವಿಸಿರಬಹುದಾದ ಆಸ್ತಿ-ಪಾಸ್ತಿ ಹಾನಿ ಅಥವಾ ಜೀವಹಾನಿಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಗೂಗಲ್ ಮ್ಯಾಪ್ ಎಡವಟ್ಟು: ದಾರಿ ತಪ್ಪಿ ದಟ್ಟ ಕಾಡಿನಲ್ಲಿ ಕಂದಕದಲ್ಲಿ ಸಿಲುಕಿದ ಟೆಕ್ಕಿಗಳು; ಬೆಳಿಗ್ಗೆವರೆಗೂ ಕಾರಿನಲ್ಲೇ ಕಾಲಕಳೆದ ಪ್ರವಾಸಿಗರು

ಮೈಸೂರು: ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ರಸ್ತೆ ಮಾರ್ಗದ ಅಷ್ಟಾಗಿ ಗೊತ್ತಿಲ್ಲ ಎಂದರೆ ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರಯಾಣಿಸುವುದು ಸಹಜ. ಹೀಗೆ ಗೂಗಲ್ ಮ್ಯಾಪ್ ನಂಬಿ ಹೊರಟ ಹಲವರು ದುರಂತಕ್ಕೀಡಾದ ಹಲವು ಘಟನೆಗಳನ್ನು ಕಂಡಿದ್ದೇವೆ. ಕೇಳಿದ್ದೇವೆ. ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟ ಪ್ರವಾಸಿಗರನ್ನು ಗೂಗಲ್ ಮ್ಯಾಪ್ ರಸ್ತೆ ಮಾರ್ಗವನ್ನು ಬಿಟ್ಟು ಕಾಡಿನ ದಾರಿ ತೋರಿಸಿದ್ದಲ್ಲದೇ ಕಂದಕದಲ್ಲಿ ಸಿಲುಕುವಂತೆ ಮಾಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಬಂದಿದ್ದ ಒಂಬತ್ತು ಟೆಕ್ಕಿಗಳು, ಗೂಗಲ್ ಮ್ಯಾಪ್ ತೋರಿಸಿದ ಮಾರ್ಗವನ್ನು ಅನುಸರಿಸಿ ದಟ್ಟ ಕಾಡಿನಲ್ಲಿ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದ ಟೆಕ್ಕಿಗಳ ತಂಡ, ದಸರಾ ವೀಕ್ಷಿಸಿದ ಬಳಿಕ ಚೆನ್ನೈಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ರೋಜರ್ ಪ್ರಿನ್ಸ್, ಪ್ರಿನ್ಸ್ ಮಾರ್ಟಿನ್, ಮಣಿ, ಅರಿವುಮತಿ, ಗಣ, ಶರ್ಮಿಳಾ, ತ್ರಿಷಾ, ಬೊಪೇಶ್ ಹಾಗೂ ಜೋಸಯ್ಯ ಸೇರಿದಂತೆ ಒಂಬತ್ತು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಮರಾಜನಗರ ಮಾರ್ಗವಾಗಿ ದಿಂಬಂ ಘಾಟ್ ಮೂಲಕ ಚೆನ್ನೈಗೆ ತೆರಳಲು ನಿರ್ಧರಿಸಿದ್ದರು. ರಾತ್ರಿ ಗೂಗಲ್ ಮ್ಯಾಪ್ ಸಹಾಯದಿಂದ ಪ್ರಯಾಣ ಮುಂದುವರಿಸಿದ್ದರು.

ಈ ವೇಳೆ ಗೂಗಲ್ ಮ್ಯಾಪ್ ಕಾಡಿನ ಒಳಭಾಗದ ರಸ್ತೆಯನ್ನು ತೋರಿಸಿದ್ದು, ಅದೇ ಮಾರ್ಗದಲ್ಲಿ ಸಾಗಿದ ಕಾರು ರಸ್ತೆ ಬದಿಯ ಕಂದಕದಲ್ಲಿ ಸಿಲುಕಿಕೊಂಡಿದೆ. ದಟ್ಟ ಕಾಡಿನ ಮಧ್ಯೆ ಸಿಲುಕಿದ ತಂಡಕ್ಕೆ ರಾತ್ರಿ ಅಲ್ಲಿಯೇ ಕಳೆಯುವ ಪರಿಸ್ಥಿತಿ ಎದುರಾಗಿದೆ.

ರಾತ್ರಿ ವೇಳೆ ಕಾಡಾನೆ ಘೀಳಿಡುವ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಟೆಕ್ಕಿಗಳು ಕಾರಿನಿಂದ ಕೆಳಗಿಳಿಯದೆ ಒಳಗೇ ಉಳಿದುಕೊಂಡಿದ್ದಾರೆ. ಬೆಳಗ್ಗೆಯವರೆಗೂ ದಟ್ಟ ಕಾಡಿನಲ್ಲೇ ಕಾಲ ಕಳೆದ ತಂಡ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಂದಕದಲ್ಲಿ ಸಿಲುಕಿದ್ದ ಕಾರನ್ನು ಮೇಲಕ್ಕೆತ್ತಿದ್ದಾರೆ. ತಮಿಳುನಾಡು ಪೊಲೀಸರು ಒಂಬತ್ತು ಟೆಕ್ಕಿಗಳನ್ನು ರಕ್ಷಿಸಿ ಸುರಕ್ಷಿತವಾಗಿ ಅವರು ತೆರಳುವ ಜಾಗಕ್ಕೆ ಕಳುಹಿಸಿಕೊಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular