HomeKarnatakaಶಾಲಾ ಮಕ್ಕಳ ಶೂ ಕ್ವಾಲಿಟಿಯಲ್ಲಿ ಸಮಸ್ಯೆಯಿಲ್ಲ; ಸೈಜ್ ನಲ್ಲಿ ಸಮಸ್ಯೆಯಿದೆ ಎಂದ ಸಚಿವ ಮಧು ಬಂಗಾರಪ್ಪ

ಶಾಲಾ ಮಕ್ಕಳ ಶೂ ಕ್ವಾಲಿಟಿಯಲ್ಲಿ ಸಮಸ್ಯೆಯಿಲ್ಲ; ಸೈಜ್ ನಲ್ಲಿ ಸಮಸ್ಯೆಯಿದೆ ಎಂದ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಿರುವ ಶೂಗಳು ಕಳಪೆ ಗುಣಮಟ್ಟಹೊಂದಿದ್ದು, ವಿತರಿಸಿದ ಒಂದೂ ತೀಂಗಳಲ್ಲೇಯೇ ಶೂ ಕಿತ್ತು ಬರುತ್ತಿವೆ ಎಂಬ ಆರೋಪ ಕೇಳಿ ಬತ್ರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶೂಗಳು ಕಳಪೆಯಾಗಿವೆ ಎಂಬುದು ಸುಳ್ಳು ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶೂಗಳಲ್ಲಿ ಕ್ವಾಲಿಟಿ ಸಮಸ್ಯೆಯಲ್ಲ, ಸೈಜ್ ಸಮಸ್ಯೆಯಾಗಿದೆ. ಶೂಗಳ ಕ್ವಾಲಿಟಿ ಸರಿ ಇಲ್ಲದಿದ್ದರೆ ಎಲ್ಲಿ ಏನು ಆಗಿದೆ ಅಂತಾ ಬಂದು ಹೇಳಿ. ಶೂ ಟೆಂಡರ್ ಪಡೀದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಕ್ಷಣ ಟೆಂಡರ್ ರದ್ದು ಮಾಡುತ್ತೇವೆ. ಆ ಅಧಿಕಾರ ನಮಗಿದೆ. ಆದರೆ ಶೂ ಕ್ವಾಲಿಟಿ ಸರಿಯಾಗಿಯೇ ಇದೆ. ಸೈಜ್ ಸ್ವಲ್ಪ ಹೆಚ್ಚು ಕಮ್ಮಿಯಾಗಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದರು.

ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟ ಕಳಪೆ ಎಂಬುದು ಸುಳ್ಳು. ಆದರೆ ಸೈಜ್‌ನಲ್ಲಿ ವ್ಯತ್ಯಾಸವಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಎರಡು ದಿನಗಳ ಮುನ್ನವೇ ತಾವು ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು. ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಯಾವ ಮಕ್ಕಳಿಗೆ ಸೈಜ್‌ ಸಮಸ್ಯೆ ಇದೆಯೋ ಅಂತಹ ಮಕ್ಕಳಿಗೆ ಬೇರೆ ಶೂ ಮತ್ತು ಸಾಕ್ಸ್‌ ವಿತರಿಸುವಂತೆ ಸೂಚಿಸಲಾಗಿದೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.

ಇದೇ ವೇಳೆ ಶಿಕ್ಷಕರಿಗಾಗಿ ಪ್ರತ್ಯೇಕ ವಿಧೇಯಕ ಮಂಡಿಸುವುದಾಗಿ ತಿಳಿಸಿದರು. ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ, ಶಿಕ್ಷಕರನ್ನು ಅನ್ಯ ಕೆಲಸಗಳಿಗೆ ಬಳಸಿಕೊಳ್ಳುವುದು ನಿಲ್ಲಬೇಕು. ಇದಕ್ಕಾಗಿ ಹೊಸ ವಿಧೇಯಕ ಸಿದ್ಧಪಡಿಸುತ್ತಿದ್ದೇನೆ. ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಧೇಯಕವನ್ನು ಹೇಗೆ ರೂಪಿಸಬೇಕು ಎಂಬುದರ ಕುರಿತು ಚರ್ಚಿಸಿದ್ದೇನೆ. ಸಚಿವ ಸಂಪುಟದ ಮುಂದೆ ತಂದು, ಮುಂದಿನ ದಿನಗಳಲ್ಲಿ ಅಧಿವೇಶನದಲ್ಲಿ ಬಿಲ್‌ ಜಾರಿಗೆ ತರುವ ಪ್ರಯತ್ನ ಮಾಡುತ್ತೇವೆ ಎಂದರು.

ಚುನಾವಣೆ ಕಾರ್ಯಕ್ಕೆ ಕೆಲವೊಮ್ಮೆ ಸರ್ಕಾರಿ ನೌಕರರನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಬಹುದು. ಆದರೆ ಶಾಲೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಿಕ್ಷಕರನ್ನು ನಿರಂತರವಾಗಿ ಎಸ್‌ಐಆರ್‌ನಂತಹ ಸರ್ವೇ ಕಾರ್ಯಗಳಿಗೆ ನಿಯೋಜಿಸುವುದರಿಂದ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯ ಸರ್ಕಾರದ ವತಿಯಿಂದ ವಿವಿಧ ಸಮೀಕ್ಷೆಗಳನ್ನು ನಡೆಸಿದ್ದೇವೆ. ಆದರೆ ಎಲ್ಲಿಯೂ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದೇವೆ. ಈಗ ಎಸ್‌ಐಆರ್‌ನಿಂದ ಮಾತ್ರ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ಯಾವುದೇ ಸರ್ಕಾರಿ ನೌಕರರನ್ನು ಕೇಳಿದರೂ ಎಸ್‌ಐಆರ್‌ ಕೆಲಸದಲ್ಲಿದ್ದೇವೆ ಎಂಬ ಉತ್ತರ ಬರುತ್ತಿದೆ. ಹೀಗಾದರೆ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ಎಂದು ಪ್ರಶ್ನಿಸಿದರು.

ಶಾಲಾ ಶಿಕ್ಷಕರ ಕೊರತೆ ಮತ್ತು ಎಸ್‌ಐಆರ್‌ ಕರ್ತವ್ಯದಿಂದ ಬೋಧನೆಗೆ ಆಗುತ್ತಿರುವ ಅಡಚಣೆ ಕುರಿತು ಇತ್ತೀಚೆಗೆ CJP ಕೂಡ ಗಮನ ಸೆಳೆದಿತ್ತು. ಆ ಸಂಸ್ಥೆಯ ಪ್ರತಿನಿಧಿಗಳು ರಾಜ್ಯದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ನಿಯೋಜನೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದರು. CJPಯ ಆಶುತೋಷ್‌ ರಾಂಕಾ ಅವರು ತಮ್ಮನ್ನು ಭೇಟಿ ಮಾಡಿ ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಶಿಕ್ಷಕರನ್ನು ಎಸ್‌ಐಆರ್‌ ಕಾರ್ಯದಿಂದ ಹೊರಗಿಡುವಂತೆ ಮನವಿ ಮಾಡಿದ್ದಾರೆ ಎಂದು ಸಚಿವರು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular