HomeKarnatakaಹಾಸನಾಂಬ ಜಾತ್ರೆಗೆ ಜಿಲ್ಲಾಡಳಿತ ಅಲರ್ಟ್; ಭಕ್ತರ ಸುರಕ್ಷತೆ, ಸ್ವಚ್ಛತೆಗೆ ವಿಶೇಷ ಕ್ರಮ

ಹಾಸನಾಂಬ ಜಾತ್ರೆಗೆ ಜಿಲ್ಲಾಡಳಿತ ಅಲರ್ಟ್; ಭಕ್ತರ ಸುರಕ್ಷತೆ, ಸ್ವಚ್ಛತೆಗೆ ವಿಶೇಷ ಕ್ರಮ

ಹಾಸನ : ಶ್ರೀ ಹಾಸನಾಂಬ ದೇವಿ ಗರ್ಭಗುಡಿ ಮುಂಭಾಗದ ಪ್ರಾಂಗಣದಿಂದಲೆ ಭಕ್ತಾದಿಗಳು ಸುಗಮವಾಗಿ ದೇವಿ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಜಿಲ್ಲಾಧಿಕಾರಿ ಅವರು ಶ್ರೀ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗರ್ಭಗುಡಿ ಮುಂಭಾಗದ ಪ್ರಾಂಗಣದಲ್ಲಿ ಎ.ಸಿ.ನಿರಂತರವಾಗಿ ವರ್ಕ್ ಆಗುತ್ತಿರಬೇಕು ಎಂದು ತಿಳಿಸಿದ ಅವರು ಮೇಲ್ಚಾವಣಿ ಸರಿಪಡಿಸಲು ಹಾಗೂ ಯಾವುದೇ ವಸ್ತುಗಳನ್ನು ಇರಿಸದಂತೆ ಸ್ವಚ್ಚವಾಗಿಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಭಕ್ತಾದಿಗಳು ದೇವಿ ದರ್ಶನ ಪಡೆದು ಹೊರ ಹೋಗುವ ದ್ವಾರದ ಬಳಿ ಲ್ಯಾಂಪ್ ಅನ್ನು ವಿಸ್ತರಿಸುವಂತೆ ಜೊತೆಗೆ ಸ್ಲಿಪ್ ಆಗದಂತೆ ನಿರ್ಮಾಣಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ದೊನ್ನೆ ಪ್ರಸಾದ ವಿತರಣೆಯಲ್ಲಿ ಭಕ್ತಾದಿಗಳು ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ಚಿಕ್ಕ ಮರದ ಸ್ಪೂನ್ ನೀಡುವಂತೆ ಸೂಚಿಸಿದರಲ್ಲದೆ, ಕಸದ ಬುಟ್ಟಿಗಳನ್ನು ಇರಿಸಲು ಭಕ್ತಾದಿಗಳು ದೇವಿ ಅವರಿಗೆ ಅರ್ಪಿಸಲು ತರುವ ಮಡಲಕ್ಕಿಯನ್ನು ದೇವಾಲಯದ ಹೊರಭಾಗದಲ್ಲಿ ನೀಡಲು ಅಗತ್ಯ ಕೌಂಟರ್ ತೆರೆಯಲು ಜೊತೆಗೆ ಆಗಿಂದಾಗ್ಗೆ ಭಕ್ತರ ಮಾಹಿತಿಗಾಗಿ ಧ್ವನಿ ವರ್ಧಕದ ಮೂಲಕ ಅನೌನ್ಸ್ ಮಾಡುತ್ತಿರಬೇಕು ಎಂದು ತಿಳಿಸಿದರು.

 ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶೌಚಾಲಯಗಳ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗಳ ಹಾಜರಾತಿ ಪ್ರತಿದಿನ ಕಡ್ಡಾಯವಾಗಿ ಹಾಕಬೇಕು ಎಂದ ಅವರು ಯಾವ ಪಾಳಿಯಲ್ಲಿ ಯಾರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಇರಬೇಕು ಈ ನಿಟ್ಟಿನಲ್ಲಿ ಪಟ್ಟಿ ತಯಾರಿಸುವಂತೆ ತಿಳಿಸಿದರು.ಸ್ವಚ್ಚತಗಾರರಿಗೆ ತರಬೇತಿ ಅಯೋಜಿಸುವಂತೆ ತಿಳಿಸಿದರು.

ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಹಾಲಿ ಇರುವ ಶೌಚಾಲಯಗಳ ಜೊತೆಗೆ ಹೆಚ್ಚುವರಿ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

300 ರೂಗಳ ಸರತಿ ಸಾಲು ವಿಸ್ತರಣೆ ಮಾಡಬೇಕು ಎಂದ ಜಿಲ್ಲಾಧಿಕಾರಿ ಅವರು ಭಕ್ತಾಧಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ವೆಲ್ಡಿಂಗ್ ಶಾಪ್ ಸೇರಿದಂತೆ ಮತ್ತಿತರ ಕಿಡಿ ಉಂಟು ಮಾಡುವ ಯಾವುದೇ ಅಂಗಡಿಗಳನ್ನು ಜಾತ್ರಾ ಸಂದರ್ಭದಲ್ಲಿ ತೆರೆಯದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

 ಸಿಸಿಟಿವಿ ಪಾಯಿಂಟ್ ಗಳನ್ನು ಹೆಚ್ಚು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಅವರ ದೇವಾಲಯದ ಬೋರ್ಡ್ ಬದಲಾವಣೆ ಮಾಡಿ ಹೊಸ ಬೋರ್ಡ್ ಅಳವಡಿಕೆ ಮಾಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

 ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ವಿದ್ಯುತ್ ದೀಪಾಲಂಕಾರವನ್ನು ಅತ್ಯಂತ ಆಕರ್ಷಕವಾಗಿ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಜಾತ್ರಾ ಮಹೋತ್ಸವದ ಒಂದು ವಾರದ ಮೊದಲೇ ದೀಪಾಲಂಕಾರ ಕೆಲಸ ಪೂರ್ಣಗೊಳಿಸಿರಬೇಕು ಎಂದು ತಿಳಿಸಿದರು.

 ಹೆಚ್ಚಿನ ಭಕ್ತಾದಿಗಳು ದೇವಿ ದರ್ಶನ ಪಡೆಯಲು ಅನುಕೂಲವಾಗುವಂತೆ ಪೂಜೆ ಕಾರ್ಯಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಪೂರ್ವ ತಯಾರಿ ಮಾಡಿಕೊಂಡು ಕಡಿಮೆ ಅವಧಿಯಲ್ಲಿ ನಿಯಮ ಬದ್ಧವಾಗಿ ಅಮ್ಮನವರ ಪೂಜೆ ನೆರವೇರಿಸಿ ಸಹಕರಿಸುವಂತೆ ಪುರೋಹಿತರಲ್ಲಿ ಮನವಿ ಮಾಡಿದರು.

ವಿಕಲಚೇತನರು,80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಒಂದು ವರ್ಷದೊಳಗಿನ ಮಕ್ಕಳೊಂದಿಗೆ ಬರುವ ತಾಯಂದಿರು ಅವರೊಂದಿಗೆ ದೇವಿ ದರ್ಶನಕ್ಕೆ ಆಗಮಿಸುವವರು ಬರುವವರೆಗೆ ಕಾಯ್ದು ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ ಉಪಚರಿಸಲು ಪ್ರಾಥಮಿಕ ಚಿಕಿತ್ಸೆಗಾಗಿ ಅಗತ್ಯವಿರುವ ಔಷಧಿಗಳು ಹಾಗೂ ಉಪಕರಣಗಳನ್ನು ಇರಿಸಿಕೊಂಡು ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಜಿಲ್ಲಾಧಿಕಾರಿ ಅವರು ದೇವಿಗೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಲ್ಯಾಣಿಯ ಸುತ್ತಮುತ್ತ ಸ್ವಚ್ಚತೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ,ಕಲ್ಯಾಣಿಯ ಸೌಂದರ್ಯಿಕರಣಕ್ಕೆ ಒಂದು ಕ್ರೀಯಾ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಸೀಲ್ದಾರ್ ಗೀತಾ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular