HomeIndiaಲಿಫ್ಟ್‌ನಲ್ಲೇ ಮೂತ್ರ ವಿಸರ್ಜಿಸಿದ ಡೆಲಿವರಿ ಬಾಯ್‌ ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಅಸಹ್ಯಕರ ಕೃತ್ಯ |...

ಲಿಫ್ಟ್‌ನಲ್ಲೇ ಮೂತ್ರ ವಿಸರ್ಜಿಸಿದ ಡೆಲಿವರಿ ಬಾಯ್‌ ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಅಸಹ್ಯಕರ ಕೃತ್ಯ | Watch

ಮುಂಬೈನ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಬೂರಿನಲ್ಲಿರುವ ಅಕ್ಷಯ್ ಸಹಕಾರಿ ವಸತಿ ಸಮುಚ್ಛಯದಲ್ಲಿ (ಹೌಸಿಂಗ್ ಸೊಸೈಟಿ) ಜಿಗುಪ್ಸೆ ಹುಟ್ಟಿಸುವ ಘಟನೆಯೊಂದು ನಡೆದಿದ್ದು, ಲಿಫ್ಟ್‌ನಲ್ಲಿ ಬಂದ ದುರ್ವಾಸನೆಯ ಬೆನ್ನುಬಿದ್ದ ನಿವಾಸಿಗಳಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ ಆಘಾತ ಕಾದಿತ್ತು. ಆಹಾರ ತಲುಪಿಸಲು ಬಂದಿದ್ದ ಡೆಲಿವರಿ ಸಿಬ್ಬಂದಿಯೊಬ್ಬ ಲಿಫ್ಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿರುವ ಸತ್ಯ ಬಯಲಾಗಿದೆ.

ದುರ್ವಾಸನೆಯ ಬೆನ್ನತ್ತಿದ ನಿವಾಸಿಗಳು

ಸೋಮವಾರ ಮಧ್ಯಾಹ್ನ ಸುಮಾರು 2:30 ರ ಸುಮಾರಿಗೆ ವಸತಿ ಸಮುಚ್ಛಯದ ಲಿಫ್ಟ್‌ನಲ್ಲಿ ತೀವ್ರ ದುರ್ವಾಸನೆ ಬರುತ್ತಿರುವ ಬಗ್ಗೆ ಸೊಸೈಟಿಯ ಗ್ರೂಪ್‌ನಲ್ಲಿ ನಿವಾಸಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಸಾಕುಪ್ರಾಣಿ ಅಥವಾ ಬೀದಿ ನಾಯಿಯೇನಾದರೂ ಲಿಫ್ಟ್‌ನಲ್ಲಿ ಮಲಮೂತ್ರ ವಿಸರ್ಜನೆ ಮಾಡಿರಬಹುದು ಎಂದು ನಿವಾಸಿಗಳು ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ ಶಂಕಿಸಿದ್ದರು. ಆದರೂ ನಿಜಾಂಶ ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ನಿರ್ಧರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಸಿ ಟಿವಿ ವೀಡಿಯೋದಲ್ಲಿ ಸೆರೆಯಾಯ್ತು ವಿಕೃತಿ

ಸೊಸೈಟಿ ಸದಸ್ಯ ಗಿರೀಶ್ ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿಯಂತೆ, ಫುಡ್ ಡೆಲಿವರಿ ಸಿಬ್ಬಂದಿಯೊಬ್ಬ ಲಿಫ್ಟ್ ಪ್ರವೇಶಿಸಿ ಒಳಗಡೆಯೇ ಮೂತ್ರ ವಿಸರ್ಜನೆ ಮಾಡಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಅಷ್ಟೇ ಅಲ್ಲದೆ, ಆತ ತನ್ನ ಕೈಗೆ ಮೂತ್ರವನ್ನು ಹಿಡಿದು ಕುಡಿದಿರುವುದಾಗಿಯೂ ನಿವಾಸಿಗಳು ಆರೋಪಿಸಿದ್ದಾರೆ. ಈ ದೃಶ್ಯಗಳನ್ನು ಕಂಡ ನಿವಾಸಿಗಳು ತೀವ್ರ ಆಕ್ರೋಶ ಹಾಗೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಝೊಮ್ಯಾಟೋಗೆ ದೂರು, ಪೊಲೀಸ್ ಠಾಣೆ ಮೆಟ್ಟಿಲೇರಿದ ಸೊಸೈಟಿ

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ತಕ್ಷಣವೇ ಸೊಸೈಟಿ ಆಡಳಿತ ಮಂಡಳಿಯು ಲಿಫ್ಟ್ ಅನ್ನು ಸಂಪೂರ್ಣವಾಗಿ ಶುಚಿಗೊಳಿಸಿದೆ. ಬಳಿಕ ಆ ಸಿಸಿಟಿವಿ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಆಹಾರ ಪೂರೈಕೆ ಸಂಸ್ಥೆಯಾದ ಝೊಮ್ಯಾಟೋ ಹಾಗೂ ಸ್ಥಳೀಯ ಆಡಳಿತವನ್ನು ಟ್ಯಾಗ್ ಮಾಡಿದ್ದಾರೆ. ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿದಾಗ, ಸಂಬಂಧಪಟ್ಟ ಡೆಲಿವರಿ ಸಿಬ್ಬಂದಿಯನ್ನು ತಮ್ಮ ಆ್ಯಪ್‌ನಿಂದ ತೆಗೆದುಹಾಕಿರುವುದಾಗಿ ಝೊಮ್ಯಾಟೋ ತಿಳಿಸಿದೆ.

ಆದರೆ, ಸೊಸೈಟಿಯ ಪ್ರವೇಶ ನೋಂದಣಿಯಲ್ಲಿದ್ದ ಆತನ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಯತ್ನಿಸಿದಾಗ ಅದು ನಕಲಿ ಸಂಖ್ಯೆ ಎಂಬುದು ಬೆಳಕಿಗೆ ಬಂದಿದೆ. ಇದರಿಂದ ಮತ್ತಷ್ಟು ಆತಂಕಗೊಂಡ ಸೊಸೈಟಿ ನಿವಾಸಿಗಳ ನಿಯೋಗವು ತಿಲಕ್ ನಗರ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ನೀಡಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಅಪಾರ್ಟ್‌ಮೆಂಟ್‌ಗಳಿಗೆ ಬರುವ ಗಿಗ್ ವರ್ಕರ್‌ಗಳ ಮತ್ತು ಡೆಲಿವರಿ ಸಿಬ್ಬಂದಿಗಳ ಹಿನ್ನೆಲೆ ಪರಿಶೀಲನೆ ಹಾಗೂ ಸಾರ್ವಜನಿಕ ಸ್ಥಳಗಳ ನೈರ್ಮಲ್ಯದ ಕುರಿತು ಈ ಘಟನೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular