HomeKarnatakaಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಪತ್ನಿ ಸ್ಥಳದಲ್ಲೇ ಸಾವು, ಪತಿ ಗಂಭೀರ

ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಪತ್ನಿ ಸ್ಥಳದಲ್ಲೇ ಸಾವು, ಪತಿ ಗಂಭೀರ

ಕೊಪ್ಪಳ: ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಪತ್ನಿ ಸ್ಥಳದಲ್ಲೇ ಸಾವುಕಂಡಿದ್ದು, ಪತಿ ಗಾಯಗೊಂಡಿದ್ದಾರೆ. ಕೊಪ್ಪಳ ಬಳಿ ರಾಷ್ಟ್ರೀಯ ಹೆದ್ದಾರಿ 63ರ ಬೈಪಾಸ್ ನಲ್ಲಿ ಘಟನೆ ನಡೆದಿದೆ.

ಫರ್ವಿನ್ ಬಾನು(50) ಮೃತಪಟ್ಟವರು ಎಂದು ಹೇಳಲಾಗಿದೆ. ಬೈಕ್ ನಲ್ಲಿದ್ದ ಅವರು ಕಾರ್ ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೃತರ ಸಂಬಂಧಿಕರು, ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಚುಕ್ಕನಕಲ್ ಗ್ರಾಮದಲ್ಲಿ ಮದುವೆ ಸಮಾರಂಭಕ್ಕೆ ತೆರಳಿದ್ದ ದಂಪತಿ ಮದುವೆ ಮುಗಿಸಿಕೊಂಡು ಊರಿಗೆ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂಗಾರು ಹಂಗಾಮಿನಲ್ಲಿ ಸೂಕ್ತ ಬೆಳೆ ಬೆಳೆಯಲು ಸಲಹೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಪ್ಪಳ: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸೂಕ್ತವಾದ ಬೆಳೆಗಳನ್ನು ಬೆಳೆಯುವಮತೆ ಕೃಷಿ ಇಲಾಖೆ ಸಲಹೆಗಳನ್ನು ನೀಡಿದೆ.

ಪ್ರಸ್ತುತ ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಿದೆ. ವಾಡಿಕೆಯಂತೆ ಮಳೆಯಾದಲ್ಲಿ ರೈತಬಾಂಧವರು ಹಿಂಗಾರು ಹಂಗಾಮಿಗೆ ಸೂಕ್ತವಾದ ಜೋಳ, ಕಡಲೆ, ಕುಸುಬೆ, ಸೂರ್ಯಕಾಂತಿ, ಶೇಂಗಾ ಇತ್ಯಾದಿ ಬೆಳೆಗಳ ಸುಧಾರಿತ ತಳಿಗಳ ಬೀಜಗಳನ್ನು ಬಿತ್ತನೆಗೆ ಬಳಸಬಹುದು.

ಹಿಂಗಾರು ಹಂಗಾಮಿನ ಜೋಳ ಬೆಳೆಯಲ್ಲಿ ಎಂ.ಎಸ್.-35-1 ಮತ್ತು ಕೃಷಿ ವಿಶ್ವವಿದ್ಯಾಲಯ, ರಾಯಚೂರಿನಿಂದ ಬಿಡುಗಡೆ ಮಾಡಲಾದ ತುಕ್ಕು ರೋಗಕ್ಕೆ ನಿರೋಧಕತೆ ಹಾಗೂ ಹೆಚ್ಚಿನ ಕಾಳು ಉತ್ಪಾದನಾ ಸಾಮರ್ಥ್ಯ ಹೊಂದಿರುವ ಜಿ.ಎಸ್.-23 ಮತ್ತು ಆರ್.ಟಿ.ಎಸ್.-43 (ದ್ವಿಉದ್ದೇಶದ ತಳಿ, ಅಧಿಕ ಕಾಳು, ಗುಣಮಟ್ಟದ ಮೇವು ಹಾಗೂ ಇಡ್ಡಿಲು ಕಾಂಡಕೊಳೆ, ಸೊರಗು ರೋಗ ಹಾಗೂ ತುಕ್ಕುರೋಗ ನಿರೋಧಕ ಶಕ್ತಿ ಹೊಂದಿರುವ) ತಳಿಗಳನ್ನು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15 ರವರೆಗೆ ಬಿತ್ತನೆಗೆ ಬಳಸಬಹುದು.

ಕಡಲೆ ಬೆಳೆಯಲ್ಲಿ ಸುಧಾರಿತ ತಳಿಗಳಾದ ಎನ್.ಬಿ.ಇ.ಜಿ-47, ಜಿ.ಜಿ.-11, ಬಿ.ಜಿ.ಡಿ.-103 (ದಪ್ಪಕಾಳಿನ ದೇಶಿತಳಿ), ಬಿ.ಜಿ.ಡಿ.-111/1 (ಬರ ಪ್ರತಿರೋಧ ಹಾಗೂ ಸೊರಗು ರೋಗ ನಿರೋಧಕಶಕ್ತಿ ಹೊಂದಿರುವ), ಕೆ.ಸಿ.ಡಿ.-11 (ಸೊರಗು ರೋಗ ನಿರೋಧಕ ಶಕ್ತಿ ಹೊಂದಿರುವ ದೇಶಿತಳಿ) ಹಾಗೂ ಕೆ.ಸಿ.ಡಿ.-134 (ಮಧ್ಯಮ ಅವಧಿಯ, ಸೊರಗು ರೋಗ ನಿರೋಧಕ ಶಕ್ತಿ ಹಾಗೂ ಅಧಿಕ ಇಳುವರಿ ಹೊಂದಿರುವ) ತಳಿಗಳನ್ನು ಅಕ್ಟೋಬರ್–ನವೆಂಬರ್ ಅವಧಿಯಲ್ಲಿ ಬಿತ್ತನೆ ಮಾಡಬಹುದು.

ಶೇಂಗಾ ಬೆಳೆಯಲ್ಲಿ ಧರಣಿ ಮತ್ತು ಡಿ.ಎಚ್.-256 ತಳಿಗಳನ್ನು ಬಿತ್ತನೆ ಮಾಡಬಹುದು. ಕುಸುಬೆ ಬೆಳೆಯಲ್ಲಿ ಎ-1, ಐ.ಎಸ್.ಎಫ್.-764 (ಬರನಿರೋಧಕ, ಸೊರಗು ರೋಗ ಹಾಗೂ ಎಲೆಚುಕ್ಕೆ ರೋಗಕ್ಕೆ ಮಧ್ಯಮ ನಿರೋಧಕಶಕ್ತಿ ಹೊಂದಿರುವ) ಹಾಗೂ ಎ-2020 (ಬರನಿರೋಧಕ ಹಾಗೂ ಹೆಚ್ಚಿನ ದ್ವಿತೀಯ ಕವಲುಗಳನ್ನು ಹೊಂದಿರುವ) ತಳಿಗಳನ್ನು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15 ರವರೆಗೆ ಬಿತ್ತನೆ ಮಾಡಬಹುದು.

ಸೂರ್ಯಕಾಂತಿ ಬೆಳೆಯಲ್ಲಿ ಆರ್.ಎಸ್.ಎಫ್.ಎಚ್.-1887 ಹಾಗೂ ಆರ್.ಎಸ್.ಎಫ್.ಎಚ್.-700 ಸಂಕರಣ ತಳಿಗಳನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿತ್ತನೆ ಮಾಡಬಹುದು. ಗುರೆಳ್ಳು ಬೆಳೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ಬಿತ್ತನೆ ಮಾಡಬಹುದು. ಅಗಸೆ ಬೆಳೆಯಲ್ಲಿ ಎನ್.ಎಲ್.-155 ತಳಿಯನ್ನು ಅಕ್ಟೋಬರ್ 15 ರಿಂದ ನವೆಂಬರ್ 15 ರವರೆಗೆ ಬಿತ್ತನೆ ಮಾಡಬಹುದು.

ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ಮೆಕ್ಕೆಜೋಳದ ಸಂಕರಣ ತಳಿಗಳನ್ನು ಹಾಗೂ ತರಕಾರಿ ಮತ್ತು ಸೊಪ್ಪುಗಳನ್ನೂ ಸಹ ಬೆಳೆಯಬಹುದು.

ಬರ ನಿರೋಧಕತೆಯನ್ನು ಹೆಚ್ಚಿಸಲು ಬಿತ್ತನೆ ಪೂರ್ವದಲ್ಲಿ ಶೇ. 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಬೀಜಗಳನ್ನು ನೆನೆಸಬಹುದು. ಜೋಳದ ಬೀಜಗಳನ್ನು 8 ಗಂಟೆ, ಕುಸುಬೆ ಬೀಜಗಳನ್ನು 12 ಗಂಟೆ ಹಾಗೂ ಕಡಲೆ ಬೀಜಗಳನ್ನು 1 ಗಂಟೆ ನೆನೆಸಿದ ನಂತರ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಬಿತ್ತನೆ ಪೂರ್ವದಲ್ಲಿ ಏಕದಳ ಧಾನ್ಯ ಬೆಳೆಗಳಿಗೆ ಅಜೋಸ್ಪಿರಿಲಮ್, ದ್ವಿದಳ ಧಾನ್ಯ ಬೆಳೆಗಳಿಗೆ ರೈಜೋಬಿಯಮ್ ಹಾಗೂ ಎಲ್ಲಾ ಬೆಳೆಗಳಿಗೆ ಪಿ.ಎಸ್.ಬಿ. ಜೈವಿಕ ಗೊಬ್ಬರಗಳನ್ನು ಬಳಸಿ, ಜೊತೆಗೆ ಟ್ರೆಕೋಡರ್ಮಾ ಜೈವಿಕ ಶಿಲೀಂಧ್ರನಾಶಕವನ್ನು (4 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ) ಬೀಜೋಪಚಾರ ಮಾಡುವುದರಿಂದ ಬೆಳೆಗಳ ಆರಂಭಿಕ ಹಂತದಲ್ಲಿ ಉಂಟಾಗುವ ರೋಗಗಳನ್ನು ತಡೆಗಟ್ಟಬಹುದು. ಅಲ್ಲದೇ, ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಸುಮಾರು ಶೇ. 25 ರಷ್ಟು ಕಡಿಮೆ ಮಾಡಬಹುದು.

ಹೆಚ್ಚಿನ ಮಾಹಿತಿ, ವಿವರಗಳಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular