HomeIndiaಬ್ಯಾಂಕ್ ನೌಕರರ ಮುಷ್ಕರ: ATM ಗಳಲ್ಲಿ ಹಣ ಹಿಂಪಡೆಯಲು ಶುಲ್ಕ ವಿನಾಯಿತಿ

ಬ್ಯಾಂಕ್ ನೌಕರರ ಮುಷ್ಕರ: ATM ಗಳಲ್ಲಿ ಹಣ ಹಿಂಪಡೆಯಲು ಶುಲ್ಕ ವಿನಾಯಿತಿ

ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ 28 ರಿಂದ 30ರವರೆಗೆ ದೇಶ ವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಕೈಗೊಳ್ಳಲಾಗಿದೆ.

ದೀರ್ಘಾವಧಿಯ ಮುಷ್ಕರದಿಂದ ಗ್ರಾಹಕರಿಗೆ ತೊಂದರೆಯಾಗದಂತೆ ಭಾನುವಾರ ಕೂಡ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ ಗ್ರಾಹಕರ ಬ್ಯಾಂಕಿಂಗ್ ಅಗತ್ಯಗಳನ್ನು ಕಾಪಾಡಲು ಸಕ್ರಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಇದರ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ಎಟಿಎಂಗಳಲ್ಲಿ ಹಣ ಹಿಂಪಡೆಯುವ ಶುಲ್ಕಕ್ಕೆ ವಿನಾಯಿತಿ ನೀಡಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ವಿದ್ಯುತ್ ಡ್ರಾ ಮಾಡಿದರೂ ಗ್ರಾಹಕರಿಗೆ ಶುಲ್ಕ ವಿಧಿಸುವುದಿಲ್ಲ. ಸೆಪ್ಟೆಂಬರ್ 28 ರಿಂದ 30ರವರೆಗೆ ಮೂರು ದಿನಗಳ ಮುಷ್ಕರ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಲ್ಕನೇ ಶನಿವಾರ ಮತ್ತು ಭಾನುವಾರ ಕೂಡ ಬ್ಯಾಂಕುಗಳಿಗೆ ರಜೆ ಇರುವುದರಿಂದ ಗ್ರಾಹಕರಿಗೆ ತೊಂದರೆಯಾಗದಂತೆ ಭಾನುವಾರ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಸೆ.28 ರಿಂದ 30ರವರೆಗೆ ಬ್ಯಾಂಕ್ ಮುಷ್ಕರ: ಸೆ.27ರ ಭಾನುವಾರ ಬ್ಯಾಂಕ್ ಸೇವೆ ಲಭ್ಯ

ಬ್ಯಾಂಕ್ ಸಂಘಗಳ ಸಂಯುಕ್ತ ವೇದಿಕೆ(UFBU) ಯು ಇದೇ ತಿಂಗಳ ದಿನಾಂಕ 28 ರಿಂದ 30ರ ವರೆಗೆ ದೇಶ ವ್ಯಾಪಿ ಮುಷ್ಕರ ಘೋಷಿಸಿರುವ ಹಿನ್ನೆಲೆಯಲ್ಲಿ, ಬ್ಯಾಂಕ್ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು, ಇದೇ ಭಾನುವಾರ ದಿನಾಂಕ 27.09.2026 ರಂದು ಎಲ್ಲಾ ರಾಷ್ಟೀಕೃತ, ಹಾಗೂ ಗ್ರಾಮೀಣ ಬ್ಯಾಂಗಳ ಎಲ್ಲಾ ಶಾಖೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲಿವೆ ಎಂದು Bharatiya ರೀಸರ್ವ್ ಬ್ಯಾಂಕ್ RBI ಮೂಲಕ ಕೇಂದ್ರ ಹಣಕಾಸು ಸಚಿವಾಲಯ ಆದೇಶಿಸಿದೆ .

ದಿನಾಂಕ 26 ಮತ್ತು 27 ರಂದು ವಾರದ ರಜೆ ಇರುವುದರಿಂದ ಗ್ರಾಹಕರಿಗೆ ಸುಧೀರ್ಘ ಕಾಲ ತೊಂದರೆ ಆಗದಂತೆ ನೋಡಿಕೊಳ್ಳಲು, ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಮತ್ತು ಗ್ರಾಮೀಣ ಬ್ಯಾಂಕುಗಳ ಶಾಖೆಗಳು ದಿನಾಂಕ 27.09.2026 ರಂದು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು RBI ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಷ್ಟೀಕೃತ ಹಾಗೂ ಗ್ರಾಮೀಣ ಬ್ಯಾಂಕುಗಳ ಶಾಖೆಗಳು ತೆರೆಯಲಿದ್ದು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಮಹಿಳಾ ದಸರಾ – ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ದಸರಾ ಸಮಿತಿಯ ವತಿಯಿಂದ ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಮಹಾನಗರ ಪಾಲಿಕೆ ವ್ಯಾಪ್ತಿಯ ಮಹಿಳೆಯರಿಗಾಗಿ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 01 ರಂದು ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ‘ವೀರಶೈವ ಕಲ್ಯಾಣ ಮಂದಿರ’ದಲ್ಲಿ ಮಹಿಳಾ ದಸರಾ, ಆಟೋಟ ಹಾಗೂ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಗಳ ವಿವರಗಳು:

ದಿನಾಂಕ 30-09-2026: ಸಾಕ್ಷಾತ್ ದೇವಿ ಅಲಂಕಾರ ಸ್ಪರ್ಧೆ(ನಿಯಮಗಳೊಂದಿಗೆ), ವಿವಿಧ ವೈಯಕ್ತಿಕ ಆಟೋಟ ಸ್ಪರ್ಧೆಗಳು, ಅಂತ್ಯಾಕ್ಷರಿ ಹಾಗೂ ಮೆಹಂದಿ ಸ್ಪರ್ಧೆ,

ದಿನಾಂಕ 01-10-2026: ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆ ಹಾಗೂ “ಮಹಾ ನಟಿಯರು” ಶಿವಮೊಗ್ಗ ಮಹಿಳಾ ದಸರಾ 2026 ಸ್ಪರ್ಧೆ ನಡೆಯಲಿವೆ.

“ಮಹಾ ನಟಿಯರು” ಶಿವಮೊಗ್ಗ ಮಹಿಳಾ ದಸರಾ 2026 ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ದಿನಾಂಕ 28-09-2026 ರೊಳಗಾಗಿ ತಮ್ಮ ಹೆಸರುಗಳನ್ನು ಮೊಬೈಲ್ ಸಂಖ್ಯೆಗಳಾದ 9738710364, 8495820268, 9480113313 ಗಳಿಗೆ ನೊಂದಾಯಿಸಿಕೊಳ್ಳಬೇಕಾಗಿ ಕೋರಲಾಗಿದೆ. 

ಈ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮಹಿಳಾ ದಸರಾ ಸಮಿತಿ-2026ರ ಸದಸ್ಯ ಕಾರ್ಯದರ್ಶಿಗಳು ವಿನಂತಿಸಿದ್ದಾರೆ. 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular