HomeEntertainmentಬಿಗ್‌ ಬಾಸ್‌ ಮನೆಯಿಂದ ಲಿಖಿತ್‌ ಗೋಂದಿ ಎಲಿಮಿನೇಟ್‌ ಬಳಿಕ ಸಿಕ್ಕ ಕ್ಯಾಶ್‌ ಪ್ರೈಜ್‌...

ಬಿಗ್‌ ಬಾಸ್‌ ಮನೆಯಿಂದ ಲಿಖಿತ್‌ ಗೋಂದಿ ಎಲಿಮಿನೇಟ್‌ ಬಳಿಕ ಸಿಕ್ಕ ಕ್ಯಾಶ್‌ ಪ್ರೈಜ್‌ ಎಷ್ಟು ಗೊತ್ತಾ?

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕಾಮನ್ ಮ್ಯಾನ್ ಕ್ಯಾಟಗರಿಯಲ್ಲಿ ದೊಡ್ಮನೆ ಪ್ರವೇಶಿಸಿದ್ದ ಲಿಖಿತ್ ಗೋಂದಿ ಎಲಿಮಿನೇಟ್ ಆಗಿದ್ದಾರೆ. ‘ಅಗ್ನಿಪರೀಕ್ಷೆ’ ಸ್ಪರ್ಧೆಯ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಲಿಖಿತ್, ತಮ್ಮ ಆಟ ಹಾಗೂ ಚೇಷ್ಟೆಗಳಿಂದ ಗಮನ ಸೆಳೆದಿದ್ದರು.

ಮನೆಯಿಂದ ಹೊರಬಂದ ಬಳಿಕ ಕಿಚ್ಚ ಸುದೀಪ್ ಜೊತೆ ಮಾತನಾಡಿದ ಲಿಖಿತ್, ತಮ್ಮ ಆಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ನಾನು ಆಡಿದ ರೀತಿ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ನನ್ನ ಕೋಪ ಜಾಸ್ತಿ ಇತ್ತು. ಪ್ರೇಕ್ಷಕರನ್ನು ಹಾಗೂ ಮನೆಯವರನ್ನು ನಗಿಸುವ ಸಾಕಷ್ಟು ಅವಕಾಶಗಳಿದ್ದವು. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ” ಎಂದು ಹೇಳಿದ್ದಾರೆ.

ಇದೇ ವೇಳೆ, ಈ ವಾರ ತಾನೇ ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆ ಮೊದಲೇ ಇತ್ತು ಎಂದೂ ಲಿಖಿತ್ ತಿಳಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ದಿನ ಇರಬೇಕು ಎಂಬ ಆಸೆ ಇದ್ದರೂ, ತಮ್ಮ ಪಯಣ ಈ ಹಂತಕ್ಕೆ ಮುಗಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಿಖಿತ್‌ಗೆ ಸಿಕ್ಕಿದ್ದು ₹3.50 ಲಕ್ಷ?

ಎಲಿಮಿನೇಷನ್‌ಗೂ ಮುನ್ನ ಲಿಖಿತ್ ಗೋಂದಿಗೆ ವಿವಿಧ ಸ್ಪಾನ್ಸರ್‌ಗಳ ಕಡೆಯಿಂದ ನಗದು ಬಹುಮಾನ ನೀಡಲಾಗಿದೆ. ವೈಟ್ ಗೋಲ್ಡ್ ವತಿಯಿಂದ ₹1 ಲಕ್ಷ, ಇಕೋ ಪ್ಲಾನೆಟ್ ಎಲಿವೇಟರ್ಸ್ ಕಡೆಯಿಂದ ₹1 ಲಕ್ಷ, 123 ನೂಡಲ್ಸ್ ವತಿಯಿಂದ ₹1 ಲಕ್ಷ ಹಾಗೂ ವೇಕ್‌ಮೇಟ್ ವತಿಯಿಂದ ₹50 ಸಾವಿರ ನೀಡಲಾಗಿದೆ.

ಒಟ್ಟಾರೆ ಲಿಖಿತ್‌ಗೆ ₹3.50 ಲಕ್ಷ ನಗದು ಬಹುಮಾನ ಸಿಕ್ಕಿದೆ.

ಇನ್ನು, ಎಲಿಮಿನೇಷನ್ ಬಳಿಕ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ನಿಂತಿದ್ದ ಲಿಖಿತ್ ಅವರ ಬಿಗ್ ಬಾಸ್ ಜರ್ನಿಯ ಪ್ರಮುಖ ಕ್ಷಣಗಳ ವಿಡಿಯೋ ಪ್ರಸಾರ ಮಾಡಲಾಯಿತು. ದೊಡ್ಮನೆಯಲ್ಲಿ ಕಳೆದ ದಿನಗಳು ಹಾಗೂ ಮನೆಯ ಸದಸ್ಯರೊಂದಿಗಿನ ಹಲವು ನೆನಪುಗಳನ್ನು ನೋಡಿದ ಲಿಖಿತ್ ಭಾವುಕರಾದರು.

ಜರ್ನಿ ವಿಡಿಯೋ ನೋಡುತ್ತಲೇ ಲಿಖಿತ್ ಕಣ್ಣೀರಿಟ್ಟರು. ಈ ವೇಳೆ ಸುದೀಪ್ ಅವರು ಲಿಖಿತ್ ಅವರನ್ನು ಸಂತೈಸಿ ಧೈರ್ಯ ತುಂಬಿದರು.

ಕೊನೆಯ ಕ್ಷಣದಲ್ಲಿ ಟ್ವಿಸ್ಟ್

ಈ ವಾರದ ಎಲಿಮಿನೇಷನ್‌ನಲ್ಲಿ ಯಶಸ್ ಹೊರಹೋಗಬಹುದು ಎಂದು ಮನೆಯ ಹಲವು ಸದಸ್ಯರು ಅಂದಾಜಿಸಿದ್ದರು. ಆದರೆ ವೋಟಿಂಗ್‌ನಲ್ಲಿ ಯಶಸ್ ಮೊದಲಿಗರಾಗಿ ಸೇಫ್ ಆದರು. ಬಳಿಕ ಮಂಜ ಹಾಗೂ ಧನುಷ್ ಅವರನ್ನು ಸುದೀಪ್ ಸೇಫ್ ಮಾಡಿದರು.

ಕೊನೆಯಲ್ಲಿ ಸಂಗೀತಾ, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಡೇಂಜರ್ ಝೋನ್‌ನಲ್ಲಿ ಉಳಿದಿದ್ದರು. ಈ ವೇಳೆ ಬಿಗ್ ಬಾಸ್ ಮನೆಯಿಂದ ಕಮಾಂಡೋಸ್ ತಂಡ ಬಂದು ಮೂವರನ್ನೂ ಹೊರಗೆ ಕರೆದುಕೊಂಡು ಹೋಯಿತು.

ನಂತರ ಸಂಗೀತಾ ಹಾಗೂ ಕಿರಣ್ ಶಾಸ್ತ್ರಿ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಆದರು. ಆದರೆ ಲಿಖಿತ್ ಮಾತ್ರ ಮನೆಗೆ ಮರಳದೆ ನೇರವಾಗಿ ವೇದಿಕೆಗೆ ಆಗಮಿಸಿದರು. ಈ ಮೂಲಕ ಲಿಖಿತ್ ಗೋಂದಿ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಪಯಣ ಅಂತ್ಯಗೊಂಡಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular