HomeKarnatakaನನ್ನ ಮೇಲೂ ಸ್ಟಿಂಗ್ ಪ್ರಯತ್ನ ನಡೆದಿತ್ತು: ಸಿಡಿ, ಸ್ಟಿಂಗ್ ಹಿಂದೆ ಒಂದೇ ಫ್ಯಾಕ್ಟರಿ, ಪಾರ್ಟ್ನರ್ಸ್ ಬೇರೆ...

ನನ್ನ ಮೇಲೂ ಸ್ಟಿಂಗ್ ಪ್ರಯತ್ನ ನಡೆದಿತ್ತು: ಸಿಡಿ, ಸ್ಟಿಂಗ್ ಹಿಂದೆ ಒಂದೇ ಫ್ಯಾಕ್ಟರಿ, ಪಾರ್ಟ್ನರ್ಸ್ ಬೇರೆ ಬೇರೆ ಎಂದ ಕೆ.ಎನ್.ರಾಜಣ್ಣ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಸ್ಟಿಂಗ್ ಆಪರೇಷನ್ ನಡೆದಿದೆ ಎಂಬ ವಿಚಾರವಾಗಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದ್ದು, ಸ್ಟಿಂಗ್ ಆಗಿರುವುದಕ್ಕಾಗಿಯೇ ಸಿದ್ದರಾಮಯ್ಯನವರು ಸ್ಟೇ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಸಿಡಿ ಹಾಗೂ ಸ್ಟಿಂಗ್ ಆಪರೇಷನ್‌ಗಳಿಗೆ ರಾಜ್ಯದಲ್ಲಿ ಒಂದೇ ಫ್ಯಾಕ್ಟರಿ ಇದೆ, ಆದರೆ ಅದರಲ್ಲಿ ಪಾರ್ಟ್ನರ್‌ಗಳು ಮಾತ್ರ ಬೇರೆ ಬೇರೆ ಎಂದು ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರುರು. ಸ್ಟಿಂಗ್ ಆಗಿರುವುದಕ್ಕಾಗಿಯೇ ಸಿದ್ದರಾಮಯ್ಯನವರು ಸ್ಟೇ ಪಡೆದುಕೊಂಡಿದ್ದಾರೆ. ಇದು ಹೊಸದೇನಲ್ಲ, ಹಿಂದೆ ಸ್ಟಿಂಗ್ ಆಪರೇಷನ್ ಮಾಡಿಯೇ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಲಾಯಿತೇ ಎಂಬ ಅನುಮಾನವೂ ಇರಬಹುದು, ಅದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದರು.

ಇದೇ ವೇಳೆ ತಮ್ಮ ಮೇಲೂ ಇಂತಹ ಪ್ರಯತ್ನ ನಡೆದಿತ್ತು ಎಂದು ರಾಜಣ್ಣ ತಿಳಿಸಿದ್ದಾರೆ. ಹಿಂದೆ ನನ್ನ ಮೇಲೂ ಸ್ಟಿಂಗ್ ಮಾಡಲು ಪ್ರಯತ್ನ ಮಾಡಿದ್ದರು. ಅದು ಸರ್ಕಾರಿ ನಿವಾಸವಾಗಿದ್ದರಿಂದ ಭದ್ರತೆಗೆ ಸಿಸಿಟಿವಿ ಇರುತ್ತದೆ ಎಂದು ಭಾವಿಸಿದ್ದೆ, ಆದರೆ ನಂತರ ಅಲ್ಲಿ ಸಿಸಿಟಿವಿ ಇಲ್ಲ ಎಂಬುದು ಗೊತ್ತಾಯಿತು ಎಂದು ಮಾಹಿತಿ ಹಂಚಿಕೊಂಡರು.

ಈ ಇಡೀ ಬೆಳವಣಿಗೆ ಒಂದು ‘ಬ್ಲ್ಯಾಕ್‌ಮೇಲ್ ತಂತ್ರ’, ಮುಖ್ಯಮಂತ್ರಿಗಳ ಬಳಿ ಎಲ್ಲಾ ತನಿಖಾ ಸಂಸ್ಥೆಗಳಿದೆ. ಜನರಲ್ಲಿರುವ ಗೊಂದಲವನ್ನು ಅವರೇ ತನಿಖೆ ಮಾಡಿಸಿ ದೂರ ಮಾಡಬೇಕು. ರಮೇಶ್ ಜಾರಕಿಹೊಳಿ ಅವರ ಸಿಡಿಯನ್ನು ಯಾರು ಮಾಡಿಸಿದ್ದು ಎಂದು ನೀವೇ ಹೇಳಿ? ಅವರದ್ದು ಮಾಡಿಸಿದವರೇ ಈಗ ಸಿದ್ದರಾಮಯ್ಯನವರದ್ದನ್ನೂ ಮಾಡಿಸಿದ್ದಾರೆ. ಇದರಿಂದ ಇಡೀ ಕರ್ನಾಟಕದ ಮಾನ-ಮರ್ಯಾದೆ ಹರಾಜಾಗುತ್ತಿದೆ, ನಮ್ಮ ಗೌರವವನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ ಎಂದರು.

ಸಿಎಂ ಅವರೇ ಅಸಹಾಯಕರಂತೆ ಮಾತನಾಡಿದರೆ ಹೇಗೆ? ತನಿಖೆ ನಡೆಸಿ ಎಲ್ಲವನ್ನೂ ಬಹಿರಂಗಪಡಿಸಿದರೆ ಈ ಸ್ಟಿಂಗ್ ದಂಧೆ ಇಲ್ಲಿಗೇ ನಿಲ್ಲುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕಿದೆ: ಯೂಸ್ ಆಂಡ್ ಥ್ರೋ ಮಾಡಿದೆ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಿದೆ. ಅದಕ್ಕೆ ಕೃತಜ್ಞತೆ ಎಂಬುದೇ ಇಲ್ಲ. ಈಗ ಕೋರ್ಟ್ ಮೆಟ್ಟಿಲೇರುವಂತೆ ಮಾಡಿ, ಯೂಸ್ ಆಂಡ್ ಥ್ರೋ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಪಕ್ಷಕ್ಕೆ ಕೃತಜ್ಞತೆ ಎಂಬುದಿಲ್ಲ. ಪಾಪ ಸಿದ್ದರಾಮಯ್ಯನವರನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ನಾನು ಬಹಳ ನೋವಿನಿಂದ, ಒಲ್ಲದ ಮನಸ್ಸಿನಿಂದ ಹೇಳ್ತಿದ್ದೀನಿ. ಸಿದ್ದರಾಮಯ್ಯ ದೇವರಾಜ ಅರಸು ಅವರ ದಾಖಲೆ ಮುರಿದವರು. ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದವರು, ಅನ್ನರಾಮಯ್ಯ ಅವರು. ಆದರೆ ಇವತ್ತು ಸಿದ್ದರಾಮಯ್ಯ ಅವರಿಗೆ ಕೋರ್ಟ್ ಮೆಟ್ಟಿಲೇರುವ ನೋವು ಕೊಟ್ಟಿದ್ದೆ ಕಾಂಗ್ರೆಸ್ ಎಂದರು.

ಕೃತಜ್ಞತೆ ಇಲ್ಲದ ಕಾಂಗ್ರೆಸ್, ಕಪಟ ಕಾಂಗ್ರೆಸ್, ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಇದು. ತಡೆಯಾಜ್ಞೆ ಕೋರಿ ಸಿದ್ದರಾಮಯ್ಯ ಕೋರ್ಟ್ ಮೆಟ್ಟಿಲೇರುವ ದಯನೀಯ ಸ್ಥಿತಿಗೆ ತಂದಿದ್ದಾರೆ. ಅವರನ್ನು ಯೂಸ್ ಆಂಡ್ ಥ್ರೋ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್ ಬಗ್ಗೆ, ವಿಡಿಯೋಗಳ ಬಗ್ಗೆ ಕೂಡಲೇ ಎಫ್‌ಐಆರ್ ಆಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರು ಸರ್ಕಾರದ ಬಿಡಿಗಾಸಿನ ಹಣವನ್ನು ವಾಪಸ್ಸು ಕೊಡ್ತಿದ್ದಾರೆ. ಇದ್ಯಾವುದರ ಬಗ್ಗೆ ಗಮನ ಇಲ್ಲದೇ ಕಾಂಗ್ರೆಸ್ ಸರ್ಕಾರ ಈ ಸ್ಟಿಂಗ್ ಆಪರೇಷನ್, ಸಿಡಿಯಲ್ಲೇ ಮುಳುಗಿ ಹೋಗಿದೆ. ಡಿ.ಕೆ ಶಿವಕುಮಾರ್ ಸಿಎಂ ಆಗಿ ದೆಹಲಿಯಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ. ರಾಜ್ಯದ ಜನರ ಬಗ್ಗೆ ಒಂಚೂರು ಕಾಳಜಿ ಇಲ್ಲದೇ, ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರೆಂದು ಇದೇ ಚರ್ಚೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

217 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿದೆ, 46 ಸಾವಿರ ಕೋಟಿ ರೂ. ನಷ್ಟ ಆಗಿದೆ, ಆದರೆ ನೀವು ಭಿಕ್ಷೆ ರೀತಿ 1,200 ಕೋಟಿ ರೂ.ಕೊಟ್ಟಿದ್ದೀರಿ. ದೇವಸ್ಥಾನಕ್ಕೆ ದಕ್ಷಿಣಿಯೇ 500, 1000 ರೂ. ಹಾಕುತ್ತಾರೆ. ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲ. ಬರ ಇದ್ದರೂ ದಸರಾ ಸರಳ ಆಚರಣೆ ಬಿಟ್ಟು, ವಿಜೃಂಭಣೆಯಿAದ ಮಾಡ್ತಿದ್ದಾರೆ. ರೈತನಿಗೆ 2,500 ರೂ. ಕೊಡ್ತಿದ್ದೀರಿ ನಿಮಗೆ ಏನಾದರೂ ಮಾನವೀಯತೆ ಇದೆಯಾ? ವಿಶೇಷ ಅಧಿವೇಶನ ಮಾಡಿ ಏನು ಮಾಡಿದ್ರಿ, ಬರೀ ದುಡ್ಡು ಖರ್ಚು ಮಾಡಿದ್ರಿ ಅಷ್ಟೇ. ಬರಗಾಲದ ಬಗ್ಗೆ, ಸರ್ಕಾರದ ಕ್ರಮಗಳ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular