HomeKarnatakaಬೆಂಗಳೂರು ಪಬ್​ನಲ್ಲಿ ಐಡಿ ಕಾರ್ಡ್​ ಕೇಳಿದ್ದಕ್ಕೆ ಇನ್​ಸ್ಪೆಕ್ಟರ್ ಕಪಾಳಕ್ಕೆ ಹೊಡೆದ ಐಎಎಸ್​ ಅಧಿಕಾರಿ: FIR ...

ಬೆಂಗಳೂರು ಪಬ್​ನಲ್ಲಿ ಐಡಿ ಕಾರ್ಡ್​ ಕೇಳಿದ್ದಕ್ಕೆ ಇನ್​ಸ್ಪೆಕ್ಟರ್ ಕಪಾಳಕ್ಕೆ ಹೊಡೆದ ಐಎಎಸ್​ ಅಧಿಕಾರಿ: FIR ದಾಖಲು

ಬೆಂಗಳೂರು: ಬೆಂಗಳೂರಿನ ಪಬ್‌ ವೊಂದರಲ್ಲಿ ಐಎಎಸ್ ಅಧಿಕಾರಿಯೊಬ್ಬರು ಸಿಸಿಬಿ ಇನ್‌ಸ್ಪೆಕ್ಟರ್ ಮೇಲೆಯೇ ಹಲ್ಲೆ ನಡೆಸಿ, ಗಲಾಟೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ ಪಬ್ ನಲ್ಲಿ ಈ ಘಟನೆ ನಡೆದಿದೆ. ಆಂಧ್ರ ಕೇಡರ್‌ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪರಿಶೀಲನೆ ವೇಳೆ ಐಡಿ ಕಾರ್ಡ್ ಕೇಳಿದ್ದಕ್ಕೆ ಕೋಪಗೊಂಡು ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಮಧ್ಯರಾತ್ರಿ ಪಬ್‌ನಲ್ಲಿ ಕುಡಿದು ಹಂಗಾಮಾ ಸೃಷ್ಟಿಸಿ, ಪೊಲೀಸ್ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಸ್ನೇಹಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆಂಧ್ರಪ್ರದೇಶದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ (ಕಡ ಪ್ರಾಜೆಕ್ಟ್ ಡೈರೆಕ್ಟರ್) ಸೇವೆಯಲ್ಲಿರುವ ವಿಕಾಸ್ ಮರ್ಮಠ್, ತಮ್ಮ ಗೆಳೆಯರಾದ ನಿತೇಶ್, ಅಭಯ್ ಉದಯ್ ಸಿಂಗ್ ಮತ್ತು ರೋಷನ್ ಅವರೊಂದಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿರುವ ‘ಕಾವೂರ್’ ಪಬ್‌ಗೆ ಬಂದಿದ್ದರು. ರಾತ್ರಿ ಸುಮಾರು 1:30ರ ವೇಳೆಯಲ್ಲಿ ಸಿಸಿಬಿ ಅಧಿಕಾರಿಗಳು ಸಮವಸ್ತ್ರದಲ್ಲೇ ಪಬ್ ಪರಿಶೀಲನೆಗಾಗಿ ತೆರಳಿದ್ದರು.

ಈ ವೇಳೆ ಸಿಸಿಬಿ ಪೊಲೀಸ್ ಅಧಿಕಾರಿಗಳು ನಿಯಮಿತ ಪರಿಶೀಲನೆಯ ಭಾಗವಾಗಿ ಐಡಿ ಕಾರ್ಡ್ ಕೇಳಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್, ಅಧಿಕಾರಿಗಳ ವಿರುದ್ಧ ಅಸಭ್ಯ ಪದ ಬಳಸಿ ಬೈಯಲು ಪ್ರಾರಂಭಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಪೊಲೀಸ್ ಇನ್‌ಸ್ಪೆಕ್ಟರ್ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, “ನಾನು ಐಎಎಸ್ ಅಧಿಕಾರಿ, ನಿಮ್ಮಿಂದ ಏನು ಮಾಡಲು ಸಾಧ್ಯವೋ ನೋಡಿಕೊಳ್ಳಿ” ಎಂದು ಆವಾಜ್ ಹಾಕಿದ್ದಾರೆ.

ಘಟನೆಯ ನಂತರ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಭದ್ರತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದೂರಿನ ಅನ್ವಯ ಪೊಲೀಸರು ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular