HomeKarnatakaಹುಬ್ಬಳ್ಳಿ–ಚೆನ್ನೈ ನಡುವೆ ಅಕ್ಟೋಬರ್ 27ರಿಂದ ಇಂಡಿಗೋ ವಿಮಾನ ಸೇವೆ ಪುನರಾರಂಭ

ಹುಬ್ಬಳ್ಳಿ–ಚೆನ್ನೈ ನಡುವೆ ಅಕ್ಟೋಬರ್ 27ರಿಂದ ಇಂಡಿಗೋ ವಿಮಾನ ಸೇವೆ ಪುನರಾರಂಭ

ಹುಬ್ಬಳ್ಳಿ: ಪ್ರಯಾಣಿಕರಿಗೆ ಗುಡ್ ನ್ಯೂಸ್. ಹುಬ್ಬಳ್ಳಿ–ಚೆನ್ನೈ ನಡುವಿನ ನೇರ ವಿಮಾನ ಸೇವೆ ಪುನರಾರಂಭವಾಗಲಿದೆ. ಅಕ್ಟೋಬರ್ 27ರಿಂದ ವಾರದಲ್ಲಿ ಮೂರು ದಿನ, ಮಂಗಳವಾರ, ಗುರುವಾರ ಹಾಗೂ ಶನಿವಾರ ಇಂಡಿಗೋ ವಿಮಾನ ಸಂಚಾರ ನಡೆಸಲಿದೆ.

ಇಂಡಿಗೋ 6E7368 ವಿಮಾನವು ಹುಬ್ಬಳ್ಳಿಯಿಂದ ಸಂಜೆ 4.25ಕ್ಕೆ ಹೊರಟು ಸಂಜೆ 6.05ಕ್ಕೆ ಚೆನ್ನೈ ತಲುಪಲಿದೆ. ಬಳಿಕ ಚೆನ್ನೈನಿಂದ 6E7369 ವಿಮಾನ ಸಂಜೆ 6.35ಕ್ಕೆ ಹೊರಟು ರಾತ್ರಿ 8.20ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನೇರ ವಿಮಾನ ಸೇವೆಯಿಂದ ಉತ್ತರ ಕರ್ನಾಟಕದ ಪ್ರಯಾಣಿಕರು, ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಿಮಾನ ಸೇವೆ ಪುನರಾರಂಭಕ್ಕೆ ಸಹಕರಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಹಾಗೂ ಇಂಡಿಗೋ ಸಂಸ್ಥೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ.

ವಿಶೇಷ ರೈಲು ಸೇವೆ:

ಇನ್ನು ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಅ. 10 ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹಜರತ್ ನಿಜಾಮುದ್ದೀನ್’ಗೆ ಒಂದು ಮಾರ್ಗದ ವಿಶೇಷ ಎಕ್ಸ್’ಪ್ರೆಸ್ ರೈಲನ್ನು ಆರಂಭಿಸಲಿದೆ.

ರೈಲು ಸಂಖ್ಯೆ 07333 ಎಸ್ಎಸ್ಎಸ್ ಹುಬ್ಬಳ್ಳಿಯಿಂದ 10.10.2026 ಶನಿವಾರದಂದು 23:50 ಗಂಟೆಗೆ ಹೊರಟು, 12.10.2026 ಸೋಮವಾರದಂದು 21:50 ಗಂಟೆಗೆ ಹಜರತ್ ನಿಜಾಮುದ್ದೀನ್ ತಲುಪಲಿದೆ. ಮಾರ್ಗಮಧ್ಯದಲ್ಲಿ ಈ ರೈಲು ಬದಾಮಿ, ಬಾಗಲಕೋಟೆ, ವಿಜಯಪುರ, ಸೋಲಾಪುರ, ಕುರ್ದುವಾಡಿ, ದೌಂಡ್, ಅಹಿಲ್ಯಾನಗರ, ಕೊಪರ್ಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಚಿತ್ರಕೂಟಧಾಮ ಕರ್ವಿ, ಬಂದಾ, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಜಂಕ್ಷನ್ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದ್ದು, ಇದರಲ್ಲಿ 08 ಸ್ಲೀಪರ್ ಕ್ಲಾಸ್, 10 ಸಾಮಾನ್ಯ ಎರಡನೇ ದರ್ಜೆ (ಜನರಲ್) ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್’ಮೆಂಟ್ ಹೊಂದಿರುವ 02 ಎರಡನೇ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಇರಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular