HomeEntertainment'ಹನುಮಾನ್ ಅಂಶ 2' ತಾರಾಗಣದ ಸುತ್ತ ಕುತೂಹಲ: ಅಕ್ಷಯ್ ಕುಮಾರ್ ಅಭಿನಯದ ಬಗ್ಗೆ ನಿರ್ಮಾಪಕಿ ನೀಡಿದ...

‘ಹನುಮಾನ್ ಅಂಶ 2’ ತಾರಾಗಣದ ಸುತ್ತ ಕುತೂಹಲ: ಅಕ್ಷಯ್ ಕುಮಾರ್ ಅಭಿನಯದ ಬಗ್ಗೆ ನಿರ್ಮಾಪಕಿ ನೀಡಿದ ಹೇಳಿಕೆಯೇನು?

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ‘ಹನುಮಾನ್ ಅಂಶ 2’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗೆ ಕೊನೆಗೂ ಸ್ಪಷ್ಟನೆ ಸಿಕ್ಕಿದೆ. ಚಿತ್ರದಲ್ಲಿ ಅಕ್ಷಯ್ ಸೇರ್ಪಡೆ ಕುರಿತು ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ ಎಂದು ಚಿತ್ರದ ನಿರ್ಮಾಪಕಿ ಅನುಪ್ರಿಯಾ ನಾಗರ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆಬಿದ್ದಂತಾಗಿದೆ.

ಇತ್ತೀಚಿನ ಮಾಧ್ಯಮ ಸಂವಾದವೊಂದರಲ್ಲಿ ಅನುಪ್ರಿಯಾ ಅವರು ಅಕ್ಷಯ್ ಕುಮಾರ್ ತಮ್ಮ ನೆಚ್ಚಿನ ನಟ ಎಂದು ಹೇಳಿದ್ದರು. ಈ ವೇಳೆ ‘ಹನುಮಾನ್ ಅಂಶ’ ಸೀಕ್ವೆಲ್‌ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ, “ಅದನ್ನು ಮಹಾರಾಜ್ ಜಿ ಅವರೇ ಹೇಳಬೇಕು” ಎಂದು ಉತ್ತರಿಸಿದ್ದರು. ನಿರ್ಮಾಪಕರ ಈ ಮಾತು ಅಭಿಮಾನಿಗಳಲ್ಲಿ ಅಕ್ಷಯ್ ನಟನೆಯ ಬಗ್ಗೆ ಕುತೂಹಲ ಮೂಡಿಸಿತ್ತು.

ಆದರೆ, ಈ ಕುರಿತು ‘ಹಿಂದುಸ್ತಾನ್ ಟೈಮ್ಸ್’ ಜೊತೆ ಮಾತನಾಡಿರುವ ಅನುಪ್ರಿಯಾ, “ಭಾಗ 2 ರಲ್ಲಿ ಅಕ್ಷಯ್ ಕುಮಾರ್ ನಟಿಸುವ ಬಗ್ಗೆ ನಾನು ಏನನ್ನೂ ಹೇಳಿಲ್ಲ, ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು” ಎಂದು ಹೇಳಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ಷಯ್ ಕುಮಾರ್ ಅವರ ನಟನೆಯ ಕುರಿತು ಸ್ಪಷ್ಟತೆ ಇಲ್ಲದಿದ್ದರೂ, ಸೀಕ್ವೆಲ್ ನಿರ್ಮಾಣ ಕಾರ್ಯ ಜಾರಿಯಲ್ಲಿದೆ. ನಿರ್ದೇಶಕ ವಿಶಾಲ್ ಚತುರ್ವೇದಿ ಈ ಹಿಂದೆ ತಿಳಿಸಿದಂತೆ ‘ಹನುಮಾನ್ ಅಂಶ 2’ ಚಿತ್ರದ ಕೆಲಸಗಳು ನಡೆಯುತ್ತಿದ್ದು, ಈ ಸರಣಿಯನ್ನು ಮೂರು ಭಾಗಗಳಲ್ಲಿ ತರಲು ಯೋಜನೆ ರೂಪಿಸಲಾಗಿದೆ.

ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ಸಫಲತೆ ಕಂಡ ‘ಹನುಮಾನ್ ಅಂಶ’ ಆಧ್ಯಾತ್ಮಿಕ ಪ್ರಯಾಣದ ಕಥಾವಸ್ತುವನ್ನು ಹೊಂದಿದೆ. ಕೇವಲ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ, ಭಾರತದಲ್ಲಿ 312.38 ಕೋಟಿ ರೂಪಾಯಿ ನಿವ್ವಳ ಹಾಗೂ ಜಾಗತಿಕವಾಗಿ 408 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ. ಆಗಸ್ಟ್ 7 ರಂದು ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ಶೋಭಿನವ್ ಸತ್ಯಾ, ಚಂದನ್ ಕೆ ಆನಂದ್ ಹಾಗೂ ನಿಖಿಲ್ ದುಬೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular