ಮಂಗಳೂರು: ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಗೆ ಪೊಲೀಸರು ನೊಟೀಸ್ ನೀಡಿರುವ ಘಟನೆ ನಡೆದುದೀ.
ಅಬ್ದುಲ್ ರಹಿಮಾನ್ ಹತ್ಯೆ ವೇಳೆ ಆರೋಪಿಗಳ ಜೊತೆ ಕಲ್ಲಡ್ಕ ಪ್ರಭಾಕರ್ ಭಟ್ ನಿರಂತರ ಫೋನ್ ಸಂಪರ್ಕದಲ್ಲಿದ್ದರು ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯ ಸಹಾಯಕ ತನಿಖಾಧಿಕಾರಿ ಪಿ.ಕಲೈಮಾರ್ ಅವರು ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ನಾಳೆ ವಿಚಾರಣೆ ನಡೆಯಲಿದೆ.
ನಾಳೆ ಸೆ,26ರಂದು ಕಲ್ಲಡ್ಕದ ಮನೆಯಲ್ಲೇ ಪ್ರಭಾಕರ್ ಭಟ್ ಅವರ ವಿಚಾರಣೆ ನಡೆಯಲಿದೆ. ತನಿಖಾಧಿಕಾರಿ ಪಿ.ಕಲೈಮಾರ್ ಅವರೇ ತನಿಖೆ ನಡೆಸಿವ ಸಾಧ್ಯತೆ ಇದೆ.
ಈ ನಡುವೆ ಕಲ್ಲಡ್ಕ ಪ್ರಭಾಕರ್ ಭಟ್ ಅವರುಗೆ ನೋಟಿಸ್ ನೀಡಿರುವ ಪೊಲೀಸರ ಕ್ರಮಕ್ಕೆ ಆರ್.ಎಸ್.ಎಸ್ ಮುಖಂಡ ಶರಣ್ ಪಂಪ್ ವೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪ್ರಭಾಕರ್ ಭಟ್ ಅವರನ್ನು ಬಂಧಿಸುವ ಯತ್ನ ನಡೆದಿದೆ ಎಂದಿದ್ದಾರೆ.
ಚಾರ್ಜ್ ಶೀಟ್ ಆದ ಮೇಲೆ ಮತ್ತೆ ವಿಚಾರಣೆಗೆ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡುವ ಅಗತ್ಯವೇನಿದೆ? ವಿಚಾರಣೆ ಎಂದು ಕರೆದಿ ಅವರನ್ನು ಬಂಧಿಸಲು ಈ ನೆಪ ಮಾಡಲಾಗುತ್ತಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಕೊಟ್ಟ ನೋಟಿಸ್ ನ್ನು ತನಿಖಾಧಿಕಾರಿಗಳು ತಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಹಿಂದೂ ಕಾರ್ಯಕರ್ಯರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಮೇ ತಿಂಗಳಲ್ಲಿ ಅಬ್ದುಲ್ ರಹಿಮಾನ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ‘ಕೋಕಾ’ (KCOCA) ಕಾಯ್ದೆ ಹಾಗೂ ಭರತ್ ಕುಮ್ಡೇಲು ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ‘ಗೂಂಡಾ ಕಾಯ್ದೆ’ಯನ್ನು ಅಳವಡಿಸಲಾಗಿದೆ.
ಅಂದು ಅಬ್ದುಲ್ ರಹಿಮಾನ್ ಹತ್ಯೆ ವೇಳೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಅಕರ್ ಭಟ್, ಹತ್ಯೆಯ ಆರೋಪಿಗಳ ಜೊತೆ ಫೋನ್ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ವಿಚಾರಣೆಗೆ ನೋಟಿಸ್ ಜಾರಿ ಮಾಡಲಾಗಿದೆ.

